ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere:ಅಪಘಾತಕ್ಕೀಡಾಗಿದ್ದ ಬಸ್ ವೀಕ್ಷಿಸಿದ ಡಿಸಿ ಡಾ. ಎಂ. ವಿ. ವೆಂಕಟೇಶ್ ಕೊಟ್ಟ ಸೂಚನೆ ಏನು…? ಹೇಳಿದ್ದೇನು….?

On: September 22, 2023 5:31 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:22-09-2023

ದಾವಣಗೆರೆ (Davanagere): ಚಿತ್ರದುರ್ಗ ದಿಂದ ದಾವಣಗೆರೆಗೆ ಆಗಮಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹೆಬ್ಬಾಳ ಸಮೀಪ ಬ್ರೇಕ್ ವಿಫಲವಾಗಿ ಡಿವೈಡರ್ ಗೆ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಸುದ್ದಿಯನ್ನೂ ಓದಿ: 

Davanagere: ಸ್ವಲ್ಪ ಯಾಮಾರಿದ್ದರೂ ಆಗ್ತಿತ್ತು ಅನಾಹುತ: ಚಾಲಕನ ಸಮಯಪ್ರಜ್ಞೆ ಉಳಿಸಿತು 40 ಪ್ರಯಾಣಿಕರ ಪ್ರಾಣ…!

ತಕ್ಷಣ ಘಟನಾ ಸ್ಥಳಕ್ಕೆ ತಕ್ಷಣ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಭೇಟಿ ಪರಿಶೀಲನೆ ನಡೆಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ನೀಡಲು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾತ್ರವಲ್ಲ, ಘಟನೆ ಹೇಗಾಯ್ತು ಎಂಬ ಕುರಿತಂತೆ ಮಾಹಿತಿ ಪಡೆದರು.

ಕೆ ಎಸ್ ಆರ್ ಟಿ ಸಿ ಬಸ್ ದಾವಣಗೆರೆ ನಗರದಲ್ಲಿ ಸಂಚರಿಸಬೇಕಿತ್ತು. ಆದ್ರೆ, ಚಿತ್ರದುರ್ಗಕ್ಕೆ ಯಾಕೆ ಈ ಬಸ್ ಕಳುಹಿಸಲಾಗಿತ್ತು ಎಂಬ ಪ್ರಶ್ನೆ ಕಾಡಿತ್ತು. ನಗರದಲ್ಲಿ ಬಸ್ ಸಂಚಾರಕ್ಕೆ ಬಸ್ ಗಳಿಲ್ಲ. ಇಂಥ ಪರಿಸ್ಥಿತಿಯಲ್ಲಿ ಚಿತ್ರದುರ್ಗಕ್ಕೆ ಕಳುಹಿಸಿಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆಯನ್ನೂ ಮಾಡಲಾಗಿತ್ತು. ಬ್ರೇಕ್ ಫೇಲ್ ಆದ ಕಾರಣ ಅಪಘಾತಕ್ಕೀಡಾಗಿತ್ತು. ಇದರಿಂದಾಗಿ ಬಸ್ ನ ಮುಂದಿನ ಗಾಜು ಪುಡಿಪುಡಿಯಾಗಿತ್ತು. ಬಸ್ ಗೂ ಹಾನಿಯಾಗಿತ್ತು.

ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ಕೆ ಎಸ್ ಆರ್ ಟಿ ಸಿ ಬಸ್ ಬರುತಿತ್ತು. ದಾವಣಗೆರೆ ತಾಲೂಕಿನ ಹೆಬ್ಬಾಳ್ ಟೋಲ್ ಗೇಟ್ ಬಳಿ ಬ್ರೇಕ್ ಫೇಲಾಗಿದ್ದು, ಚಾಲಕನ ಚಾಕಚಕ್ಯತೆಯಿಂದ 40 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಪ್ರಯಾಣಿಕರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಚಾಲಕ ಸೇರಿದಂತೆ 12 ಮಂದಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಎಲ್ಲರೂ ಆರೋಗ್ಯವಾಗಿದ್ದಾರೆ, ಕ್ಷೇಮವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದ್ದಾರೆ.

DAVANAGERE BUS ACCIDENT
DAVANAGERE BUS ACCIDENT

ಬಸ್ ಬೇರೆ ಜಿಲ್ಲೆಗೆ ಕಳುಹಿಸಿಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಲೋಪವಾಗಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಮುಂದೆ ಈ ರೀತಿಯ ಘಟನೆಗಳಾಗದಂತೆ ಎಚ್ಚರ ವಹಿಸಿ. ಬಸ್ ಗಳ ಸಂಚಾರ ಹಾಗೂ ಜನರ ಸುರಕ್ಷೆ ನಮ್ಮ ಜವಾಬ್ದಾರಿ. ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದರು. ಮಾತ್ರವಲ್ಲ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಇಂದು ಸಂಜೆ ಹೆಬ್ಬಾಳ ಸಮೀಪ ಚಿತ್ರದುರ್ಗದಿಂದ ದಾವಣಗೆರೆಗೆ ಆಗಮಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ವಿಫಲವಾಗಿ ಡಿವೈಡರ್ ಗೆ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವುದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲು ಮತ್ತು ಪರಿಹಾರ ಒದಗಿಸಲು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರು ಸ್ಥಳ ಪರಿಶೀಲನೆ ನಡೆಸಿ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment