Home ದಾವಣಗೆರೆ ದಾವಣಗೆರೆ ಉಪಚುನಾವಣೆಯಲ್ಲಿ SDPIಗೆ ಫಂಡಿಂಗ್ ಆರೋಪ ಸತ್ಯಕ್ಕೆ ದೂರ: ಅಪ್ಸರ್ ಕೊಡ್ಲಿಬೆಟ್ಟು
ದಾವಣಗೆರೆಬೆಂಗಳೂರುವಾಣಿಜ್ಯ

ದಾವಣಗೆರೆ ಉಪಚುನಾವಣೆಯಲ್ಲಿ SDPIಗೆ ಫಂಡಿಂಗ್ ಆರೋಪ ಸತ್ಯಕ್ಕೆ ದೂರ: ಅಪ್ಸರ್ ಕೊಡ್ಲಿಬೆಟ್ಟು

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಉಪಚುನಾವಣೆಯ ಕಣ ರಂಗೇರುತ್ತಿದ್ದಂತೆ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಕಾಂಗ್ರೆಸ್ ಪಕ್ಷವು ತನ್ನದೇ ಪಕ್ಷದ ಬಂಡಾಯ ನಾಯಕರ ಮೇಲೆ “SDPI ನಿಂದ ಹಣಕಾಸು ಸಹಾಯ ಪಡೆದಿದ್ದಾರೆ” ಎಂದು ಮಾಡುತ್ತಿರುವ ಆರೋಪಗಳು ಕೇವಲ ರಾಜಕೀಯ ಪ್ರೇರಿತ ಮತ್ತು ಸಂಪೂರ್ಣ ಸುಳ್ಳು ಎಂದು ಎಸ್ ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಬೆಟ್ಟು ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಮತ್ತು ಉಲಮಾಗಳು ಟಿಕೆಟ್ ಹಂಚಿಕೆ ವಿಚಾರದಲ್ಲಿ ನೀಡಿದ ನ್ಯಾಯಯುತ ಮನವಿಯನ್ನು ಕಾಂಗ್ರೆಸ್ ಕಡೆಗಣಿಸಿತ್ತು. ಈ ಐತಿಹಾಸಿಕ ತಪ್ಪಿನಿಂದಾಗಿ ಚುನಾವಣೆಯಲ್ಲಿ ಎದುರಾಗಲಿರುವ ಸೋಲಿನ ಭೀತಿಯನ್ನು ಮರೆಮಾಚಲು ಕಾಂಗ್ರೆಸ್ ಈಗ ಹೊಸ ನಾಟಕವಾಡುತ್ತಿದೆ ಎಂದು ಆರೋಪಿಸಿದರು.

ಮುಸ್ಲಿಂ ನಾಯಕತ್ವದೊಳಗೆ ಒಡಕು ಮೂಡಿಸಲು ಮತ್ತು ಜನಸಾಮಾನ್ಯರ ದಿಕ್ಕು ತಪ್ಪಿಸಲು ಇಂತಹ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

SDPI ಸಂಘಟನೆಯು ತನ್ನದೇ ಆದ ಸ್ಪಷ್ಟ ಸಿದ್ಧಾಂತ ಮತ್ತು ಜನಪರ ನಿಲುವನ್ನು ಹೊಂದಿದೆ. ದೇಶದ ಜನತೆಗೆ ಈ ಸಂಘಟನೆಯ ಕಾರ್ಯವೈಖರಿ ತಿಳಿದಿದೆ. ಸ್ವತಃ ವಿಫಲವಾಗಿರುವ ಕಾಂಗ್ರೆಸ್, ತನ್ನ ವೈಫಲ್ಯವನ್ನು ಬಂಡಾಯಗಾರರ ಮೇಲೆ ಹೊರಿಸಲು SDPI ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸತ್ಯ ಯಾವಾಗಲೂ ಜಯಿಸುತ್ತದೆ ಮತ್ತು ಮುಂಬರುವ ಚುನಾವಣೆಯಲ್ಲಿ ಜನರು ಇಂತಹ ಸುಳ್ಳು ಪ್ರಚಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *