Home ದಾವಣಗೆರೆ ಮುಸ್ಲಿಂ ಯುವಕನ ಪ್ರೀತಿಸಿ ಎಸ್ಕೇಪ್ ಆಗಿದ್ದ ಬೆಂಗಳೂರಿನ ಹಿಂದೂ ಯುವತಿ ಹೋಂಸ್ಟೇನಲ್ಲಿ ಹೆಣವಾದಳು: ಪ್ರಿಯಕರ ಅರೆಪ್ರಜ್ಞಾವಸ್ಥೆ, ಕೊಲೆಯೋ? ಆತ್ಮಹತ್ಯೆಯೋ?
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಮುಸ್ಲಿಂ ಯುವಕನ ಪ್ರೀತಿಸಿ ಎಸ್ಕೇಪ್ ಆಗಿದ್ದ ಬೆಂಗಳೂರಿನ ಹಿಂದೂ ಯುವತಿ ಹೋಂಸ್ಟೇನಲ್ಲಿ ಹೆಣವಾದಳು: ಪ್ರಿಯಕರ ಅರೆಪ್ರಜ್ಞಾವಸ್ಥೆ, ಕೊಲೆಯೋ? ಆತ್ಮಹತ್ಯೆಯೋ?

Share
ಪ್ರಿಯಕರ
Share

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಹೋಂಸ್ಟೇಯೊಂದರಲ್ಲಿ ತಂಗಿದ್ದ ಬೆಂಗಳೂರು ಮೂಲದ ಯುವತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಪ್ರಿಯಕರ ಅದೇ ಕೊಠಡಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮೃತಪಟ್ಟಿದ್ದು, ಆಕೆಯ ಪ್ರಿಯಕರ, ಕೇರಳ ಮೂಲದ ಸಂಜೀತ್ ಅಲಿ ಎಂಬಾತನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೋಷಕರ ವಿರೋಧ ಹಾಗೂ ನಾಪತ್ತೆ ದೂರು:

ಪೊಲೀಸ್ ಮೂಲಗಳ ಪ್ರಕಾರ, ಹಿಂದೂ ಧರ್ಮದ ಯುವತಿ ಹಾಗೂ ಮುಸ್ಲಿಂ ಸಮುದಾಯದ ಸಂಜೀತ್ ಅಲಿ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೇ ಯುವತಿಯ ಮನೆಯವರ ತೀವ್ರ ವಿರೋಧವಿತ್ತು. ಇದೇ ಕಾರಣಕ್ಕೆ ಇಬ್ಬರೂ ಇತ್ತೀಚೆಗೆ ಮನೆಯಿಂದ ಓಡಿ ಹೋಗಿದ್ದರು (ಎಲೋಪ್). ಈ ಸಂಬಂಧ ಯುವತಿಯ ಪೋಷಕರು ಈ ಹಿಂದೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನೂ ದಾಖಲಿಸಿದ್ದರು ಎನ್ನಲಾಗಿದೆ.

ಹೋಂಸ್ಟೇನಲ್ಲಿ ನಡೆದಿದ್ದೇನು?

ಯುವತಿಯು ಕ್ರೀಡಾ ಪ್ರಾಧಿಕಾರದ (SAI) ಆವರಣದಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಲು 4-5 ದಿನಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಳು. ಈ ವಿಷಯ ತಿಳಿದ ಪ್ರಿಯಕರ ಸಂಜೀತ್ ಕೂಡ ಇಲ್ಲಿಗೆ ಬಂದು, ಇಬ್ಬರೂ ಕಳೆದ ಮೂರು ದಿನಗಳಿಂದ ಸ್ಥಳೀಯ ಹೋಂಸ್ಟೇಯೊಂದರಲ್ಲಿ ತಂಗಿದ್ದರು.

ಆದರೆ ಸೋಮವಾರ ಕೊಠಡಿಯಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದು, ಸಂಜೀತ್ ಪ್ರಜ್ಞೆ ತಪ್ಪಿ ಬಿದ್ದಿದ್ದನು. ಸ್ಥಳದಲ್ಲಿ ಹಗ್ಗ, ಕೆಲವು ಮಾತ್ರೆಗಳು ಹಾಗೂ ವಾಂತಿ ಮಾಡಿಕೊಂಡಿರುವ ಕುರುಹುಗಳು ಪತ್ತೆಯಾಗಿವೆ. ಆದರೆ ಯುವತಿಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳಿಲ್ಲ.

ಕೊಲೆಯೋ? ಆತ್ಮಹತ್ಯೆಯೋ? ಪೊಲೀಸ್ ತನಿಖೆ:

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಲ್ ಚೌಕ್ಸಿ, “ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಶವದ ಮೇಲೆ ಯಾವುದೇ ಮೇಲ್ನೋಟದ ಗಾಯಗಳಿಲ್ಲದ ಕಾರಣ ವಿಷಪ್ರಾಶನವಾಗಿದೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಸದ್ಯ ಪ್ರಜ್ಞಾಹೀನನಾಗಿರುವ ಸಂಜೀತ್ ಅಲಿ ಚೇತರಿಸಿಕೊಂಡು ಹೇಳಿಕೆ ನೀಡಿದ ಬಳಿಕ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ಹಿಂದಿನ ಅಸಲಿ ರಹಸ್ಯ ಬಯಲಾಗಬೇಕಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles