ನವದೆಹಲಿ: ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರು ಹಾಗೂ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ರಾಷ್ಟ್ರೀಯ ಅಧ್ಯಕ್ಷರಾದ ಚಿರಾಗ್ ಪಾಸ್ವಾನ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ.
ಸಚಿವರಿಗೆ ‘ಕಠ್ಕೋರ್ ಭಯೋತ್ಪಾದಕರು’ (Hardcore Terrorists) ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಅನಾಮಧೇಯ ಪತ್ರವೊಂದು ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಅಪರಿಚಿತ ವ್ಯಕ್ತಿಗಳ ಕಳುಹಿಸಿರುವ ಈ ಪತ್ರದಲ್ಲಿ ಎರಡು ಮೊಬೈಲ್ ನಂಬರ್‌ಗಳನ್ನು ನಮೂದಿಸಲಾಗಿದ್ದು, “ನಿಮ್ಮನ್ನು ಶೀಘ್ರದಲ್ಲೇ ಕಠ್ಕೋರ್ ಭಯೋತ್ಪಾದಕರು ಹತ್ಯೆ ಮಾಡಲಿದ್ದಾರೆ” ಎಂದು ನೇರವಾಗಿ ಬೆದರಿಕೆ ಹಾಕಲಾಗಿದೆ. ಪ್ರಸ್ತುತ ‘ಝೆಡ್-ಪ್ಲಸ್’ ಭದ್ರತೆಯನ್ನು ಹೊಂದಿರುವ ಚಿರಾಗ್ ಪಾಸ್ವಾನ್ ಅವರ ಜೀವಕ್ಕೆ ಬಂದಿರುವ ಈ ಗಂಭೀರ ಬೆದರಿಕೆಯ ಕುರಿತು ಸಚಿವರ ಆಪ್ತ ಕಾರ್ಯದರ್ಶಿಯು ಕೂಡಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಅಧಿಕೃತವಾಗಿ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಆರ್‌ಪಿಎಫ್ ಮತ್ತು ಬಿಹಾರ ರಾಜ್ಯ ಸರ್ಕಾರಕ್ಕೂ ಅಗತ್ಯ ಮಾಹಿತಿ ಮುಟ್ಟಿಸಲಾಗಿದೆ. ಸಚಿವರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಕೂಡಲೇ ತುರ್ತು ತನಿಖೆ ಕೈಗೊಳ್ಳುವಂತೆ ಮತ್ತು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.
- Amit Shah Home Ministry
- Bihar government
- Chirag Paswan death threat
- Chirag Paswan news kannada
- CRPF security review
- Hardcore terrorists threat letter
- LJP Ram Vilas
- Union Minister threatened
- ಕೇಂದ್ರ ಸಚಿವರಿಗೆ ಬೆದರಿಕೆ ಪತ್ರ
- ಗೃಹ ಸಚಿವಾಲಯ
- ಚಿರಾಗ್ पासवान ಜೀವ ಬೆದರಿಕೆ
- ಝೆಡ್ ಪ್ಲಸ್ ಭದ್ರತೆ
- ದೆಹಲಿ ಸುದ್ದಿ
- ಭಯೋತ್ಪಾದಕರ ಬೆದರಿಕೆ
- ಲೋಕ ಜನಶಕ್ತಿ ಪಕ್ಷ





Leave a comment