SUDDIKSHANA KANNADA NEWS/ DAVANAGERE/ DATE:11-10-2023
ದಾವಣಗೆರೆ (Davanagere): ಪಿ. ಬಿ. ರಸ್ತೆಯ ನಗರದ ರೇಣುಕಾ ಮಂದಿರದ ಸಮೀಪದಲ್ಲಿ ಕೇಸರಿ ಧ್ವಜ ಕಟ್ಟುವ ವೇಳೆ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದ್ದು, ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
ನಗರದ ಬಸವರಾಜಪೇಟೆಯ ಪೃಥ್ವಿರಾಜ್ (26) ಸಾವು ಕಂಡ ದುರ್ದೈವಿ.

Read Also This Story:
ಅ. 14ಕ್ಕೆ ದಾವಣಗೆರೆ (Davanagere)ಯ ಹಿಂದೂಮಹಾಗಣಪತಿ ವಿಸರ್ಜನೆ: ಬೇರೆ ಕಡೆ ಬಸ್ ತಾತ್ಕಾಲಿಕ ನಿಲುಗಡೆಗೆ ಸೂಚನೆ
ಘಟನೆ ಹಿನ್ನೆಲೆ ಏನು…?
ಅ. 14ಕ್ಕೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ಟ್ರಸ್ಟ್ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಕೇಸರ ಬಾವುಟ ಕಟ್ಟಲಾಗುತಿತ್ತು. ಕ್ರೇನ್ ಮೂಲಕ ಅಳವಡಿಸಲಾಗುತಿತ್ತು. ಸಂಜೆ ವೇಳೆ ಕ್ರೇನ್ ನ ಹಿಂದೆ ನಿಂತಿದ್ದರು. ಆಗ ಚಾಲಕನಿಗೆ ಇದು ಗೊತ್ತಿರಲಿಲ್ಲ. ಹಿಮ್ಮುಖವಾಗಿ ಕ್ರೇನ್ ಚಲಿಸಿದ ಪರಿಣಾಮ ಕ್ರೇನ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹ ತೆಗೆದುಕೊಂಡು ಹೋಗಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರ ಆಕ್ರಂದನ ಹೇಳತೀರದ್ದಾಗಿದೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನೂ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದ್ದು, ಜಿಲ್ಲಾಸ್ಪತ್ರೆಯ ಮುಂಭಾಗ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ, ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೃಹತ್ ಬೈಕ್ ರ್ಯಾಲಿ ರದ್ದು:
ಶೋಭಯಾತ್ರೆ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಬೈಕ್ ರ್ಯಾಲಿ ರದ್ದುಪಡಿಸಲಾಗಿದೆ. ಕಾರಣಾಂತರಗಳಿಂದ ಬೈಕ್ ರ್ಯಾಲಿ ರದ್ದು ಮಾಡಲಾಗಿದ್ದು, ಸಹಕರಿಸುವಂತೆ ಹಿಂದೂ ಮಹಾಗಣಪತಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದ್ದಾರೆ.