ದಾವಣಗೆರೆ: ಜಿಲ್ಲೆಯಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಭದ್ರತೆಗೆ ಆತಂಕ ತಂದೊಡ್ಡುವ ಘಟನೆ ಬೆಳಕಿಗೆ ಬಂದಿದ್ದು, ಹರಿಹರದಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮತ್ತೊಬ್ಬ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಯಾರು ಈ ಶಂಕಿತ ಉಗ್ರ?
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ 20 ವರ್ಷದ ಯುವಕ ಸುಹೇಲ್ ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ಸಮಯದಿಂದ ಹರಿಹರದ ಖಾಸಗಿ ಕಾರ್ಖಾನೆಯೊಂದರಲ್ಲಿ ಸಾಮಾನ್ಯ ಕಾರ್ಮಿಕನಂತೆ ಕೆಲಸ ಮಾಡಿಕೊಂಡಿದ್ದನು. ಆದರೆ ಒಳಗೊಳಗೆ ಈತ ದೇಶವಿರೋಧಿ ಕೃತ್ಯಗಳಿಗೆ ಹಾಗೂ ಪಾಕ್ ಮೂಲದ ಉಗ್ರರೊಂದಿಗೆ ಜಾಲ ಹೊಂದಿದ್ದ ಎನ್ನಲಾಗಿದೆ.
ಜಂಟಿ ಕಾರ್ಯಾಚರಣೆ:
ಕೇಂದ್ರ ಗುಪ್ತಚರ ಇಲಾಖೆ (Central Intelligence) ನೀಡಿದ ಖಚಿತ ಮಾಹಿತಿ ಮೇರೆಗೆ ಹರಿಹರ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ವಿಶೇಷ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದೆ.
ಹಳೇ ಪ್ರಕರಣದ ಲಿಂಕ್:
ಪೊಲೀಸ್ ಮೂಲಗಳ ಪ್ರಕಾರ, ಈ ಹಿಂದೆ ಬಂಧನಕ್ಕೊಳಗಾಗಿದ್ದ ದಾವಣಗೆರೆ ಮೂಲದ ಜಮೀರ್ ಖಾನ್ ಮತ್ತು ತುಮಕೂರಿನ ಅಲ್ಲಾಭಕ್ಷಿ ಎಂಬುವವರ ಜೊತೆ ಸುಹೇಲ್ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹಳೆಯ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಿದ ಸಂದರ್ಭದಲ್ಲಿ ಸುಹೇಲ್ ಹೆಸರು ಮುಂಚೂಣಿಗೆ ಬಂದಿದ್ದು, ತಕ್ಷಣವೇ ಪೊಲೀಸರು ಈತನನ್ನು ಜಾಲಕ್ಕೆ ಕೆಡವಿದ್ದಾರೆ. ಸದ್ಯ ಆರೋಪಿಯನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
- Central Intelligence raid Davanagere
- DAVANAGERE NEWS
- Harihara terrorist arrest
- Karnataka crime updates
- Karnataka police operation
- Pakistan terror link
- suspected terrorist Suhel
- Uttar Pradesh Suhel arrest
- ಅಲ್ಲಾಭಕ್ಷಿ
- ಕರ್ನಾಟಕ ಕ್ರೈಮ್ ನ್ಯೂಸ್
- ಜಮೀರ್ ಖಾನ್
- ದಾವಣಗೆರೆ ಪೊಲೀಸ್ ಕಾರ್ಯಾಚರಣೆ
- ದಾವಣಗೆರೆ ಸುದ್ದಿ
- ಪಾಕಿಸ್ತಾನ ಉಗ್ರ ಸಂಘಟನೆ ಲಿಂಕ್
- ಸುಹೇಲ್ ಬಂಧನ ಹರಿಹರ
- ಹರಿಹರ ಶಂಕಿತ ಉಗ್ರನ ಬಂಧನ





Leave a comment