ದಾವಣಗೆರೆ: ಬಿಜೆಪಿ ಜಿಲ್ಲಾ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ ಹಾಗೂ ವಿವಿಧ ಪ್ರಮುಖ ಜವಾಬ್ದಾರಿಗಳಿಗೆ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ನಿಯುಕ್ತಿಗೊಳಿಸಲಾಗಿದೆ. ಮುಂಬರುವ ರಾಜಕೀಯ ವಿದ್ಯಮಾನಗಳು ಹಾಗೂ ಸಂಘಟನಾ ದೃಷ್ಟಿಯಿಂದ ಈ ಮಹತ್ವದ ಪುನಾರಚನೆ ಮಾಡಲಾಗಿದ್ದು, ಪ್ರಮುಖ ನಾಯಕರಿಗೆ ಮಣೆ ಹಾಕಲಾಗಿದೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಅಣ್ಣೇಶ್ ಐರಣಿ, ಲಕ್ಷ್ಮಣ ಹಾಗೂ ಧನಂಜಯ ಕಡ್ಲೆಬಾಳು ಅವರಿಗೆ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾ ಖಜಾಂಚಿಯಾಗಿ ದಾವಣಗೆರೆ ಉತ್ತರದ ವಿಶ್ವಾಸ್ ಅವರಿಗೆ ಹೊಣೆಗಾರಿಕೆ ವಹಿಸಲಾಗಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕ ನಾಗರಾಜ್ ಮೆಳ್ಳಕಟ್ಟೆ ಅವರನ್ನು ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇವರೊಂದಿಗೆ ಜಿಲ್ಲೆಯಾದ್ಯಂತ ಪಕ್ಷ ಮತ್ತು ಸಂಘಟನೆಯನ್ನು
ಬಲಪಡಿಸಲು ವಿವಿಧ ವಿಧಾನಸಭಾ ಕ್ಷೇತ್ರಗಳ ಪ್ರಮುಖರನ್ನು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ವಿವಿಧ ಜವಾಬ್ದಾರಿಗಳ ವಿವರ:
ಜಿಲ್ಲಾ ಉಪಾಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಬಿರಾದಾರ್ (ದಾವಣಗೆರೆ ದಕ್ಷಿಣ), ಬಸವರಾಜ್ (ಚನ್ನಗಿರಿ), ಲಿಂಗರಾಜು ಆಲೂರ್, ಅನಿಲ್ ನಾಯಕ್ (ಮಾಯಕೊಂಡ), ಮಂಜುನಾಥ (ಹೊನ್ನಾಳಿ), ಪ್ರಕಾಶ್ ಇ.ಎನ್. (ಜಗಳೂರು), ಅಶ್ವಿನಿ ಕೃಷ್ಣ (ಹರಿಹರ) ಮತ್ತು ವೀಣಾ ನಂಜಪ್ಪ (ದಾವಣಗೆರೆ ಉತ್ತರ) ಅವರನ್ನು ನಿಯೋಜಿಸಲಾಗಿದೆ.
ಮಹಿಳಾ ಪ್ರಾತಿನಿಧ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜಯಲಕ್ಷ್ಮಿ ಮಹೇಶ್, ಕಮಲಾ ಹರೀಶ್, ಶಾಂತಾ ಸಿ.ಹೆಚ್, ಶೋಭಾ ಧರಣೇಶ್ ಹಾಗೂ ಭಾಗ್ಯ ಪಿಸಾಳೆ ಅವರು ಜಿಲ್ಲಾ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
- Davanagere new district president
- DAVANAGERE NEWS
- Davanagere office bearers list
- Davanagere political updates
- Davanagere Politics
- District committee members davanagere
- Karnataka politics latest
- Mayakonda Constituency
- Nagaraj Mellakatte
- ಕರ್ನಾಟಕ ರಾಜಕೀಯ
- ಜಿಲ್ಲಾ ಪದಾಧಿಕಾರಿಗಳ ಪಟ್ಟಿ
- ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರು
- ದಾವಣಗೆರೆ ನೂತನ ಜಿಲ್ಲಾಧ್ಯಕ್ಷರು
- ದಾವಣಗೆರೆ ರಾಜಕೀಯ
- ದಾವಣಗೆರೆ ಸುದ್ದಿ
- ನಾಗರಾಜ್ ಮೆಳ್ಳಕಟ್ಟೆ
- ಮಾಯಕೊಂಡ ವಿಧಾನಸಭಾ ಕ್ಷೇತ್ರ
- ರಾಜಕೀಯ ಸಂಘಟನೆ





Leave a comment