SUDDIKSHANA KANNADA NEWS/ DAVANAGERE/ DATE:02-02-2024
ದಾವಣಗೆರೆ: ನಾರಿ ಶಕ್ತಿಗೆ ಶಕ್ತಿ ತುಂಬಿದ ಮಸೂದೆ ಮುಂಬರುವ ಮಹಿಳಾ ದಿನಾಚರಣೆಗೆ ಮಹಿಳೆಯರಿಗೆ ಕೊಡುಗೆ ಎಂದು ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪವಾಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರದ 6ನೇ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಸಂಬಲೀಕರಣಕ್ಕೆ ‘ಲಕ್ಪಪತಿ ದೀದಿ’ ಯೋಜನೆ ಬಡ್ಡಿ ರಹಿತ ಸಾಲ, ಅವುಗಳ ಸದುಪಯೋಗ ವನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ರೂಪಿಸಕೊಳ್ಳಬೇಕು. ಆಶಾ ಕಾರ್ಯಕರ್ತೆಯರಿಗೆ ಆಯುಷ್ಯನ್ ಮಾನ್ ಭಾರತ ಯೋಜನೆ, ಉಚಿತ ಆರೋಗ್ಯ ಭಾಗ್ಯ, 9-14 ವರ್ಷದ ಹೆಣ್ಣು ಮಕ್ಕಳಿಗೆ ಸರ್ವೈಕಲ್ ಕ್ಯಾನ್ಸರ್ ತಡೆಗೆ ವ್ಯಾಕ್ಸಿನ್, ಸಂಸತ್ತಿನಲ್ಲಿ ಮಹಿಳೆಯರಿಗೆ ಮಿಸಲಾತಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯದಡಿಯಲ್ಲಿ ಸಮಾಜದ ಎಲ್ಲಾ ವರ್ಗದ ಮಹಿಳೆಯರಿಗೆ, ರೈತರು, ಬಡವರು, ಯುವಕರಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಯುವಕರ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ. ಮಧ್ಯಮ ವರ್ಗಕ್ಕೆ ಇದೊಂದು ಐತಿಹಾಸಿಕ ನಿರ್ಧಾರ. ಪ್ರಧಾನಮಂತ್ರಿ ನರೇಂದ್ರ ಮೋದಿ, ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಹಿಳೆಯರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಪುಷ್ಪಾ ವಾಲಿ ಹೇಳಿದ್ದಾರೆ.