ದಾವಣಗೆರೆ: ದಾವಣಗೆರೆಯ ಕೆಟಿಜೆ ನಗರದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದೇಹದಾರ್ಢ್ಯ ಪಟು ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
26 ವರ್ಷದ ಸುಶೀಲ್ ಕುಮಾರ್ ಮೃತಪಟ್ಟ ದುರ್ದೈವಿ. ಜಿಮ್ ಮುಗಿಸಿ ಮನೆಗೆ ಬಂದಿದ್ದ ಸುಶೀಲ್ ಕುಮಾರ್ ಅವರು ಇದ್ದಕ್ಕಿದ್ದಂತೆ ಮನೆ ಬಳಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಬಾಡಿ ಬ್ಯುಲ್ಡಿಂಗ್ ನಲ್ಲಿ ಅಪಾರ ಸಾಧನೆ ಮಾಡುವ ಹೆಬ್ಬಯಕೆ ಹೊಂದಿದ್ದ ಸುಶೀಲ್ ಕುಮರ್ ಕಠಿಣ ಅಭ್ಯಾಸ ನಡೆಸುತ್ತಿದ್ದರು. ನಿತ್ಯವೂ ಜಿಮ್ ಗೆ ಹೋಗಿ ಬರುತ್ತಿದ್ದರು. ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದರು. ಆರೋಗ್ಯವಂತರಾಗಿಯೇ ಇದ್ದ ಸುಶೀಲ್ ಕುಮಾರ್ ಅವರು ಹೃದಯಘಾತಕ್ಕೆ ಬಲಿಯಾಗಿರುವುದು ಕುಟುಂಬಸ್ಥರು ಮತ್ತು ಸ್ನೇಹಿತರಲ್ಲಿ ಆಘಾತ ತಂದಿದೆ.
ಸುಶೀಲ್ ಕುಮಾರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯುವಜನರಲ್ಲಿ ಆತಂಕ:
ಇನ್ನು ಜಿಮ್, ದೇಹ ದಂಡಿಸುವುದೂ ಸೇರಿದಂತೆ ದೇಹ ಕಟ್ಟುಮಸ್ತಾಗಿಟ್ಟುಕೊಳ್ಳಲು ಕಠಿಣ ಅಭ್ಯಾಸ ನಡೆಸುತ್ತಾರೆ. ಕೇವಲ 26 ವರ್ಷಕ್ಕೆ ಹೃದಯಘಾತವಾಗಿ ಸುಶೀಲ್ ಕುಮಾರ್ ಮೃತಪಟ್ಟಿರುವುದರಿಂದ ಯುವಕರಲ್ಲಿ ಆತಂಕ ಶುರುವಾಗಿದೆ. ದೇಹವನ್ನು ದಂಡಿಸುವುದು, ಕಟ್ಟುಮಸ್ತಾಗಿ ಇಟ್ಟುಕೊಳ್ಳಲು ಅಭ್ಯಾಸ ಮಾಡಿದರೆ ಇಂಥ ಸಮಸ್ಯೆ ಎದುರಾಗುತ್ತದೆಯಾ ಎಂಬ ಭಯ ಶುರುವಾಗಿದೆ.
ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗಿ (Low BP) ಉಂಟಾದ ಹಠಾತ್ ಹೃದಯಾಘಾತವೇ (Cardiac Arrest) ಈ ಸಾವಿಗೆ ಪ್ರಾಥಮಿಕ ಕಾರಣ ಇರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಮೃತ ಸುಶೀಲ್ ಕುಮಾರ್ ಅವರ ತಾಯಿ ದೇವಮ್ಮ ಅವರು ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದು, “ಯಾವಾಗಲೂ ಲವಲವಿಕೆಯಿಂದ ಕಸರತ್ತು ಮಾಡುತ್ತಿದ್ದ ನನ್ನ ಮಗ ಹೀಗೆ ನಮ್ಮನ್ನು ಬಿಟ್ಟು ಹೋಗುತ್ತಾನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ, ಮುಂದೆ ನನಗೆ ಆಸರೆ ಯಾರು?” ಎಂದು ಗೋಳಾಡುತ್ತಿರುವುದು ನೆರೆಹೊರೆಯವರ ಕಣ್ಣಲ್ಲಿ ನೀರು ತರಿಸಿದೆ.
- Davanagere bodybuilder death
- Davanagere gym heart attack
- Davanagere KTJ nagar news
- Davanagere latest news today
- Gym heart attack reasons Kannada
- Sushil Kumar bodybuilder
- Sushil Kumar Davanagere
- Young bodybuilder dies of cardiac arrest
- ಕೆಟಿಜೆ ನಗರ ದಾವಣಗೆರೆ
- ಜಿಮ್ ಮುಗಿಸಿ ಯುವಕ ಸಾವು
- ದಾವಣಗೆರೆ ಜಿಮ್ ಸಾವು
- ದಾವಣಗೆರೆ ಬಾಡಿ ಬಿಲ್ಡರ್ ಸಾವು
- ದಾವಣಗೆರೆ ಬ್ರೇಕಿಂಗ್ ನ್ಯೂಸ್
- ಬಾಡಿಬಿಲ್ಡರ್ ಸುಶೀಲ್ ಕುಮಾರ್ ನಿಧನ
- ಯುವಕರಲ್ಲಿ ಹೃದಯಾಘಾತ ಕಾರಣ
- ಸುಶೀಲ್ ಕುಮಾರ್ ಹೃದಯಾಘಾತ





Leave a comment