ದಾವಣಗೆರೆ: ಲಯನ್ಸ್ ಕ್ಲಬ್ ದಾವಣಗೆರೆ 2026-2027ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸದಸ್ಯರುಗಳ ಪ್ರಮಾಣ ವಚನ ಬೋಧನಾ ಸಮಾರಂಭವನ್ನು ಜುಲೈ 26ರ ಭಾನುವಾರ ಸಂಜೆ 6 ಗಂಟೆಗೆ ನಗರದ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಲಯನ್ಸ್ ನ ಪ್ರಥಮ ಮಹಿಳೆ ಮಂಜುಳ ಮಹಾಂತೇಶ್ ಒಣರೊಟ್ಟಿ ಉದ್ಘಾಟಿಸಲಿದ್ದಾರೆ. ಪ್ರತಿಷ್ಠಾಪನಾ ಅಧಿಕಾರಿಯಾಗಿ ಲಯನ್ಸ್ ಮಾಜಿ ಜಿಲ್ಲಾ ರಾಜ್ಯಪಾಲ ಎಂ. ಕೆ. ಭಟ್ ಭಾಗವಹಿಸಲಿದ್ದು, ಶಾಸಕ ಸಮರ್ಥ ಶಾಮನೂರು ಮತ್ತು ಲಯನ್ಸ್ ಜಿಲ್ಲಾ ಗವರ್ನರ್ ಆರ್. ಜಿ. ಶ್ರೀನಿವಾಸಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ದಿನಾಂಕ ಮತ್ತು ಸಮಯ: ಜುಲೈ 26, ಭಾನುವಾರ — ಸಂಜೆ 6:00 ಗಂಟೆಗೆ
ಸ್ಥಳ: ಲಯನ್ಸ್ ಭವನ, ದಾವಣಗೆರೆ
ಕಾರ್ಯಕ್ರಮದ ವಿವರಗಳು
ಉದ್ಘಾಟನೆ: ಮಂಜುಳ ಮಹಾಂತೇಶ್ ಒಣರೊಟ್ಟಿ (ಲಯನ್ಸ್ ಪ್ರಥಮ ಮಹಿಳೆ)
ಪ್ರತಿಷ್ಠಾಪನಾ ಅಧಿಕಾರಿ: ಎಂ.ಕೆ. ಭಟ್ (ಮಾಜಿ ಲಯನ್ಸ್ ಜಿಲ್ಲಾ ಗವರ್ನರ್)
ಮುಖ್ಯ ಅತಿಥಿಗಳು:
ಸಮರ್ಥ ಶಾಮನೂರು (ಶಾಸಕರು)
ಆರ್. ಜಿ. ಶ್ರೀನಿವಾಸಮೂರ್ತಿ (ಲಯನ್ಸ್ ಜಿಲ್ಲಾ ಗವರ್ನರ್)
ಪ್ರಮಾಣ ವಚನ ಬೋಧಕರು (ನೂತನ ಸದಸ್ಯರಿಗೆ): ಡಾ. ಬಿ.ಎಸ್. ನಾಗಪ್ರಕಾಶ್ (ಮಾಜಿ ಲಯನ್ಸ್ ಜಿಲ್ಲಾ ಗವರ್ನರ್)
ಗೌರವ ಅತಿಥಿಗಳು: ಕೆ. ಶಿವಮೂರ್ತಿ (ಕ್ಯಾಬಿನೆಟ್ ಕಾರ್ಯದರ್ಶಿ), ವೆಂಕಟಾಚಲಂ (ಖಜಾಂಚಿ), ನೀಲಿ ಉಮೇಶ್ (ವಲಯ ಅಧ್ಯಕ್ಷರು)
ಅಧ್ಯಕ್ಷತೆ: ಎನ್.ಸಿ. ಬಸವರಾಜ್ (ನಿಕಟಪೂರ್ವ ಅಧ್ಯಕ್ಷರು)
ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಮಹಾಂತೇಶ್ ವಿ. ಒಣರೊಟ್ಟಿ
ಕಾರ್ಯದರ್ಶಿ: ಕೆ.ಎಸ್. ಸಂತೋಷ್
ಖಜಾಂಚಿ: ಬಿ.ರಮೇಶ್
ಸಹ ಕಾರ್ಯದರ್ಶಿ: ಮುರುಗೇಶ್ ಬಣಕಾರ್
ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್ ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಅತಿಥಿಯಾಗಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಕೆ. ಶಿವಮೂರ್ತಿ, ಕ್ಯಾಬಿನೆಟ್ ಖಜಾಂಚಿ ವೆಂಕಟಾಚಲಂ, ವಲಯ ಅಧ್ಯಕ್ಷ ನೀಲಿ ಉಮೇಶ್ ಪಾಲ್ಗೊಳ್ಳಲಿದ್ದು, ನಿಕಟಪೂರ್ವ ಅಧ್ಯಕ್ಷ ಎನ್.ಸಿ. ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ನೂತನ ಅಧ್ಯಕ್ಷರಾಗಿ ಮಹಾಂತೇಶ್ ವಿ. ಒಣರೊಟ್ಟಿ, ಕಾರ್ಯದರ್ಶಿ ಕೆ.ಎಸ್. ಸಂತೋಷ್ , ಖಜಾಂಚಿ ಬಿ.ರಮೇಶ್, ಸಹ ಕಾರ್ಯದರ್ಶ ಮುರುಗೇಶ್ ಬಣಕಾರ್ ಸೇರಿದಂತೆ ನೂತನ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
- DAVANAGERE NEWS
- Installation Ceremony 2026
- Lions Bhavan Davanagere
- Lions Club Davanagere
- Lions District 317
- Mahantesh V Onarotti
- New Office Bearers Oath
- Samarth Shamanur
- ದಾವಣಗೆರೆ ಲಯನ್ಸ್ ಕ್ಲಬ್ 2026-27
- ದಾವಣಗೆರೆ ಸುದ್ದಿ
- ನೂತನ ಪದಾಧಿಕಾರಿಗಳ ಪದಗ್ರಹಣ
- ಪ್ರಮಾಣ ವಚನ ಸ್ವೀಕಾರ
- ಮಹಾಂತೇಶ್ ಒಣರೊಟ್ಟಿ
- ಲಯನ್ಸ್ ಕ್ಲಬ್ ದಾವಣಗೆರೆ
- ಲಯನ್ಸ್ ಭವನ ದಾವಣಗೆರೆ
- ಸಮರ್ಥ ಶಾಮನೂರು





Leave a comment