SUDDIKSHANA KANNADA NEWS/ DAVANAGERE/ DATE:20-06-2024
ದಾವಣಗೆರೆ: ಜಿಲ್ಲೆಯ ಮೆಣಸಿನಕಾಯಿ ಬೆಲೆಗಾರರು ಹಾಗೂ ನರ್ಸರಿ ಮಾಲೀಕರು ಉತ್ತಮ ಬೆಳೆಗಳನ್ನು ಪಡೆಯಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು.
ಸೂಚನೆಗಳು:
ರೈತರು ಪ್ರಸಕ್ತ ಸಾಲಿಗೆ ಮೆಣಸಿನಕಾಯಿ ಸಸಿಯನ್ನು ಜಿ.ಎಸ್.ಟಿ ನೊಂದಣಿಯನ್ನು ಹೊಂದಿರುವ ನರ್ಸರಿಗಳಿಂದಲೇ ಖರೀದಿಸಿ ನಾಟಿ ಮಾಡಿ, ಬಿಲ್ಲನ್ನು ಪಹಣಿಯಲ್ಲಿರುವ ರೈತರ ಹೆಸರಿಗೆ ಪಡೆಯುವುದು
ಕಡ್ಡಾಯವಾಗಿದೆ.
ರೈತ ಬಾಂಧವರು ಒಂದೇ ಕಂಪನಿಯ ಬೀಜಗಳ ಮೇಲೆ ಅವಲಂಭಿತವಾಗದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಧಿಕ ಇಳುವರಿಯ ಇತರೆ ಕಂಪನಿಯ ಬೀಜಗಳನ್ನು ಸಹ ಖರೀದಿಸಿ ನಾಟಿ ಮಾಡಬಹುದು.
ರೈತರು ಸ್ವೀಕರಿಸಿದ ರಸೀದಿಯನ್ನು ಬೆಳೆ ಮಾರಾಟ ಆಗುವವರೆಗೂ ಜೋಪಾನವಾಗಿ ಇಟ್ಟುಕೊಳ್ಳುವುದು. ಬೀಜಗಳನ್ನು ನೇರವಾಗಿ ನಾಟಿ ಮಾಡುವ ಮುನ್ನ ಬೀಜೋಪಚಾರಗೊಳಿಸಬೇಕು.
ರೈತ ಬಾಂಧವರಿಗೆ ಮೆಣಸಿನಕಾಯಿ ಸಸಿಯನ್ನು ಮಾರಾಟಮಾಡುವ ನರ್ಸರಿ ಮಾಲಿಕರುಗಳು ತಮ್ಮ ನರ್ಸರಿಯ ಜಿ.ಎಸ್.ಟಿ ನೊಂದಣಿಯನ್ನು ಮಾಡಿಕೊಂಡ ನಂತರವೇ ತರಕಾರಿ ಸಸಿ ತಯಾರಿಸಲು ಮುಂದಾಗಬೇಕು. ನರ್ಸರಿಗಳಲ್ಲಿ ತಾವು ಉಪಯೋಗಿಸುವ ಬೀಜ, ಗೊಬ್ಬರ, ರೋಗ ಮತ್ತು ಕೀಟನಾಶಕಗಳ ವಿವರಗಳನ್ನು ವಹಿಯಲ್ಲಿ ನಮೂದಿಸಿ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು.
ನರ್ಸರಿಗಳಲ್ಲಿ ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕಗಳ ವಹಿಯನ್ನು ಸಹ ನಿರ್ವಹಿಸಬೇಕು. ಹಾಗೂ ನರ್ಸರಿಗಳಲ್ಲಿ ಸಸಿಗಳನ್ನು ಉತ್ಪಾದಿಸಲು ಕೋಕೋ ಪಿಟ್ ಅನ್ನು ಖರೀದಿಸಿ,
ಉಪಯೋಗಿಸಿ ಸದರಿ ಬಿಲ್ಲುಗಳ ವಿವರವನ್ನು ವಹಿಗಳಲ್ಲಿ ನಿರ್ವಹಿಸುವುದು.
ರೈತರ ಹಿಂದಿನ ವರ್ಷದಲ್ಲಿ ಇಳುವರಿ ತೀರ ಕುಂಠಿತವಾಗಿದ್ದು, ಆರ್ಥಿಕವಾಗಿ ನಷ್ಟ ಅನುಭವಿಸಿರುವುದರಿಂದ ಪ್ರಸಕ್ತ ಸಾಲಿಗೆ ನರ್ಸರಿ ಮಾಲಿಕರು ಈ ಹಿಂದಿನ ಸಾಲಿನಂತಯೇ ರೈತರಿಗೆ ರೂ.40 ಪೈಸೆ ದರದಲ್ಲಿಯೇ
ಉತ್ತಮ ಗುಣಮಟ್ಟದ ಸಸಿಗಳನ್ನು ತಯಾರಿಸಿ ಪೂರೈಸಬೇಕು.