Home ಕ್ರೈಂ ನ್ಯೂಸ್ ಬಿಜೆಪಿ ಶಾಸಕ ರಿತು ಬರಣ್ ಶರ್ಮಾ ಮೇಲೆ ಡಾಗರ್‌ನಿಂದ ಹಲ್ಲೆಗೆ ಯತ್ನಿಸಿದ ಕುಡಿತದ ಮತ್ತಿನಲ್ಲಿದ್ದ ಟ್ರಕ್ ಚಾಲಕ ಬಂಧನ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬಿಜೆಪಿ ಶಾಸಕ ರಿತು ಬರಣ್ ಶರ್ಮಾ ಮೇಲೆ ಡಾಗರ್‌ನಿಂದ ಹಲ್ಲೆಗೆ ಯತ್ನಿಸಿದ ಕುಡಿತದ ಮತ್ತಿನಲ್ಲಿದ್ದ ಟ್ರಕ್ ಚಾಲಕ ಬಂಧನ

Share
ಶಾಸಕ
Share

ಗುವಾಹಾಟಿ: ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಮೇಲೆ ಮದ್ಯದ ಮತ್ತಿನಲ್ಲಿದ್ದ ಟ್ರಕ್ ಚಾಲಕನೊಬ್ಬ ಡಾಗರ್ (ಬಾಕು) ನಿಂದ ದಾಳಿ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಬಾರ್ಚಲ್ಲಾ ಕ್ಷೇತ್ರದ ಬಿಜೆಪಿ ಶಾಸಕ ರಿತು ಬರಣ್ ಶರ್ಮಾ ಅವರು ತಮ್ಮ ಕಚೇರಿಯ ಮುಂದೆ ಪಕ್ಷದ ಕಾರ್ಯಕರ್ತರೊಂದಿಗೆ ನಿಂತಿದ್ದಾಗ, ವೇಗವಾಗಿ ಬಂದ ಟ್ರಕ್ ಕಾರ್ಯಕರ್ತರೊಬ್ಬರ ಪಾರ್ಕ್ ಮಾಡಲಾಗಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಘಟನೆ ಸಂಬಂಧ ಶಾಸಕ ಶರ್ಮಾ ಹಾಗೂ ಕಾರ್ಯಕರ್ತರು ಚಾಲಕನ ಬಳಿ ಶಾಂತ ರೀತಿಯಿಂದ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೆ, ತೀವ್ರ ಮದ್ಯಸೇವನೆ ಮಾಡಿದ್ದ ಚಾಲಕ, ಟ್ರಕ್‌ನಿಂದ ಡಾಗರ್ (ಬಾಕು) ಹೊರತೆಗೆದು ಶಾಸಕ ಹಾಗೂ ಅವರ ಬೆಂಬಲಿಗರ ಮೇಲೆ ದಾಳಿ ಮಾಡಲು ಧಾವಿಸಿದ್ದಾನೆ. ಸಾರ್ವಜನಿಕರು ಆತನನ್ನು ತಡೆಯಲು ಯತ್ನಿಸಿದರೂ ಆತ ಶಾಸಕರ ಕಡೆಗೆ ಮುನ್ನುಗ್ಗುವುದು ವಿಡಿಯೋದಲ್ಲಿ ಕಂಡುಬಂದಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಚಾಲಕನಿಗೆ ಸರಿಯಾಗಿ ಧರ್ಮದೇಟು ನೀಡಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ದಾಳಿಯಲ್ಲಿ ಶಾಸಕ ರಿತು ಬರಣ್ ಶರ್ಮಾ ಅವರು ಕೂದಲೆಳೆಯ ಅಂತರದಲ್ಲಿ ಗಾಯವಿಲ್ಲದೆ ಪಾರಾಗಿದ್ದು, ಒಬ್ಬ ಹೋಮ್ ಗಾರ್ಡ್ ಹಾಗೂ ಇಬ್ಬರು ಪಕ್ಷದ ಕಾರ್ಯಕರ್ತರು ಗಾಯಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles