Home ದಾವಣಗೆರೆ ಕಾಂಗ್ರೆಸ್ ಸಂಘಟನೆಯಲ್ಲಿ ಭರ್ಜರಿ ಸರ್ಜರಿ: 81 ಹೊಸ ರಾಷ್ಟ್ರೀಯ ಕಾರ್ಯದರ್ಶಿಗಳ ನೇಮಕ, ಶೇ. 50ರಷ್ಟು ಸ್ಥಾನಗಳು ಎಸ್‌ಸಿ, ಎಸ್‌ಟಿ, ಒಬಿಸಿಗೆ!
ದಾವಣಗೆರೆನವದೆಹಲಿಬೆಂಗಳೂರು

ಕಾಂಗ್ರೆಸ್ ಸಂಘಟನೆಯಲ್ಲಿ ಭರ್ಜರಿ ಸರ್ಜರಿ: 81 ಹೊಸ ರಾಷ್ಟ್ರೀಯ ಕಾರ್ಯದರ್ಶಿಗಳ ನೇಮಕ, ಶೇ. 50ರಷ್ಟು ಸ್ಥಾನಗಳು ಎಸ್‌ಸಿ, ಎಸ್‌ಟಿ, ಒಬಿಸಿಗೆ!

Share
ಕಾಂಗ್ರೆಸ್
Share

ನವದೆಹಲಿ: 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ತನ್ನ ಸಂಘಟನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿದೆ. ವಿವಿಧ ರಾಜ್ಯಗಳು ಹಾಗೂ ವಿಭಾಗಗಳಿಗೆ ಒಟ್ಟು 81 ರಾಷ್ಟ್ರೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ವಿಶೇಷವೆಂದರೆ, ಹೊಸದಾಗಿ ನೇಮಕಗೊಂಡಿರುವವರಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಒಬಿಸಿ (OBC), ಎಸ್‌ಸಿ (SC) ಮತ್ತು ಎಸ್‌ಟಿ (ST) ವರ್ಗದವರಿಗೆ ನೀಡಲಾಗಿದ್ದು, ಸಾಮಾಜಿಕ ನ್ಯಾಯದ ಸೂತ್ರಕ್ಕೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಸಂಘಟನಾತ್ಮಕ ಪುನಾರಚನೆಯಲ್ಲಿ 43 ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ 24 ಹಳೆಯ ಕಾರ್ಯದರ್ಶಿಗಳನ್ನು ಕೈಬಿಡಲಾಗಿದೆ. ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ಅವರು ಸುಮಾರು 200 ನಾಯಕರುಗಳನ್ನು ಸಂದರ್ಶಿಸಿ ಈ ಆಯ್ಕೆ ಪ್ರಕ್ರಿಯೆ ನಡೆಸಿದ್ದರು. ನೇಮಕಗೊಂಡ 81 ಮಂದಿಯಲ್ಲಿ 29 ಜನ ಸಾಮಾನ್ಯ ವರ್ಗದವರು, 20 ಒಬಿಸಿ, 5 ಅತ್ಯಂತ ಹಿಂದುಳಿದ ವರ್ಗ (EBC), 11 ಎಸ್‌ಸಿ ಹಾಗೂ 5 ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಇದರೊಂದಿಗೆ 11 ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಲಾಗಿದ್ದು, ಒಟ್ಟು ಶೇ. 65ರಷ್ಟು ಸ್ಥಾನಗಳು ವಂಚಿತ ಸಮುದಾಯಗಳಿಗೆ ದೊರೆತಂತಾಗಿದೆ. ಜೊತೆಗೆ 12 ಮಹಿಳೆಯರಿಗೂ (ಶೇ. 15) ಸ್ಥಾನ ನೀಡಲಾಗಿದೆ.

ಸಾಮಾಜಿಕ ನ್ಯಾಯಕ್ಕೆ ಒತ್ತು: ಒಟ್ಟು ನೇಮಕಾತಿಯಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರಿಗೆ ನೀಡುವ ಮೂಲಕ ಪಕ್ಷವು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದೆ.

ಯುವ ನಾಯಕತ್ವಕ್ಕೆ ಆದ್ಯತೆ: ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿಗಳ ಸರಾಸರಿ ವಯಸ್ಸು 49 ವರ್ಷಗಳಾಗಿದ್ದು, ಮೂರನೇ ಎರಡರಷ್ಟು ಕಾರ್ಯದರ್ಶಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಹೊಸ ಮುಖಗಳಿಗೆ ಮಣೆ: ಒಟ್ಟು 81 ಪೈಕಿ 43 ಹೊಸ ಮುಖಗಳನ್ನು ಪರಿಚಯಿಸಲಾಗಿದೆ. ವಿನೀತ್ ಪುನಿಯಾ ಹಾಗೂ ರುಚಿರಾ ಚತುರ್ವೇದಿ ಅವರನ್ನು ಮಾಧ್ಯಮ ಮತ್ತು ಡಿಜಿಟಲ್ ಮೀಡಿಯಾ ವಿಭಾಗದಲ್ಲಿ ಮುಂದುವರಿಸಲಾಗಿದೆ.

25 ನಾಯಕರಿಗೆ ಕೊಕ್: ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ 25 ನಾಯಕರಿಗೆ ಜವಬ್ದಾರಿಯಿಂದ ಮುಕ್ತಿ ನೀಡಲಾಗಿದ್ದು, ಇವರಲ್ಲಿ ಕೆಲವರನ್ನು ಇತ್ತೀಚೆಗೆ ಪ್ರಮುಖ ರಾಜ್ಯಗಳ ಉಸ್ತುವಾರಿಗಳಾಗಿ ಬಡ್ತಿ ನೀಡಲಾಗಿದೆ.

Share