ದಾವಣಗೆರೆ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಸೇರಿದಂತೆ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಾಗಿದ್ದು ಮುಂಗಾರು ಹಂಗಾಮಿನಲ್ಲಿ ಶೇ 40 ರಷ್ಟು ಮಳೆಯ ಕೊರತೆಯಾಗಿದೆ.
ಪೂರ್ವ ಮುಂಗಾರು ಹಂಗಾಮು ಜನವರಿಯಿಂದ ಮೇ ವರೆಗೆ 102.2 ಮಿ.ಮೀ ವಾಡಿಕೆಗೆ 131.6 ರಷ್ಟು ಮಳೆಯಾಗಿದೆ. ಆದರೆ ಮುಂಗಾರು ಹಂಗಾಮು ಜೂನ್ ನಿಂದ ಸೆಪ್ಟೆಂಬರ್ ವರೆಗಿನ 387.4 ರ ವಾಡಿಕೆಗೆ 193.20 ಮಿ.ಮೀ ಮಳೆಯಾಗಿದ್ದು ಶೇ 40 ರಷ್ಟು ಕೊರತೆಯಾಗಿದೆ.
ಜೂನ್ ತಿಂಗಳಲ್ಲಿ 79 ಮಿ.ಮೀ ವಾಡಿಕೆಗೆ 36.9, ಜುಲೈನಲ್ಲಿ 108 ಮಿ.ಮೀ ವಾಡಿಕೆಗೆ 66.20, ಆಗಸ್ಟ್ ನಲ್ಲಿ 99 ಮಿ.ಮೀ ವಾಡಿಕೆಗೆ 78.90, ಸೆಪ್ಟೆಂಬರ್‌ನಲ್ಲಿ 108 ಮಿ.ಮೀ ವಾಡಿಕೆಗೆ ಇಲ್ಲಿಯವರೆಗೆ 9.1 ಮಿ.ಮೀ ಮಳೆಯಾಗಿ ಶೇ 75 ರಷ್ಟು ಮಳೆಯ ಕೊರತೆಯಾಗಿದ್ದು ಬೆಳೆಗಳು ಕೆಲವು ನಷ್ಟವಾದರೆ, ಕೆಲವು ಬೆಳೆಗಳು ತೀವ್ರ ಬಿಸಿಲಿಗೆ ಬಾಡುತ್ತಿವೆ.
ಹಿಂಗಾರು ಹಂಗಾಮು ಅಕ್ಟೋಬರ್ ನಿಂದ ಆರಂಭವಾಗಲಿದ್ದು ಅಕ್ಟೋಬರ್ ತಿಂಗಳಲ್ಲಿ 109.9 ಮಿ.ಮೀ, ನವೆಂಬರ್ 44 ಮಿ.ಮೀ ಮತ್ತು ಡಿಸೆಂಬರ್ 7.6 ಮಿ.ಮೀ ವಾಡಿಕೆ ಮಳೆಯ ಪ್ರಮಾಣವಿರುತ್ತದೆ.
ತಾಲ್ಲೂಕುವಾರು ಮಳೆಯ ವಿವರ;
ಚನ್ನಗಿರಿ ತಾಲ್ಲೂಕಿನಲ್ಲಿ ಜನವರಿಯಿಂದ ಸೆಪ್ಟೆಂಬರ್ 16ರವರೆಗಿನ 575.7 ಮಿ.ಮೀ ವಾಡಿಕೆಗೆ 359.8 ಮಿ.ಮೀ ಮಳೆಯಾಗಿದ್ದು ಶೇ 38 ರಷ್ಟು ಕೊರತೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 393.1 ಮಿ.ಮೀ ವಾಡಿಕೆಗೆ 342.1 ಮಿ.ಮೀ ಮಳೆಯಾಗಿ ಶೇ 13 ರಷ್ಟು ಕೊರತೆಯಾಗಿದೆ.
ಹರಿಹರ ತಾಲ್ಲೂಕಿನಲ್ಲಿ 389 ಮಿ.ಮೀ ವಾಡಿಕೆಗೆ 306.8 ಮಿ.ಮೀ ಮಳೆಯಾಗಿದ್ದು ಶೇ 21 ರಷ್ಟು ಕೊರತೆಯಾಗಿದೆ.
ಹೊನ್ನಾಳಿ ತಾಲ್ಲೂಕಿನ 406.3 ಮಿ.ಮೀ ವಾಡಿಕೆಗೆ 254.8 ಮಿ.ಮೀ ಮಳೆ ಬಂದಿದ್ದು ಶೇ 37 ರಷ್ಟು ಕೊರತೆಯಾಗಿದೆ.
ಜಗಳೂರು ತಾಲ್ಲೂಕಿನಲ್ಲಿ 324 ಮಿ.ಮೀ ವಾಡಿಕೆಗೆ 294.6 ಮಿ.ಮೀ ಮಳೆಯಾಗಿ ಶೇ 9 ರಷ್ಟು ಕೊರತೆಯಾಗಿದೆ.
ನ್ಯಾಮತಿ ತಾಲ್ಲೂಕಿನಲ್ಲಿ 585.5 ಮಿ.ಮೀ ವಾಡಿಕೆಗೆ 369.1 ಮಳೆಯಾಗಿ ಶೇ 24 ರಷ್ಟು ಕೊರತೆಯಾಗಿದೆ.
ಬಿತ್ತನೆ, ಬೆಳವಣಿಗೆ ಕಾಲ ಜುಲೈ, ಆಗಸ್ಟ್ ಮತ್ತು ಕಾಯಿಕಟ್ಟುವ ಕಾಲ ಸೆಪ್ಟೆಂಬರ್‌ನಲ್ಲಿನ ಮಳೆಯ ಪ್ರಮಾಣದ ಅವಲೋಕನ:
ಚನ್ನಗಿರಿ ತಾಲ್ಲೂಕಿನಲ್ಲಿ ಜುಲೈ ನಲ್ಲಿ 168 ಮಿ.ಮೀ ವಾಡಿಕೆಗೆ 80.3, ಆಗಸ್ಟ್ 140.5 ಮಿ.ಮೀ ವಾಡಿಕೆಗೆ 98.8, ಸೆಪ್ಟೆಂಬರ್ ನಲ್ಲಿ 16 ರವರೆಗೆ 38.7 ಮಿ.ಮೀ ವಾಡಿಕೆಗೆ 16.7, ದಾವಣಗೆರೆ ತಾಲ್ಲೂಕಿನಲ್ಲಿ ಜುಲೈ 84.9 ಮಿ.ಮೀ ವಾಡಿಕೆಗೆ 65.6, ಆಗಸ್ಟ್ 92.5 ವಾಡಿಕೆಗೆ 97.5, ಸೆಪ್ಟಂಬರ್ ನಲ್ಲಿ 40 ಕ್ಕೆ 4.9, ಹರಿಹರ ಜುಲೈನಲ್ಲಿ 86.6 ವಾಡಿಕೆಗೆ 58.2, ಆಗಸ್ಟ್ 81.2 ಕ್ಕೆ 71, ಸೆಪ್ಟೆಂಬರ್ 31.6 ಕ್ಕೆ 3.2, ಹೊನ್ನಾಳಿ ಜುಲೈ 101 ಕ್ಕೆ 48, ಆಗಸ್ಟ್ 81.7 ಕ್ಕೆ 77.9, ಸೆಪ್ಟೆಂಬರ್ 29.1 ರಲ್ಲಿ 6.9, ಜಗಳೂರು ಜುಲೈ 66.2 ಕ್ಕೆ 57.2, ಆಗಸ್ಟ್ನಲ್ಲಿ 69.7 ರಲ್ಲಿ 40.9, ಸೆಪ್ಟೆಂಬರ್ ನಲ್ಲಿ 31.6 ಕ್ಕೆ 8.7, ನ್ಯಾಮತಿ ತಾಲ್ಲೂಕಿನಲ್ಲಿ ಜುಲೈನಲ್ಲಿ 179.8 ಮಿ.ಮೀ ವಾಡಿಕೆಗೆ 79.9, ಆಗಸ್ಟ್ನಲ್ಲಿ 136.4 ರ ವಾಡಿಕೆಗೆ 102.3, ಸೆಪ್ಟೆಂಬರ್ ನಲ್ಲಿ 33.3 ಮಿ.ಮೀ ವಾಡಿಕೆಗೆ 7.7 ಮಿ.ಮೀ ವಾಸ್ತವ ಮಳೆಯಾಗಿದೆ.
ಜಿಲ್ಲೆಯಲ್ಲಿ ಬಿತ್ತನೆಯಾದ ಪ್ರಮುಖ ಬೆಳೆಗಳ ವಿವರ; ಮೆಕ್ಕೆಜೋಳ 1,27,245 ಹೆಕ್ಟೇರ್ ಗುರಿಯಲ್ಲಿ 61976 ಹೆ.ಬಿತ್ತನೆ ಮಾಡಲಾಗಿದೆ. ಭತ್ತ 63800 ಹೆ. ಗುರಿಯಲ್ಲಿ 14503 ಹೆ. ಬಿತ್ತನೆ ಮಾಡಲಾಗಿದೆ. ರಾಗಿ 13659 ಹೆ. ಗುರಿಯಲ್ಲಿ 37224 ಹೆ. ಬಿತ್ತನೆ ಮಾಡಲಾಗಿದೆ. ತೊಗರಿ 2500 ಹೆಕ್ಟೇರ್‌ಗೆ 3413 ಹೆ. ಬಿತ್ತನೆಯಾಗಿದೆ. ಶೇಂಗಾ 3315 ಹೆ. ಗುರಿಗೆ 2121 ಹೆ. ಬಿತ್ತನೆ ಮಾಡಲಾಗಿದೆ. ಹತ್ತಿ 1120 ಹೆ. ಗುರಿಗೆ 864 ಹೆ. ಬಿತ್ತನೆ, ಸೋಯಾಬಿನ್ 75 ಹೆ. ಗುರಿಗೆ 802 ಹೆ. ಬಿತ್ತನೆ ಹಾಗೂ ಇತರೆ ಬೆಳೆಗಳ 1939 ಹೆಕ್ಟೇರ್ ಬಿತ್ತನೆಗೆ 1995 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಜಿಯಾವುಲ್ಲಾ ತಿಳಿಸಿದ್ದಾರೆ.
- Channagiri drought news
- Davanagere Agriculture Department
- Davanagere crop damage
- Davanagere rain deficit
- Karnataka Drought Crisis
- Maize and Paddy sowing status
- Monsoon rainfall shortage Karnataka
- ಕೃಷಿ ವರದಿ
- ಚನ್ನಗಿರಿ ಮಳೆ ವರದಿ
- ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ.
- ದಾವಣಗೆರೆ ಮಳೆ ಕೊರತೆ
- ದಾವಣಗೆರೆ ರೈತರ ಸಂಕಷ್ಟ
- ಬೆಳೆ ಹಾನಿ
- ಭತ್ತ ಬಿತ್ತನೆ
- ಮುಂಗಾರು ಹಂಗಾಮು
- ಮೆಕ್ಕೆಜೋಳ ಬೆಳೆ





Leave a comment