Home ಕ್ರೈಂ ನ್ಯೂಸ್ ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ: ಆರೋಪಿಗಳ ಮರ್ಡರ್ ಪ್ಲಾನ್ ಬಿಚ್ಚಿಟ್ಟ ಸೀಕ್ರೆಟ್ ಫ್ರೆಂಡ್, ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದೇನು?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ: ಆರೋಪಿಗಳ ಮರ್ಡರ್ ಪ್ಲಾನ್ ಬಿಚ್ಚಿಟ್ಟ ಸೀಕ್ರೆಟ್ ಫ್ರೆಂಡ್, ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದೇನು?

Share
ಉದ್ಯಮಿ
Share

ಪುಣೆ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಪುಣೆಯ ಉದ್ಯಮಿ ಹಾಗೂ ರಿಯಾಲ್ಟರ್ ಕೇತನ್ ಅಗರ್ವಾಲ್ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕೊಲೆಯ ಸಂಚಿನ ಸಂಪೂರ್ಣ ಮಾಹಿತಿ ಹೊಂದಿದ್ದ ಮುಖ್ಯ ಆರೋಪಿ ಚೇತನ್ ಚೌಧರಿಯ ಕಾಲೇಜು ಸಹಪಾಠಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬೀಡ್ ಮೂಲದ ಯುವಕನಿಗೆ ಮೊದಲೇ ಗೊತ್ತಿತ್ತು ಕೊಲೆ ಸ್ಕೆಚ್!

ಮೂಲಗಳ ಪ್ರಕಾರ, ವಶಕ್ಕೆ ಪಡೆದಿರುವ ಯುವಕ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದು, ಸದ್ಯ ಪುಣೆಯ ಬಾಲೆವಾಡಿ ಪ್ರದೇಶದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಖ್ಯ ಆರೋಪಿ ಚೇತನ್ ಚೌಧರಿ ಹಾಗೂ ಆತನ ಪ್ರೇಯಸಿ ಸಿಯಾ ಗೋಯಲ್, ಕೇತನ್‌ನನ್ನು ಕೊಲೆ ಮಾಡಲು ಹಾಕಿದ್ದ ಸ್ಕೆಚ್ ಬಗ್ಗೆ ಈ ಸಹಪಾಠಿಗೆ ಮೊದಲೇ ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗಿದೆ.

ಲೋಹಗಢ್ ಚಾರಣಕ್ಕೆ ಕರೆದಿದ್ದ ಆರೋಪಿಗಳು:

ಜೂನ್ 18 ರಂದು ಕೇತನ್ ಅಗರ್ವಾಲ್‌ನನ್ನು ಲೋಹಗಢ್ ಕೋಟೆಯ 400 ಅಡಿ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಲು ಚೇತನ್ ಮತ್ತು ಸಿಯಾ ಪ್ಲಾನ್ ಮಾಡಿದ್ದರು. ಈ ದಾರುಣ ಘಟನೆಗೂ ಮುನ್ನ ಇಬ್ಬರೂ ಆರೋಪಿಗಳು ಈ ಸಹಪಾಠಿಯನ್ನು ಜೂನ್ 18 ರಂದು ತಮ್ಮೊಂದಿಗೆ ಲೋಹಗಢ್ ಕೋಟೆಯ ಚಾರಣಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ, ಆತ ಅಂದು ಇವರ ಜೊತೆ ಹೋಗಲು ನಿರಾಕರಿಸಿದ್ದ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.

ಕೊಲೆಯ ಬಳಿಕವೂ ಸಂಪರ್ಕದಲ್ಲಿದ್ದ ಸಿಯಾ-ಚೇತನ್:

ಮೇ ಕೊನೆಯ ವಾರದಿಂದಲೇ ಆರೋಪಿಗಳು ಈತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲದೆ, ಕೇತನ್‌ನನ್ನು ಕಂದಕಕ್ಕೆ ತಳ್ಳಲು ಪ್ಲಾನ್ ಮಾಡಿದ್ದ ಜಾಗದ ವೀಡಿಯೊಗಳು ಮತ್ತು ವ್ಲಾಗ್‌ಗಳನ್ನು (Vlogs) ಸಹ ಆರೋಪಿ ಸಿಯಾ ಗೋಯಲ್ ಈ ಸಹಪಾಠಿಗೆ ತೋರಿಸಿದ್ದಳು ಎನ್ನಲಾಗಿದೆ. ಕೊಲೆ ನಡೆದ ತಕ್ಷಣವೇ ಚೇತನ್ ಮೊದಲು ಭೇಟಿಯಾಗಿದ್ದೇ ಈ ಸಹಪಾಠಿಯನ್ನು ಎಂದು ತನಿಖೆಯಿಂದ ತಿಳಿದುಬಂದಿದೆ.

ಕೊಲೆ ಮಾಡದಂತೆ ತಡೆದಿದ್ದನೇ ಸ್ನೇಹಿತ?

ವಿಚಾರಣೆ ವೇಳೆ ಆ ಯುವಕ, ತಾನು ಚೇತನ್ ಮತ್ತು ಸಿಯಾಗೆ ಈ ಘೋರ ಕೃತ್ಯ ಎಸಗದಂತೆ ಬುದ್ಧಿವಾದ ಹೇಳಿದ್ದೆ ಮತ್ತು ಕೊಲೆ ಮಾಡದಂತೆ ತಡೆಯಲು ಯತ್ನಿಸಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಪೊಲೀಸರು ಈತನ ಡಿಜಿಟಲ್ ಪುರಾವೆಗಳು, ಕಾಲ್ ರೆಕಾರ್ಡ್ಸ್ ಹಾಗೂ ಚಾಟ್‌ಗಳನ್ನು ಪರಿಶೀಲಿಸುತ್ತಿದ್ದು, ಈತ ಕೇವಲ ಮೂಕಪ್ರೇಕ್ಷಕನಾಗಿದ್ದನೇ ಅಥವಾ ಈ ಕೊಲೆ ಸಂಚಿನಲ್ಲಿ ಈತನ ಪಾಲೂ ಇದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ಲೋಹಗಢ್ ಕೋಟೆಯಲ್ಲಿ ನಡೆದ ಈ ಹೈ-ಪ್ರೊಫೈಲ್ ಕೊಲೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles