SUDDIKSHANA KANNADA NEWS/ DAVANAGERE/ DATE:03-12-2024
ದಾವಣಗೆರೆ: 2025-26ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಸಲು ಸಲಹೆಗಳನ್ನು ಪಡೆಯಲು ಡಿ.7 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೊದಲನೆಯ ಸಭೆಯನ್ನು ಆಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ಜಿಲ್ಲಾ ಕ್ರೀಡಾರೋಹಣದ ಕ್ರೀಡಾಪಟುಗಳ ಸಾಧನೆ:
ನ.29 ರಿಂದ ಡಿ.2 ರವರೆಗೆ ಬೆಂಗಳೂರಿನಲ್ಲಿ ನಡೆದ 28ನೇ ಸೌತ್ ಝೋನ್ ಚಾಂಪಿಯನ್ಷಿಪ್ನಲ್ಲಿ ದಾವಣಗೆರೆ ಜಿಲ್ಲಾ ಕ್ರೀಡಾರೋಹಣದ ಕ್ರೀಡಾಪಟುಗಳು ಛಾಣಸ್ಯ ಡಿ. ದ್ವಿತೀಯ ಸ್ಥಾನ ಮತ್ತು ಗಂಗಾ ವೈಷ್ಣವಿ ವಿ. ನಾಗ್ ತೃತೀಯ ಸ್ಥಾನವನ್ನು ಪಡೆದು ಜ್ಯೂನಿಯರ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ ತಿಳಿಸಿದ್ದಾರೆ.