SUDDIKSHANA KANNADA NEWS/ DAVANAGERE/ DATE:30-11-2024
ಬಾಗಲಕೋಟೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಮಾತ್ರವಲ್ಲ, ಬಿಎಸ್ ವೈ ಹೆಸರಿಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ. ಹೊಸ ಹೆಸರನ್ನೂ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ಅಂದರೆ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ. ಇದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೂವರಿಗಷ್ಟೇ ಸೀಮಿತವಾಗಿದೆ.
ಲಿಂಗಾಯತ ಸಮುದಾಯಕ್ಕೆ ಯಾವ ಕೊಡುಗೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ ಅವರು ಲಿಂಗಾಯತ ಸಮುದಾಯಕ್ಕೆ ಧಕ್ಕೆ ಆದಾಗ, ನೋವು ಆದಾಗ, ಸಮಾಜದವರಿಗೆ ತೊಂದರೆಯಾದಾಗ ಬರಲಿಲ್ಲ. ಬಸವಣ್ಣನ ಹೆಸರು ಹೇಳಿಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು
ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಸವಣ್ಣನವರ ಕೊನೆ ದಿನಗಳ ಕುರಿತಂತೆ ನಾನು ಆಡಿರುವ ಮಾತು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಕ್ಷಮೆಯನ್ನೂ ಕೇಳೋದಿಲ್ಲ, ವಿಷಾದದ ಮಾತೇ ಇಲ್ಲ. ಮತ್ತೊಮ್ಮೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ವಿಷಾದ
ವ್ಯಕ್ತಪಡಿಸಲು ಹೋಗಲ್ಲ. ನನ್ನ ಮಾತಿಗೆ ಬದ್ಧವಿದ್ದೇನೆ ಎಂದು ಗುಡುಗಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದವರು ಡೋಂಗಿ ನಾಟಕ ಮಾಡುತ್ತಿದ್ದರು. ವಕ್ಫ್ ಹೆಸರಿನಲ್ಲಿ ಲಿಂಗಾಯತ ಸಮುದಾಯದ ಮಠಗಳನ್ನು ನುಂಗುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ಇವರ್ಯಾಕೆ ಬಂದಿಲ್ಲ. ಬಾಗಲಕೋಟೆ, ವಿಜಯಪುರ ಜಿಲ್ಲೆಯವರಿಗೆ ಬಸವಣ್ಣನವರಿಗೆ ಕೊನೆ ದಿನಗಳಲ್ಲಿ ಏನಾಗಿತ್ತು ಎಂಬುದು ಗೊತ್ತು. ಸಾವಿರಾರು ವರ್ಷಗಳಿಂದ ಹಿರಿಯರು ಹೇಳಿಕೊಂಡು ಬರುತ್ತಿದ್ದಾರೆ. ಇವರಿಗೇನೂ ಗೊತ್ತಿದೆ.
ಶಾಮನೂರು ಶಿವಶಂಕರಪ್ಪ, ಭೀಮಣ್ಮ ಖಂಡ್ರೆ ಯಡಿಯೂರಪ್ಪ ಮೂವರದ್ದೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಗಿದೆ. ತಾಕತ್ತಿದ್ದರೆ ಬನ್ನಿ. ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲಿಸಿ ಎಂದು ಸವಾಲು ಹಾಕಿದರು.