SUDDIKSHANA KANNADA NEWS/ DAVANAGERE/ DATE:20-03-2025
ದಾವಣಗೆರೆ: ದಾವಣಗೆರೆ ಮತ್ತು ಚಿತ್ರದುರ್ಗ ಪ್ರದೇಶಗಳ ಎಲ್ಲಾ ಬಿಎಸ್‍ಎನ್‍ಎಲ್ ಗ್ರಾಹಕರು ಪ್ರಸಕ್ತ ಹಣಕಾಸು ವರ್ಷ ಮುಕ್ತಾಯವನ್ನು ಪರಿಗಣಿಸಿ, ಎಲ್ಲಾ ಬಿಎಸ್‍ಎನ್‍ಎಲ್ ಸಿಎಸ್‍ಸಿ ಗಳನ್ನು ಮಾರ್ಚ್ 23 ಮತ್ತು ಮಾರ್ಚ್ 30 ರಂದು ಸಾಮಾನ್ಯ ಕೆಲಸದ ಸಮಯದೊಂದಿಗೆ ತೆರೆದಿಡಲು ನಿರ್ಧರಿಸಲಾಗಿದೆ.
ಎಲ್ಲಾ ಬಿಎಎಸ್‍ಎನ್‍ಎಲ್ ಗ್ರಾಹಕರು ಈ ಸೇವೆಗಳನ್ನು ಬಳಸಿಕೊಳ್ಳಬೇಕೆಂದು ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ:
ಪ್ರಸಕ್ತ ಸಾಲಿನ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 25 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯಿತಿಯ ಎಸ್.ಎಸ್.ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ತಿಳಿಸಿದ್ದಾರೆ.