ಮುಂಬೈ: ಪಶ್ಚಿಮ ಏಷ್ಯಾ ಬಿಕ್ಕಟ್ಟು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ಖರೀದಿ ವೆಚ್ಚ ಹೆಚ್ಚಿರುವ ಕಾರಣ ಮಹಾನಗರ ಗ್ಯಾಸ್ ಲಿಮಿಟೆಡ್ ಮುಂಬೈ ಮತ್ತು ಎಂಎಂಆರ್ ಪ್ರದೇಶದಲ್ಲಿ ಸಿಎನ್ಜಿ ದರವನ್ನು ಮತ್ತೆ ಏರಿಕೆ ಮಾಡಿದೆ.
2026ನೇ ಸಾಲಿನ ಎಂಟನೇ ಬಾರಿಗೆ ಸಿಎನ್ಜಿ ಬೆಲೆ ಹೆಚ್ಚಳವಾಗಿದ್ದು, ಪ್ರತಿ ಕೆಜಿಗೆ ರೂ. 1.50 ರಂತೆ ದರ ಏರಿಕೆಯಾಗಿರುವುದರಿಂದ ಹೊಸ ದರವು ರೂ. 91.50 ತಲುಪಿದೆ. ನವೆಂಬರ್ 15ರಿಂದಲೇ ಈ ನೂತನ ದರಗಳು ಜಾರಿಗೆ ಬಂದಿದ್ದು, ಆಟೋ, ಟ್ಯಾಕ್ಸಿ ಹಾಗೂ ವಾಹನ ಸವಾರರಿಗೆ ಮತ್ತಷ್ಟು ಹೊರೆಯಾಗಿದೆ.
ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ದೇಶೀಯ ನೈಸರ್ಗಿಕ ಅನಿಲ ಹಂಚಿಕೆ ಕಡಿಮೆಯಾಗಿರುವುದರಿಂದ ಆಮದು ಮಾಡಿಕೊಂಡ RLNG ಮೇಲಿನ ಅವಲಂಬನೆ ಹೆಚ್ಚಾಗಿದೆ ಎಂದು MGL ಸ್ಪಷ್ಟಪಡಿಸಿದೆ. ಈ ವರ್ಷದ ಆರಂಭದಲ್ಲಿ ಸಿಎನ್ಜಿ ಬೆಲೆ ರೂ. 80.50 ಇತ್ತು. ಈ ವರ್ಷ ಒಟ್ಟು ಎಂಟು ಬಾರಿ ಬೆಲೆ ಏರಿಕೆಯಾಗಿದ್ದು, ಇಂಧನ ವೆಚ್ಚ ಗಗನಕ್ಕೇರುತ್ತಿರುವುದರಿಂದ ಸಾರ್ವಜನಿಕರು ಹಾಗೂ ಸಾರಿಗೆ ವಲಯದವರು ಆತಂಕ ವ್ಯಕ್ತಪಡಿಸಿದ್ದಾರೆ.
2026ರ 8ನೇ ಬೆಲೆ ಏರಿಕೆ: ಈ ವರ್ಷದಲ್ಲಿ ಸಿಎನ್ಜಿ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ನವೆಂಬರ್ 15ರಂದು ಮತ್ತೆ ರೂ. 1.50 ಏರಿಕೆಯಾಗಿ ಪ್ರತಿ ಕೆಜಿಗೆ ರೂ. 91.50ಕ್ಕೆ ತಲುಪಿದೆ.
ಕಾರಣವೇನು?: ಪಶ್ಚಿಮ ಏಷ್ಯಾ (Middle East) ಸಂಘರ್ಷ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ಸಂಗ್ರಹಣಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ಎಂಡಿಜಿಎಲ್ ತಿಳಿಸಿದೆ.
ಸಾರ್ವಜನಿಕರಿಗೆ ಬರೆ: ವರ್ಷದ ಆರಂಭದಲ್ಲಿ ರೂ. 80.50 ಇದ್ದ ಸಿಎನ್ಜಿ ಬೆಲೆ ಈಗ ಸುಮಾರು ಶೇ. 14ರಷ್ಟು ಹೆಚ್ಚಾಗಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ದೊಡ್ಡ ಹೊರೆಯಾಗಿದೆ.





Leave a comment