SUDDIKSHANA KANNADA NEWS/ DAVANAGERE/ DATE:03-06-2023
ದಾವಣಗೆರೆ(DAVANAGERE): ಗಿಳಿಗಳ (PARROTS) ಆಟ, ತುಂಟಾಟ, ಚಿಲಿಪಿಲಿ, ಕಿಲ ಕಿಲ ನೋಡೋದು, ಕೇಳೋದೇ ಚೆಂದ. ಗಿಳಿಗಳು ಅಂದರೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಖುಷಿಯೋ ಖುಷಿ. ಅವುಗಳು ಏನೇ ಮಾಡಿದರೂ ಚೆಂದ.. ಚೆಂದ.
ದಾವಣಗೆರೆ(DAVANAGERE)ಯ ಮಹಾನಗರ ಪಾಲಿಕೆ, ರೈಲ್ವೆ ಸ್ಟೇಷನ್ (RAILWAY STATION), ಜನತಾ ಬಜಾರ್ (JANATHA BAJAR) ಸೇರಿದಂತೆ ಹಲವೆಡೆ ಗಿಳಿಗಳ ಸಾಮ್ರಾಜ್ಯವೇ ಇತ್ತು. ಸದ್ಯಕ್ಕೆ ಮಹಾನಗರ ಪಾಲಿಕೆ ಸುತ್ತಮುತ್ತಲಿರುವ ಸುಮಾರು 20 ರಿಂದ 23 ಮರಗಳೇ ಈ ಗಿಳಿಗಳಿ (PARROTS) ಗೆ ಆಶ್ರಯ ತಾಣ. ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಗಿಳಿಗಳು (PARROTS) ಪ್ರತಿನಿತ್ಯ ಬಂದು ಹೋಗುತ್ತವೆ ಎಂದರೇ ನಂಬ್ತೀರಾ. ನಂಬ್ಲೇಬೇಕು.
ಬೆಣ್ಣೆನಗರಿಯಲ್ಲಿ ಬೆಣ್ಣೆ ದೋಸೆ(BENNE DOSE), ಖಾರಾ ಮಂಡಕ್ಕಿ ವಿಶೇಷ ಎನ್ನುತ್ತಾರೆ. ಆದ್ರೆ, ನಗರ (CITY) ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಗಿಳಿಗಳು (PARROTS) ಒಂದೆಡೆ ಕಾಣ ಸಿಗುವುದು ಅಪರೂಪದಲ್ಲಿ ಅಪರೂಪ. ರಾಜ್ಯದಲ್ಲಿ ಇಂಥ ತಾಣ ಬೇರೆ ಕಡೆ ಇಲ್ಲ ಎಂಬ ಮಾಹಿತಿಯೂ ಇದೆ.
ಮಹಾನಗರ ಪಾಲಿಕೆಯ ಸುತ್ತಮುತ್ತಲಿನ ದೊಡ್ಡದಾದ ಮರಗಳಲ್ಲಿ ಸಂಜೆ 6.30ರಿಂದ 7.15ರವರೆಗೆ ಬರುತ್ತಲೇ ಇರುವ ಗಿಳಿಗಳದ್ದು ಇಲ್ಲಿಯೇ ವಾಸ. ಬೆಳಿಗ್ಗೆಯಾಗುತ್ತಿದ್ದಲೇ ಇಲ್ಲಿಂದ ಹೊರಡುವ ಗಿಳಿಗಳ ಬಳಗ ಬೇರೆ ಬೇರೆ ಕಡೆ ಆಹಾರ ಹುಡುಕಿ ಹೋಗುತ್ತವೆ. ಸುಮಾರು 150 ಕಿಲೋಮೀಟರ್ ವರೆಗೆ ಸಾಗುವುದು ಈ ಗಿಳಿಗಳ ಸಂಚಾರದ ವಿಶೇಷ. ಹೊಲ, ಗದ್ದೆ ಸೇರಿದಂತೆ ಇತರೆಡೆ ಸುತ್ತಾಡಿ ಮನೆಗೆ ವಾಪಸ್ ಆಗುತ್ತವೆ. ತಾವು ಕಟ್ಟಿರುವ ಗೂಡುಗಳಲ್ಲಿ ತಂಗುತ್ತವೆ.
ಇಂಥ ವಿಶಿಷ್ಟವಾದ ಪಕ್ಷಿಗಳ ವಾಸಸ್ಥಳ ಉಳಿಯಬೇಕು, ಬೆಳೆಯಬೇಕು. ಈ ಕಾರಣಕ್ಕೆ ಈ ಪ್ರದೇಶವನ್ನು ಪಕ್ಷಿಗಳ ಸಂರಕ್ಷಣಾ ಪ್ರದೇಶ ಎಂಬ ಘೋಷಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಎಸ್. ಟಿ. ವೀರೇಶ್ ಅವರು
ಮಹಾನಗರ ಪಾಲಿಕೆಯ ಮೇಯರ್ ಆಗಿದ್ದಾಗ ದಾವಣಗೆರೆ ಗಿಳಿವಿಂಡು ಬಳಗವು ಮನವಿ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ವೀರೇಶ್ ಅವರು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈಗ ಮತ್ತೆ ಮುನ್ನೆಲೆಗೆ ಬಂದಿದ್ದು,
ಸಂರಕ್ಷಣಾ ಪ್ರದೇಶ ಎಂಬ ಘೋಷಣೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ಸಂರಕ್ಷಣಾ ಪ್ರದೇಶವೆಂದರೆ ಏನು…?
ಮರಗಳು ನಾಶವಾದಂತೆ ಗಿಳಿಗಳು ಕಣ್ಮರೆಯಾಗುತ್ತಿವೆ. ಇದೊಂದು ಅದ್ಭುತ ತಾಣ. ಈ ತಾಣದಲ್ಲಿರುವ ಮರಗಳನ್ನು ಯಾವ ಅಭಿವೃದ್ಧಿ ಕಾರ್ಯ ಕೈಗೊಂಡರೂ ಕತ್ತರಿಸಬಾರದು. ಮರಗಳನ್ನು ಪೋಷಿಸಬೇಕು. ಗಿಳಿಗಳ ಆಶ್ರಯ ತಾಣ ಉಳಿಯಬೇಕು
ಎಂಬುದು ಇದರ ಸದುದ್ದೇಶವಾಗಿದೆ.
ಮಹಾನಗರ ಪಾಲಿಕೆ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಈ ಕೆಲಸ ಆಗಬೇಕಾದರೆ ಕೆಲವೊಮ್ಮೆ ಮರಗಳನ್ನು ಕಡಿಯಲೇಬೇಕಾಗುತ್ತದೆ. ಆದ್ರೆ, ಈ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು. ಗಿಳಿಗಳ ಸಂರಕ್ಷಣಾ ಪ್ರದೇಶವೆಂದು ಘೋಷಿಸಿದರೆ ಮುಂದಿನ ಪೀಳಿಗೆಗೂ ನೋಡಲು ಸಿಗುತ್ತದೆ.
ಇಲ್ಲೇಕೆ ಇಷ್ಟೊಂದು ಗಿಳಿಗಳು (PARROTS) :
ಸಮಶೀತೋಷ್ಣ ಪ್ರದೇಶದಲ್ಲಿ ಹೆಚ್ಚಾಗಿ ಗಿಳಿಗಳು ವಾಸ ಮಾಡುತ್ತವೆ. ವಿಶಾಲವಾದ ಮರಗಳಿರಬೇಕು. ದೊಡ್ಡದಾದ ಆಲದ ಮರ ಸೇರಿದಂತೆ ಇತರೆ ಮರಗಳ ಮೇಲೆ ಇರುತ್ತವೆ. ಕೆಲವೊಂದು ಮರಗಳು ದೊಡ್ಡದಿದ್ದರೂ ಸಹ ಅಲ್ಲೇ ವಾಸ ಮಾಡುವುದಿಲ್ಲ. ಇದು ಅವುಗಳ ಜೀವನ ಶೈಲಿ.
ಮೊಟ್ಟೆ ಎಲ್ಲಿ ಇಡುತ್ತವೆ:
ಇನ್ನು ಗಿಳಿಗಳು ಒಣಗಿದ ಮರ ಹಾಗೂ ಹರಿಯುವ ನೀರಿನ ಪ್ರದೇಶಗಳಲ್ಲಿ ಹೆಚ್ಚಾಗಿ ಮೊಟ್ಟೆ ಇಡುತ್ತವೆ. ನಿರ್ಜನ ಪ್ರದೇಶದಲ್ಲಿ ಯಾವುದೇ ಗಿಜಿ ಗಿಜಿ, ಜನಸಂದಣಿ ಇರಬಾರದು. ಇಂಥ ಪ್ರದೇಶ ಆಯ್ಕೆ ಮಾಡಿಕೊಂಡು ಮೊಟ್ಟೆ ಸಂರಕ್ಷಿಸಿಕೊಂಡು ಮರಿ ಮಾಡುತ್ತವೆ.
ಗಿಳಿವಿಂಡು ನೋಡೋಣ ಬನ್ನಿ:
ಇನ್ನು ಗಿಳಿಗಳು, ಮರಗಳ ಉಳಿವಿಗೆ ದಾವಣಗೆರೆ ಗಿಳಿವಿಂಡು ಬಳಗ ಟೊಂಕಕಟ್ಟಿ ನಿಂತಿದೆ. ಇದಕ್ಕಾಗಿ ಕಳೆದ ಎರಡರಿಂದ ಮೂರು ವರ್ಷಗಳಿಂದಲೂ ಕೆಲಸ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಗಿಳಿಗಳನ್ನು ದೂರದಿಂದಲೇ ನೋಡುವ ಭಾಗ್ಯದ ಜೊತೆಗೆ ಮರಗಳನ್ನು ಉಳಿಸಬೇಕೆಂಬ ಉದ್ದೇಶವಿಟ್ಟುಕೊಂಡು ಮುನ್ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಜೂನ್ 5ರಂದು ಸಂಜೆ 5.30ಕ್ಕೆ ನಗರದ ಜನತಾ ಬಜಾರ್ (JANATHA BAJAR) ಟೆರೇಸ್ ಮೇಲೆ ಗಿಳಿವಿಂಡು ನೋಡೋಣ ಬನ್ನಿ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದೆ. ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ದಾವಣಗೆರೆ (DAVANAGERE) ವಿಶ್ವವಿದ್ಯಾನಿಲಯದ (DAVANAGERE UNIVERSCITY) ಪ್ರಾಧ್ಯಾಪಕ ಪ್ರೊ. ಶಿಶುಪಾಲ್ ಉಪನ್ಯಾಸ ನೀಡಲಿದ್ದಾರೆ. ಜನತಾ ಬಜಾರ್ (JANATHA BAJAR) ಅಧ್ಯಕ್ಷ (PRESIDENT) ಗುರುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲಿಕೆಯ ಮಾಜಿ ಮೇಯರ್ ಎಸ್. ಟಿ. ವೀರೇಶ್, ಹಿರಿಯ ಪತ್ರಕರ್ತ ಕೆ. ಚಂದ್ರಣ್ಣ, ಎಸ್ ಬಿ ಎಂ ನಿವೃತ್ತ ಅಧಿಕಾರಿ ಅಜಿತ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಎಸ್. ಟಿ. ವೀರೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ರಾಜಶೇಖರ್ ಸಕ್ಕಟ್ಟು, ಅಶೋಕ್, ಎಂ. ಜಿ. ಶ್ರೀಕಾಂತ್ ಮತ್ತಿತರರು ಹಾಜರಿದ್ದರು.