Home ಕ್ರೀಡೆ ದಾವಣಗೆರೆ ಕ್ಲಬ್‌ನ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದ ಸ್ಕ್ವಾಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ
ಕ್ರೀಡೆನವದೆಹಲಿಬೆಂಗಳೂರು

ದಾವಣಗೆರೆ ಕ್ಲಬ್‌ನ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದ ಸ್ಕ್ವಾಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ

Share
ದಾವಣಗೆರೆ
Share

ದಾವಣಗೆರೆ: ಕರ್ನಾಟಕ ರಾಜ್ಯ ಸ್ಕ್ವಾಟ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಇತ್ತೀಚಿಗೆ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ‘ಕರ್ನಾಟಕ ರಾಜ್ಯ ಸ್ಕ್ವಾಟ್ ಲಿಫ್ಟಿಂಗ್ ಮತ್ತು ಇನ್‌ಕ್ಲೈನ್ ಬೆಂಚ್ ಚಾಂಪಿಯನ್‍ಶಿಪ್-2026’ ರಲ್ಲಿ ದಾವಣಗೆರೆ ಕ್ಲಬ್‌ನ ಜಿಮ್ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸೀನಿಯರ್ ಮಾಸ್ಟರ್ಸ್ 78 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ದಾವಣಗೆರೆ ಕ್ಲಬ್‌ನ ಅಂಗವಿಕಲ ಕ್ರೀಡಾಪಟು ಥಾಮಸ್ ವಿಜಯ್ ಅವರು ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಪಡೆದರೆ, ಸಬ್ ಜೂನಿಯರ್ 72 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೆವಿನ್ ಸೆಲ್ವರಾಜ್ ಅವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿರುವ ಇವರ ಜಿಮ್ ಕೋಚ್ ಗೋಪಾಲ್ ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಇದೀಗ ಇಬ್ಬರೂ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಸಾಧಕ ಕ್ರೀಡಾಪಟುಗಳಿಗೆ ದಾವಣಗೆರೆ ಕ್ಲಬ್ ಅಧ್ಯಕ್ಷ ಎ. ಬಿ.  ಚಂದ್ರಶೇಖರ್, ಉಪಾಧ್ಯಕ್ಷ ಬಾದಾಮಿ ಮಲ್ಲಿಕಾರ್ಜುನ್, ಕಾರ್ಯದರ್ಶಿ ರವಿಶಂಕರ್ ಪಲ್ಲಾಗಟ್ಟಿ, ಸಹ ಕಾರ್ಯದರ್ಶಿ ಐನಳ್ಳಿ ಜಯದೀಪ್, ಖಜಾಂಚಿ ಪ್ರಶಾಂತ ಗುಪ್ತಾ ಎಸ್. ಕೆ., ಹಾಗೂ ನಿರ್ದೇಶಕರುಗಳಾದ ಬೆಳ್ಳೂಡಿ ಸದಾನಂದ್, ರುದ್ರೇಶ್ ಹೆಚ್. ವಿ., ಅಭಿಷೇಕ್ ಬೇತೂರು, ಮಾಗಾನಹಳ್ಳಿಯ ಗುರು ಎಂ.ಸಿ., ಬಸವರಾಜಯ್ಯ  ಮತ್ತು ಬಿ. ಜಿ. ಭರತ್  ಅವರು ಅಭಿನಂದನೆ ಸಲ್ಲಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *