ಬೆಂಗಳೂರು: ಸ್ವಾಯುತ್ತ ಸಂಸ್ಥೆ ಎನಿಸಿಕೊಳ್ಳುವ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗಲೆಲ್ಲಾ ಅದರ ಪರವಾಗಿ ಸಮರ್ಥನೆಗೆ ಬಿಜೆಪಿ ಮುನ್ನುಗ್ಗಿ ಬರುವುದೇಕೆ? ಚುನಾವಣಾ ಆಯೋಗ ಬಿಜೆಪಿಯ “ಎಲೆಕ್ಷನ್ ಮೋರ್ಚಾ”ವೇ? ಬಿಜೆಪಿಗೂ ಸ್ವಾಯುತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೂ ಏನು ಅವಿನಾಭಾವ ಸಂಬಂಧ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
“ಆಯೋಗ” ಎಂದರೆ ಒಬ್ಬ ವ್ಯಕ್ತಿಯಲ್ಲ, ಆ ಸಂಸ್ಥೆಯಲ್ಲಿರುವ ಸದಸ್ಯರೆಲ್ಲರೂ ಸೇರಿ ಆಯೋಗ ಎನಿಸಿಕೊಳ್ಳುತ್ತದೆ, ಸರ್ವಾನುಮತದ ನಿರ್ಧಾರಗಳು ಮಾತ್ರ ಆಯೋಗದ ನಿರ್ಧಾರ ಎನಿಸಿಕೊಳ್ಳುತ್ತದೆ. ಆದರೆ, ಪ್ರಸ್ತುತ ಕೇಂದ್ರ ಚುನಾವಣಾ
ಆಯೋಗದ ನಿರ್ಧಾರಗಳು ಕೇವಲ ಒಬ್ಬ ವ್ಯಕ್ತಿಯ ನಿರ್ಧಾರವಾಗಿರುವುದು ಬಯಲಾಗಿದೆ. ಹೀಗಾಗಿ ಆ ಎಲ್ಲಾ ನಿರ್ಧಾರಗಳ ಆಧಾರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾನೂನು ಬಾಹಿರ ಮತ್ತು ಅನರ್ಹ ಪ್ರಕ್ರಿಯೆಗಳಾಗಿವೆ ಎಂದು
ತಿಳಿಸಿದ್ದಾರೆ.
ಈ ಹಿಂದೆ ಶ್ರೀ ರಾಹುಲ್ ಗಾಂಧಿಯವರು ಓಟ್ ಚೋರಿಯನ್ನು ಸಾಕ್ಷಿ ಸಮೇತ ದೇಶದ ಮುಂದಿಟ್ಟಾಗ ತಕ್ಷಣವೇ ರಾಜಕೀಯ ಪಕ್ಷದಂತೆ ಪತ್ರಿಕಾಗೋಷ್ಠಿ ನಡೆಸಿದ CEC ಜ್ಞಾನೇಶ್ ಕುಮಾರ್ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆ ಎದ್ದಿರುವಾಗ ನಾಪತ್ತೆಯಾಗಿದ್ದಾರೆ! ಅವರು ಪತ್ರಿಕಾಗೋಷ್ಠಿ ಮಾಡುವ ಬದಲು ಬಿಜೆಪಿ ವಕ್ತಾರಿಕೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಕೇಳುವ ಒಂದು ಬಹುಮುಖ್ಯ ಪ್ರಶ್ನೆ,ಜ್ಞಾನೇಶ್ ಕುಮಾರ್ ರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.





Leave a comment