SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ (Davanagere): ಸಾಮಾಜಿಕ ಭದ್ರತಾ ಯೋಜನೆಯಡಿ ತಾಲ್ಲೂಕಿನಲ್ಲಿ ಪಿಂಚಣಿ ಪಡೆಯುತ್ತಿರುವ ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಆಧಾರ್ ನೊಂದಿಗೆ ಫಲಾನುಭವಿಗಳು ತಾವು ಖಾತೆ ಹೊಂದಿರುವ ಬ್ಯಾಂಕ್ಗೆ ಸಂಪರ್ಕಿಸಿ ಎನ್.ಪಿ.ಸಿ.ಐ ಜೋಡಣೆ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎಂ.ಬಿ ಅಶ್ವಥ್ ತಿಳಿಸಿದ್ದಾರೆ.
Read Also This Story:
ಸುರಕ್ಷಿತವಾಗಿದ್ದಾರೆ, ಏನೂ ತೊಂದರೆ ಇಲ್ಲ, ಯುದ್ಧಪೀಡಿತ ಇಸ್ರೇಲ್ (Israel)ನಲ್ಲಿ ಸಿಲುಕಿರುವ ದಾವಣಗೆರೆಯ ಹಿಲ್ಡಾ ಮೊಂತೇರೋ: ಇನ್ನು 2 ವರ್ಷ ಯಾಕೆ ಬರೋಲ್ಲ ದಾವಣಗೆರೆಗೆ….?
ಸರ್ಕಾರದಿಂದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ-ಮೈತ್ರಿ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಆಧಾರ್ ನಂಬರ್ ಫಲಾನುಭವಿಗಳ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವುದಿಲ್ಲ. ಅ.19 ರೊಳಗಾಗಿ ಆಧಾರ್ ಜೋಡಣೆ ಮಾಡಿಸಲು ತಿಳಿಸಲಾಗಿದೆ.