ಬೆಂಗಳೂರು: ಭಾರತದ ಸ್ವಾತಂತ್ರ್ಯ ಎಂಬ ಒಂದೇ ಧ್ಯೇಯದಿಂದ ಒಗ್ಗೂಡಿ ಭಾರತ ಮಾತೆಗಾಗಿ ಅಪಾರ ತ್ಯಾಗಗಳನ್ನು ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಟ್ಟಿ ನೀಡುತ್ತೇನೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆರೆಸ್ಸೆಸ್‌ನ 10 ಸ್ವಾತಂತ್ರ್ಯ ಹೋರಾಟಗಾರರನ್ನು ಹೆಸರಿಸಬಹುದೇ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಪ್ರಿಯಾಂಕ್ ಗಾಂಧಿ ನೀಡಿರುವ ಪಟ್ಟಿ:
1. ಮಹಾತ್ಮ ಗಾಂಧಿ
2.ಪಂಡಿತ್ ಜವಾಹರಲಾಲ್ ನೆಹರು
3.ಸರ್ದಾರ್ ವಲ್ಲಭಭಾಯಿ ಪಟೇಲ್
4.ನೇತಾಜಿ ಸುಭಾಷ್ ಚಂದ್ರ ಬೋಸ್
5.ಡಾ. ಬಿ.ಆರ್.ಅಂಬೇಡ್ಕರ್
6.ಭಗತ್ ಸಿಂಗ್
7.ಚಂದ್ರಶೇಖರ್ ಆಜಾದ್
8.ಉಧಮ್ ಸಿಂಗ್
9.ಬಾಲಗಂಗಾಧರ ತಿಲಕ್
10.ಲಾಲಾ ಲಜಪತ್ ರಾಯ್
11.ಗೋಪಾಲ ಕೃಷ್ಣ ಗೋಖಲೆ
12.ಮೌಲಾನಾ ಅಬುಲ್ ಕಲಾಂ ಆಜಾದ್
13.ಡಾ. ರಾಜೇಂದ್ರ ಪ್ರಸಾದ್
14.ಸರೋಜಿನಿ ನಾಯ್ಡು
15.ಅರುಣಾ ಅಸಫ್ ಅಲಿ
16.ಖಾನ್ ಅಬ್ದುಲ್ ಗಫಾರ್ ಖಾನ್
17.ದಾದಾಭಾಯಿ ನೌರೋಜಿ
18.ಮಾತಂಗಿನಿ ಹಜ್ರಾ
19.ಶಿವರಾಮ ರಾಜಗುರು (ರಾಜಗುರು)
20.ಸಿ. ರಾಜಗೋಪಾಲಾಚಾರಿ
21.ಮೇಡಂ ಭಿಕಾಜಿ ಕ್ಯಾಮಾ
22.ಹಂಸ ಮೆಹ್ತಾ
23.ಅಶ್ಫಾಕುಲ್ಲಾ ಖಾನ್
24.ಸರ್ದಾರ್ ಉಧಮ್ ಸಿಂಗ್
25.ಅಲ್ಲೂರಿ ಸೀತಾರಾಮ ರಾಜು
ಈ ಮೇಲೆ ಮೇಲೆ ನೀಡಿರುವುದು ವಿಭಿನ್ನ ಸಿದ್ಧಾಂತಗಳಿಂದ ಬಂದ ನಾಯಕರು. ಆರ್ ಎಸ್ ಎಸ್ ನವರು ನಮ್ಮ ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರ ಕೊಡುಗೆಗಳು ಅಥವಾ ತ್ಯಾಗಗಳನ್ನು ಸ್ಪಷ್ಟವಾಗಿ ಹೇಳಬಹುದೇ? ಎಂದು ಪ್ರಿಯಾಂಕ್ ಖರ್ಗೆ ಅವರು
ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.





Leave a comment