Home ನವದೆಹಲಿ ದಾವಣಗೆರೆ ಡಿಸಿಎಂ ನಾಗರಿಕ ಸಂಘದ ಅಧ್ಯಕ್ಷರಾಗಿ ಡಿ. ಹೆಚ್. ಚನ್ನಬಸಪ್ಪ, ಗೌರವಾಧ್ಯಕ್ಷರಾಗಿ ಟಿ. ಮೂಡಲಗಿರಿಯಪ್ಪ ಆಯ್ಕೆ
ನವದೆಹಲಿಬೆಂಗಳೂರು

ದಾವಣಗೆರೆ ಡಿಸಿಎಂ ನಾಗರಿಕ ಸಂಘದ ಅಧ್ಯಕ್ಷರಾಗಿ ಡಿ. ಹೆಚ್. ಚನ್ನಬಸಪ್ಪ, ಗೌರವಾಧ್ಯಕ್ಷರಾಗಿ ಟಿ. ಮೂಡಲಗಿರಿಯಪ್ಪ ಆಯ್ಕೆ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆಯ ಡಿಸಿಎಂ ನಾಗರಿಕ ಸಂಘದ ಅಧ್ಯಕ್ಷರಾಗಿ ಡಿ. ಹೆಚ್. ಚನ್ನಬಸಪ್ಪ ಮತ್ತು ಗೌರವಾಧ್ಯಕ್ಷರಾಗಿ ಟಿ. ಮೂಡಲಗಿರಿಯಪ್ಪ ಅವರು ಆಯ್ಕೆಯಾಗಿದ್ದಾರೆ.

2026-27ನೇ ಸಾಲಿನ ಡಿಸಿಎಂ ನಾಗರಿಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಜಿ. ಮಂಜುನಾಥ್, ಮಹಿಳಾ ಉಪಾಧ್ಯಕ್ಷೆಯರಾಗಿ ಶಾರದಮ್ಮ ಟಿ. ಮೂಡಲಗಿರಿಯಪ್ಪ, ಕಾರ್ಯದರ್ಶಿಯಾಗಿ ಎಲ್. ಹೆಚ್. ಶಶಿಧರ, ಖಜಾಂಚಿಯಾಗಿ ಟಿ. ವೇದಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.

ಇದೇ ಈ ಸಂಘದ ಅಡಿಯಲ್ಲಿ ಬರುವ ಶ್ರೀ ಚೌಡೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಜಿ. ಆರ್. ರಾಘವೇಂದ್ರ ಗೌಡ, ಕಾರ್ಯದರ್ಶಿಯಾಗಿ ಟಿ. ರಮೇಶ್, ಖಜಾಂಚಿಯಾಗಿ ಹುಲಿಕಟ್ಟಿ ರಾಜೇಶ್ ಸೇರಿದಂತೆ ಒಟ್ಟು 42 ಪದಾಧಿಕಾರಿಗಳು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಸಂಘದ ಗೌರವ ಸಲಹೆಗಾರರಾಗಿ ಕೆ. ಹೆಚ್. ಮಂಜುನಾಥ್ ರೆಡ್ಡಿ, ಎಂ. ಶಾಂತಕುಮಾರಿ, ಎ. ಆರ್. ತಿರುಮಲೆ, ಎ. ಆರ್. ಗೋವಿಂದರೆಡ್ಡಿ, ಕೆ. ಹಾಲಪ್ಪ, ಕೆ. ನಾಗರಾಜ್, ಎಸ್. ಶಿವನಪ್ಪ, ಲೆಕ್ಕ ಪರಿಶೋಧಕರಾಗಿ ಅಕ್ಕಿ ವೀರಭದ್ರಪ್ಪ, ವಿ. ಜಗಮೋಹನ್ ಅವರು ನೇಮಕಗೊಂಡಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *