ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಆಟೋ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

On: October 23, 2023 11:52 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:23-10-2023

ದಾವಣಗೆರೆ (Davanagere): ಜಿ ಬಿ ವಿನಯ್ ಕುಮಾರ್ ಅಭಿಮಾನಿ ಬಳಗದಿಂದ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.೭೦ ಕ್ಕೂ ಹೆಚ್ಚು ಅಂಕ ಪಡೆದ ನಗರದ ಆಟೋ ಮತ್ತು ಗೂಡ್ಸ್ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದೆ.

READ ALSO THIS STORY:

Davanagere:ಅಧಿಕಾರ, ಸಂಪತ್ತು ವಿಕೇಂದ್ರೀಕರಣವಾಗಿ ಜನಸಾಮಾನ್ಯರ ಏಳಿಗೆಗೆ ಉಪಯೋಗವಾಗಬೇಕು: ವಿನಯ್ ಕುಮಾರ್ ಈ ಮಾತಿನ ಅರ್ಥವೇನು…?

ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿ, ಆಧಾರ್ ಕಾರ್ಡ್ ಆಟೋ ಡ್ರೈವರ್ ತಮ್ಮ ಡಿ.ಎಲ್ ಜೆರಾಕ್ಸ್ ಪ್ರತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅ.30 ರೊಳಗಾಗಿ ಎಸ್ ಎಸ್ ಲೇ ಔಟ್ ನ 10 ನೇ ಕ್ರಾಸ್ ನಲ್ಲಿರುವ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ‌. ಹೆಚ್ಚಿನ ಮಾಹಿತಿಗಾಗಿ ಮೊ:7676680136, 93534-52348 ಇಲ್ಲಿ ಸಂಪರ್ಕಿಸಬಹುದಾಗಿದೆ.

ಸಂಘದ ಜಮೀನು ಕಬಳಿಸಲು ಯತ್ನ: ಎಂ. ರಾಜಾಸಾಬ್ ಆರೋಪ:

ದಾವಣಗೆರೆ: ಇಲ್ಲಿನ ದೊಡ್ಡ ಬೂದಾಳ್‌ನಲ್ಲಿರುವ 8 ಎಕರೆ 23 ಗುಂಟೆ ಜಮೀನನ್ನು ದಾವಣಗೆರೆ ಬೀಡಿ ಕಾರ್ಮಿಕರ ಹಾಗೂ ಅಲ್ಪಸಂಖ್ಯಾತರ ವಿವಿಧೋದ್ದೇಶ ಕಲ್ಯಾಣ ಸಹಕಾರ ಸಂಘ ನಿಯಮಿತದ ಹೆಸರಿನಲ್ಲಿ ಸದಸ್ಯರಿಗೆ ಆರ್‌ಸಿಸಿ ಮನೆ ಮತ್ತು ನಿವೇಶನ ಮಾಡಿ ಹಂಚಿಕೆ ಮಾಡುವ ಉದ್ದೇಶದಿಂದ ಸಂಘದ ಸದಸ್ಯರ ಹೂಡಿಕೆಯ ಹಣದಿಂದ ಖರೀದಿಸಲಾಗಿದೆ. ಈಗ ಈ ಜಮೀನಿನ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜಮೀನು ಉಳಿಸಿಕೊಡಬೇಕೆಂದು ಸಂಘದ ಅಧ್ಯಕ್ಷ ಎಂ. ರಾಜಾಸಾಬ್ ಕೋರಿದ್ದಾರೆ.

ಸಂಘದ ಸದಸ್ಯರ ಹೂಡಿಕೆಯ ಹಣದಿಂದ ನಮ್ಮ ಸಂಘದ ಹೆಸರಿನಲ್ಲಿ ಖರೀದಿಸಿ, ಸಾಲ ಪಡೆಯಲು ತಹಶೀಲ್ದಾರ ದಾವಣಗೆರೆ ಇವರ ಹೆಸರಿಗೆ ಜಮೀನನ್ನು ಆಧಾರ ಮಾಡಿರುತ್ತೇವೆ. ಆದರೆ ಆಸ್ತಿಯನ್ನು ಕಬಳಿಸಲು ಪಹಣಿಯನ್ನು ಆಶ್ರಯ ಯೋಜನೆ ಸಮಿತಿ ದಾವಣಗೆರೆ ಇವರ ಹೆಸರಿಗೆ ವರ್ಗಾವಣೆ ಮಾಡಿಸಿರುವುದು ಕಾನೂನು ಬಾಹಿರವಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ನಿಯೋಗ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಟಿ.ಅಸ್ಗರ್, ಕೋರ್ಟ್ ಅಕ್ಬರ್, ಖಾಸಿಂ ಸಾಬ್, ಫೈರೋಜ್, ರಿಯಾಜ್, ಇಬ್ರಾಹಿಂ, ಮಹಮ್ಮದ್ ಅಲಿ ಇತರರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment