ನವದೆಹಲಿ / ಮುಂಬೈ: ದೇಶದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 24 ಗಂಟೆಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 2 (ಗಾಂಧಿ ಜಯಂತಿ) ರಿಂದ ದೇಶಾದ್ಯಂತ ಬೃಹತ್ ಚಳವಳಿ ಪ್ರಾರಂಭಿಸುವುದಾಗಿ ಯುವ ನೇತೃತ್ವದ ‘ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜೀನಾಮೆಗೆ 24 ಗಂಟೆಗಳ ಆಲ್ಟಿಮೇಟಮ್
ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ‘X’ (ಟ್ವಿಟರ್) ನಿಕಟಪೂರ್ವ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಜ್ಞಾನೇಶ್ ಕುಮಾರ್ ಅವರು ನಾಳೆಯೊಳಗೆ ರಾಜೀನಾಮೆ ನೀಡದಿದ್ದರೆ, CJP ಮುಂಬೈನಿಂದ ತನ್ನ ದೇಶವ್ಯಾಪಿ ಪ್ರತಿಭಟನೆಯನ್ನು ಪ್ರಾರಂಭಿಸಿ ಭಾರತದಾದ್ಯಂತ ವಿಸ್ತರಿಸಲಿದೆ. ಈ ಗಾಂಧಿ ಜಯಂತಿಯಂದು ಪ್ರಜಾಪ್ರಭುತ್ವವನ್ನು ಉಳಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ” ಎಂದು ಕರೆ ನೀಡಿದ್ದಾರೆ. ದೆಹಲಿಯಲ್ಲಿ “ಜಂತರ್ ಮಂತರ್ 2.0” ಮಾದರಿಯ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿಯೂ ಪಕ್ಷ ತಿಳಿಸಿದೆ.
‘ಎಲೆಕ್ಷನ್ ಕಮಿಷನ್ ಠೀಕ್ ಕರೋ’ ಅಭಿಯಾನ ಮತ್ತು 13 ಕೋಟಿ ವೋಟರ್ಸ್ ಗಾಯಬ್
ಸಿಜೆಪಿ ‘ಇಲೆಕ್ಷನ್ ಕಮಿಷನ್ ಠೀಕ್ ಕರೋ’ ಅಭಿಯಾನವನ್ನು ಕೈಗೆತ್ತಿಕೊಂಡಿದ್ದು, ದೇಶದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಸುಮಾರು 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ತೆಗೆದುಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.
ರಾಜ್ಯವಾರು ಪಟ್ಟಿಯಿಂದ ನಾಪತ್ತೆಯಾದ ಪ್ರಮುಖ ಮತದಾರರ ಸಂಖ್ಯೆ:
ಮಹಾರಾಷ್ಟ್ರ: 2 ಕೋಟಿಗೂ ಹೆಚ್ಚು
ಉತ್ತರ ಪ್ರದೇಶ: 2 ಕೋಟಿಗೂ ಹೆಚ್ಚು
ಕರ್ನಾಟಕ: ಸುಮಾರು 1 ಕೋಟಿ
ತಮಿಳುನಾಡು: 97 ಲಕ್ಷ
ಪಶ್ಚಿಮ ಬಂಗಾಳ: 90 ಲಕ್ಷ
ತೆಲಂಗಾಣ: 73 ಲಕ್ಷ
ದೆಹಲಿ: 47 ಲಕ್ಷ
ಕೇರಳ: 24 ಲಕ್ಷ
“ಜ್ಞಾನೇಶ್ ಕುಮಾರ್ ಅವರ ಆಡಳಿತದಲ್ಲಿ ಚುನಾವಣಾ ಆಯೋಗವೇ ಯಾರಿಗೆ ವೋಟ್ ಹಾಕುವ ಹಕ್ಕಿರಬೇಕು ಮತ್ತು ಯಾರಿಗೆ ಇರಬಾರದು ಎಂದು ನಿರ್ಧರಿಸುತ್ತಿದೆ. ಕೋಟ್ಯಂತರ ಜನರ ಹೆಸರುಗಳು ಪಟ್ಟಿಯಿಂದ ಮಾಯವಾದಾಗ, ಪ್ರತಿಯೊಂದು ಹೆಸರನ್ನು ಕಾನೂನುಬದ್ಧವಾಗಿ ತೆಗೆದುಹಾಕಲಾಗಿದೆ ಎಂದು ಸಾಬೀತುಪಡಿಸುವ ಹೊಣೆ ಚುನಾವಣಾ ಆಯೋಗದ್ದಾಗಿದೆ” ಎಂದು ದೀಪ್ಕೆ ಪ್ರತಿಪಾದಿಸಿದ್ದಾರೆ.
ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯ
ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು SIR ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಆಯೋಗದ ಸಭೆಗಳಲ್ಲಿ ಹಲವು ಬಾರಿ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬ ಪತ್ರಿಕಾ ವರದಿಗಳ ಬೆನ್ನಲ್ಲೇ ಈ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ವಿರೋಧ ಪಕ್ಷಗಳಿಗೆ ‘ಚುನಾವಣೆ ಬಹಿಷ್ಕಾರ’ದ ಸವಾಲು
ವಿರೋಧ ಪಕ್ಷಗಳ ನಾಯಕರಿಗೂ ನೇರ ಸವಾಲ್ ಎಸೆದಿರುವ ಅಭಿಜೀತ್ ದೀಪ್ಕೆ, “ಚುನಾವಣೆಗಳು ಹ್ಯಾಕ್/ರಿಗ್ ಆಗುತ್ತಿವೆ ಎಂದು ಭಾವಿಸಿದರೆ, ಅಂತಹ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಕ್ಷಣವೇ ನಿಲ್ಲಿಸಿ. ನೀವು ಅಂತಹ ಅಕ್ರಮ ವ್ಯವಸ್ಥೆಯಲ್ಲಿ ಭಾಗವಹಿಸುವುದರಿಂದ ಆ ಚುನಾವಣೆಗೆ ಕಾನೂನುಬದ್ಧತೆ ತಂದುಕೊಟ್ಟಂತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Abhijeet Dipke
- CJP protest Oct 2
- Cockroach Janta Party
- Election Commission of India
- Election Commission Thik Karo
- Gyanesh Kumar CEC
- Jantar Mantar 2.0
- SIR Voter List Revision
- ಅಕ್ಟೋಬರ್ 2 ಪ್ರತಿಭಟನೆ
- ಅಭಿಜೀತ್ ದೀಪ್ಕೆ
- ಎಸ್ಐಆರ್ ಅಕ್ರಮ
- ಕಾಕ್ರೋಚ್ ಜನತಾ ಪಾರ್ಟಿ
- ಚುನಾವಣಾ ಆಯೋಗ
- ಜಂತರ್ ಮಂತರ್ 2.0
- ಜ್ಞಾನೇಶ್ ಕುಮಾರ್
- ಮತದಾರರ ಪಟ್ಟಿ
- ಸಿಇಸಿ ರಾಜೀನಾಮೆ





Leave a comment