
ಪ್ರತಾಪಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ರಾಜಕಾರಣಿ ರಾಜಾ ಭೈಯ್ಯಾ ಅವರು ಪ್ರತಾಪಗಢದ ಕುಂಡಾದಲ್ಲಿ ಆಯೋಜಿಸಿರುವ ಶ್ರೀರಾಮ ಕಥಾ ಧರ್ಮ ಕಾರ್ಯಕ್ರಮಕ್ಕೆ ಬಿಹಾರದಿಂದ ಆಗಮಿಸಿರುವ ‘ಗೋಲ್ಡ್ ಮ್ಯಾನ್’ ಪ್ರೇಮ್ ಕುಮಾರ್ ಸಿಂಗ್ ಎಲ್ಲರ ವಿಶೇಷ ಗಮನ ಸೆಳೆದಿದ್ದಾರೆ. ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಸುಮಾರು 6.3 ಕೆಜಿ ಚಿನ್ನಾಭರಣಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದ ಇವರನ್ನು ನೋಡಲು ಮತ್ತು ಸೆಲ್ಫಿ, ಫೋಟೋಗಳನ್ನು ತೆಗೆದುಕೊಳ್ಳಲು ಭಕ್ತರು ಮುಗಿಬಿದ್ದಿದ್ದಾರೆ.
ಭಾರತೀಯ ರಾಜಕಾರಣಿ ಹಾಗೂ ಶಾಸಕ ರಘುರಾಜ್ ಪ್ರತಾಪ್ ಸಿಂಗ್ (ರಾಜಾ ಭೈಯ್ಯಾ) ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀರಾಮ ಕಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಹಾರದಿಂದ ಬಂದ ಪ್ರೇಮ್ ಕುಮಾರ್ ಸಿಂಗ್, ಮೈತುಂಬಾ ಚಿನ್ನದ ಸರಗಳು, ಬ್ರೇಸ್ಲೆಟ್ಗಳು ಹಾಗೂ ಇತರ ಆಭರಣಗಳನ್ನು ಧರಿಸಿದ್ದರು. ಅವರ ಈ ವಿಶಿಷ್ಟ ಮತ್ತು ಆಕರ್ಷಕ ನೋಟವು ಧರ್ಮ ಸಭೆಯಲ್ಲಿ ದೊಡ್ಡ ಚರ್ಚೆಯ ವಿಷಯವಾಯಿತು. ಅಲ್ಲದೆ, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಜನಸಾಮಾನ್ಯರು ಮುನ್ನುಗ್ಗಿದರು. ಬಿಹಾರದಲ್ಲಿ ಅಪಾರ ಪ್ರಮಾಣದ ಚಿನ್ನ ಧರಿಸುವುದರ ಮೂಲಕವೇ ಪ್ರಸಿದ್ಧಿ ಪಡೆದಿರುವ ಇವರನ್ನು ಸ್ಥಳೀಯರು ಮತ್ತು ಭಕ್ತರು ‘ಗೋಲ್ಡ್ ಮ್ಯಾನ್’ ಎಂದೇ ಕರೆಯುತ್ತಾರೆ.
10 ಕೋಟಿ ರೂ. ಮೌಲ್ಯದ ಚಿನ್ನ: ಪ್ರೇಮ್ ಕುಮಾರ್ ಸಿಂಗ್ ಅವರು ಒಟ್ಟು 6.3 ಕೆಜಿ ತೂಕದ ಚಿನ್ನಾಭರಣಗಳನ್ನು ಧರಿಸಿ ಧಾರ್ಮಿಕ ಸಭೆಗೆ ಆಗಮಿಸಿದ್ದು ಪ್ರಮುಖ ಆಕರ್ಷಣೆಯಾಯಿತು.
ರಾಜಾ ಭೈಯ್ಯಾ ರಾಮಕಥಾ: ಉತ್ತರ ಪ್ರದೇಶದ ಪ್ರತಾಪಗಢದ ಕುಂಡಾದಲ್ಲಿ ನಡೆಯುತ್ತಿರುವ ಶ್ರೀರಾಮ ಕಥಾ ಕಾರ್ಯಕ್ರಮದಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಮುಗಿಬಿದ್ದ ಜನ: ಚಿನ್ನ ಧರಿಸಿದ ಗೋಲ್ಡ್ ಮ್ಯಾನ್ ಅವರೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಭಕ್ತರು ಮುಗಿಬಿದ್ದ ದೃಶ್ಯ ಕಂಡುಬಂದಿದೆ.
ಬಿಹಾರದ ಗೋಲ್ಡ್ ಮ್ಯಾನ್: ಬಿಹಾರ ಮೂಲದ ಪ್ರೇಮ್ ಕುಮಾರ್ ಸಿಂಗ್ ಅವರು ತಮ್ಮ ವಿಶೇಷ ಶೈಲಿಗೆ ಹೆಸರುವಾಸಿಯಾಗಿದ್ದು, ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಈ ರೀತಿ ಚಿನ್ನದೊಂದಿಗೆ ಕಾಣಿಸಿಕೊಳ್ಳುತ್ತಾರೆ.




