SUDDIKSHANA KANNADA NEWS/ DAVANAGERE/ DATE:30-09-2023
ದಾವಣಗೆರೆ (Davanagere): ಕಾರು ಅಪಘಾತದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕುಟುಂಬವನ್ನು ಬದುಕುಳಿಸುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಬಿ. ಜಿ. ಅಜಯ್ ಕುಮಾರ್ ಅವರು ಆಪ್ತರಕ್ಷಕರಾದ ಘಟನೆ ನಡೆದಿದೆ.
ರಾಷ್ಟೀಯ ಹೆದ್ದಾರಿ 4 ರ ಹತ್ತಿರದ ಮಲ್ಲಶೇಟ್ಟಿ ಹಳ್ಳಿ ಬಳಿ ಇಂದು 11 ಘಂಟೆಗೆ ಶಿರಸಿಯಿಂದ ಬೆಂಗಳೂರಿಗೆ ಪ್ರಯಣಿಸುತ್ತಿದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಹೈವ್ ಪಕ್ಕದ ನಾಲೆಗೆ ಬಿದ್ದಿದೆ.
Read Also This Story:
Davanagere: ಎಡಪಂಥೀಯ ಸಾಹಿತಿಗಳಿಗೆ ಬೆದರಿಕೆ ಪತ್ರ: ದಾವಣಗೆರೆಯ ಜಾಲಿನಗರದ ಆರೋಪಿ ಸೆರೆ, ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟ ಸತ್ಯವೇನು…?
ಇದೇ ರಸ್ತೆ ಮಾರ್ಗವಾಗಿ ಕೂಡ್ಲಿಗಿಗೆ ತೆರಳುತಿದ್ದ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ ಅಲ್ಲೆ ಇದ್ದ ಸ್ಥಳೀಯರ ನೆರವಿನೊಂದಿಗೆ ಕಾರಿನಲ್ಲಿ ಸಿಲುಕಿದ ಗಾಯಾಳುಗಳನ್ನು ಹೊರ ತೆಗೆದು 112 ಪೊಲೀಸರುಮತ್ತು 108 ನ ಆಂಬ್ಯುಲೆನ್ಸ್ ಗೆ
ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಅಜಯ್ ಕುಮಾರ್ ಅವರ ಸಮಯ ಪ್ರಜ್ಞೆಯಿಂದ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಮೂಲತಃ ಶಿರಸಿ ಪಟ್ಟಣದ ಬೊಮ್ಮನಹಳ್ಳಿ ಹಾಗೂ ಬೆಂಗಳೂರಿನ ವಾಸಿಗಳಾದ ನರಸಿಂಹ ಗರಡಿ, ಲೀಲಾವತಿ, ಮಕ್ಕಳಾದ ದೀಪ್ತಿ, ಮಹಬಲೇಶ್ವರ ಅವರನ್ನು ಚಿಕಿತ್ಸೆಗೆ ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಈ ಮೂಲಕ ಜೀವ ರಕ್ಷಿಸುವ ಮೂಲಕ ಮಾನವೀಯತೆ ಮೆರೆದರು.