Home ಕ್ರೈಂ ನ್ಯೂಸ್ ಮನೆಗೆ ಕರೆಸಿ ಸಿಕ್ಕಿಬೀಳುವಂತೆ ಮಾಡಿದ ಪ್ರೇಯಸಿ! ತಡರಾತ್ರಿ ಹೊಲದಲ್ಲೇ ಸಪ್ತಪದಿ ತುಳಿದ ಪ್ರೇಮಿಗಳು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮನೆಗೆ ಕರೆಸಿ ಸಿಕ್ಕಿಬೀಳುವಂತೆ ಮಾಡಿದ ಪ್ರೇಯಸಿ! ತಡರಾತ್ರಿ ಹೊಲದಲ್ಲೇ ಸಪ್ತಪದಿ ತುಳಿದ ಪ್ರೇಮಿಗಳು!

Share
ಮನೆ
Share

ಪಾಟ್ನಾ / ಬಿಹಾರ: ಪ್ರೀತಿಯನ್ನು ದಕ್ಕಿಸಿಕೊಳ್ಳಲು ಪ್ರೇಮಿಗಳು ಏನೇನೋ ಸಾಹಸ ಮಾಡುವುದನ್ನು ಕೇಳಿದ್ದೇವೆ. ಆದರೆ ಬಿಹಾರದ ಹಳ್ಳಿಯೊಂದರಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನನ್ನೇ ಮದುವೆಯಾಗಲು ಹೆಣೆದ ರಹಸ್ಯ ಯೋಜನೆ ಈಗ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕುಟುಂಬಸ್ಥರು ತಮ್ಮ ಮದುವೆಗೆ ಒಪ್ಪುವುದಿಲ್ಲ ಎಂಬುದನ್ನು ಅರಿತ ಯುವತಿ, ಪ್ರಿಯಕರನಿಗೆ ಮಧ್ಯರಾತ್ರಿ ತನ್ನ ಮನೆಗೆ ಬರುವಂತೆ ತಿಳಿಸಿದ್ದಳು. ಇಬ್ಬರೂ ಏಕಾಂತದಲ್ಲಿದ್ದಾಗ ಮನೆಯವರಿಗೆ ಅನುಮಾನ ಬಂದು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಇದರಿಂದ ಗಾಬರಿಗೊಂಡ ಯುವಕ ತಪ್ಪಿಸಿಕೊಂಡು ಹೊಲದ ಕಡೆಗೆ ಓಡಿದರೂ, ಗ್ರಾಮಸ್ಥರು ಹಾಗೂ ಮನೆಯವರು ಆತನನ್ನು ಸುತ್ತುವರಿದು ಹಿಡಿದಿದ್ದಾರೆ.
ಆಗ ಸ್ಥಳಕ್ಕೆ ಧಾವಿಸಿದ ಯುವತಿ, ಎಲ್ಲರ ಸಮ್ಮುಖದಲ್ಲೇ ಪ್ರಿಯಕರನನ್ನು ತಬ್ಬಿಕೊಂಡು “ಮದುವೆಯಾದರೆ ಈತನನ್ನೇ ಆಗುವುದು” ಎಂದು ಹಠ ಹಿಡಿದಿದ್ದಾಳೆ. ಇಬ್ಬರೂ ಸಿಕ್ಕಿಬೀಳುವಂತೆ ಆಕೆಯೇ ಈ ಮಾಸ್ಟರ್‌ ಪ್ಲಾನ್ ರೂಪಿಸಿದ್ದಳು ಎಂಬುದು ತಿಳಿದುಬಂದಿದೆ. ಪರಿಸ್ಥಿತಿಯನ್ನು ಅರಿತ ಗ್ರಾಮದ ಹಿರಿಯರು ತಡಮಾಡದೆ ಹೊಲದಲ್ಲೇ ಮಧ್ಯರಾತ್ರಿ ಇಬ್ಬರಿಗೂ ವಿವಾಹ ನೆರವೇರಿಸಿದ್ದಾರೆ. ಮದುವೆ ಮುಗಿಯುತ್ತಿದ್ದಂತೆ “ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ತಾನೇ?” ಎಂದು ಯುವತಿ ಕೇಳಿದರೆ, ಗಾಬರಿಯಿಂದ ಕಣ್ಣೀರಿಡುತ್ತಿದ್ದ ಯುವಕ ತಲೆಯಾಡಿಸಿ ಸಮ್ಮತಿಸಿದ್ದಾನೆ. ಪ್ರಸ್ತುತ ಈ ವಿಚಿತ್ರ ಪ್ರೇಮಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Share

Leave a comment

Leave a Reply

Your email address will not be published. Required fields are marked *