SUDDIKSHANA KANNADA NEWS/ DAVANAGERE/ DATE:22-09-2023
ದಾವಣಗೆರೆ (Davanagere): ಚಾಲಕ ಸ್ವಲ್ಪ ಯಾಮಾರಿದ್ದರೂ ಅನಾಹುತವಾಗುತಿತ್ತು. ಬಸ್ ನಲ್ಲಿ 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್ ಬ್ರೇಕ್ ಫೇಲ್ ಆಗುತ್ತಿದ್ದಂತೆ ಚಾಲಕ ಕಂಗಾಲಾಗದೇ ಸ್ವಲ್ಪ ಧೈರ್ಯ ತೆಗೆದುಕೊಂಡು ಬಸ್ ಚಾಲನೆ ಮಾಡಿದ್ದರಿಂದ 40ಕ್ಕೂ ಹೆಚ್ಚು ಜನರ ಪ್ರಾಣ ಉಳಿದಿದೆ.
ಈ ಸುದ್ದಿಯನ್ನೂ ಓದಿ:
ಭದ್ರಾ ಡ್ಯಾಂ (Bhadra Dam) ನೀರು ಹರಿಸಲು ಪಟ್ಟು, ಬೆಣ್ಣೆನಗರಿಯಲ್ಲಿ ಕಾವೇರಿದ ರೈತರ ಹೋರಾಟ: ರೈತ ಮುಖಂಡರೂ ಸೇರಿ ನೂರಾರು ರೈತರ ಬಂಧನ ಆಗಿದ್ದೇಕೆ…?
ಹೌದು. ಪ್ರಯಾಣಿಕರ ಜೀವ ಉಳಿಸಿದ ಚಾಲಕನ ಸಮಯ ಪ್ರಜ್ಞೆಯಿಂದ 40 ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಏನಾಯ್ತು…?
ಚಿತ್ರದುರ್ಗದಿಂದ ದಾವಣಗೆರೆ (Davanagere)ಕಡೆಗೆ ಕೆ ಎಸ್ ಆರ್ ಟಿ ಸಿ ಬಸ್ ಬರುತಿತ್ತು. ದಾವಣಗೆರೆ (Davanagere) ತಾಲೂಕಿನ ಹೆಬ್ಬಾಳ್ ಟೋಲ್ ಗೇಟ್ ಬಳಿ ಬ್ರೇಕ್ ಫೇಲಾಗಿದೆ. ಈ ವೇಳೆ ಚಾಕಚಕ್ಯತೆ ಪ್ರದರ್ಶಿಸಿದ ಚಾಲಕ ಬಸವರಾಜ್ ಅವರು ಚರಂಡಿ ಮೇಲೆ ಬಸ್ ಓಡಿಸಿದ್ದರ ಪರಿಣಾಮ ಅನಾಹುತ ಸಂಭವಿಸಿಲ್ಲ. ಬಸ್ ವಾಲಿದರೂ ಸಹ ಪ್ರಯಾಣಿಕರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಆ ನಂತರ ಸುರಕ್ಷಿತವಾಗಿ ಬಸ್ ನಿಲುಗಡೆ ಮಾಡಿದ್ದಾರೆ. ಚಾಲಕ ಸೇರಿದಂತೆ 12 ಮಂದಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ.
ಬಸ್ ನ ಮುಂಭಾಗದ ಗ್ಲಾಸ್ ಒಡೆದು ಹೋಗಿದೆ. ಗಾಯಗೊಂಡವರನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ, ಹೈವೇ ಪೊಲೀಸ್ ಆದ ಮಾರುತಿ ಮತ್ತು ಲಕ್ಷ್ಮೀಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು. ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.