Home ಕ್ರೈಂ ನ್ಯೂಸ್ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯದಲ್ಲಿದ್ದ 58 ವರ್ಷದ ಮಹಿಳಾ ಕಾವಲುಗಾರ್ತಿ ಮೇಲೆ ಅತ್ಯಾಚಾರ ಆರೋಪ: ಜೈಲರ್ ವಿರುದ್ಧ ಎಫ್‌ಐಆರ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯದಲ್ಲಿದ್ದ 58 ವರ್ಷದ ಮಹಿಳಾ ಕಾವಲುಗಾರ್ತಿ ಮೇಲೆ ಅತ್ಯಾಚಾರ ಆರೋಪ: ಜೈಲರ್ ವಿರುದ್ಧ ಎಫ್‌ಐಆರ್!

Share
ಜೈಲರ್
Share

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಕೇಂದ್ರ ಕಾರಾಗೃಹದ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 58 ವರ್ಷದ ಮಹಿಳಾ ಕಾವಲುಗಾರ್ತಿ ಮೇಲೆ ಜೈಲರ್ ಅತ್ಯಾಚಾರ ಎಸಗಿರುವ ಗಂಭೀರ ಘಟನೆ ವರದಿಯಾಗಿದೆ.

ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಜೈಲರ್ ಮಗ್ನು ಸಿಂಗ್ ಮರಾವಿ ಎಂಬಾತ ತನ್ನ ಮೇಲೆ ಅತ್ಯಾಚಾರ ಎಸಗಿ, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಾತೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಜೈಲರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಜೈಲು ಆವರಣದಲ್ಲಿರುವ ಘಟನಾ ಸ್ಥಳವನ್ನು ಪೊಲೀಸರು ಪರಿಶೀಲಿಸಿದ್ದಾರೆ.

ರಾತ್ರಿ ವೇಳೆ ಕರ್ತವ್ಯದಲ್ಲಿದ್ದಾಗ ಆರೋಪಿಯು ಅಸಭ್ಯವಾಗಿ ವರ್ತಿಸಿ ಬಲವಂತವಾಗಿ ಶೌಚಾಲಯಕ್ಕೆ ಕರೆದೊಯ್ದು ಕೃತ್ಯ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಘಟನೆಯ ಬಳಿಕ ತಡರಾತ್ರಿಯೇ ಗಾಂಧಿನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪೊಲೀಸ್ ತನಿಖೆ ಮತ್ತು ಸಿಸಿಟಿವಿ ಪರಿಶೀಲನೆ: ಹಿರಿಯ ಪೊಲೀಸ್ ಅಧಿಕಾರಿ ಶಶಾಂಕ್ ಜೈನ್ ಮಾತನಾಡಿ, ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಕರ್ತವ್ಯದ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜೈಲು ಆಡಳಿತದ ಸ್ಪಷ್ಟನೆ: ಈ ಆರೋಪದ ಬೆನ್ನಲ್ಲೇ ಕೇಂದ್ರ ಕಾರಾಗೃಹ ಆಡಳಿತ ಮಂಡಳಿಯು ಮಹಿಳಾ ಕಾವಲುಗಾರ್ತಿಯ ಸೇವಾ ದಾಖಲೆಗಳನ್ನು ಬಿಡುಗಡೆ ಮಾಡಿದೆ. 2003ರಿಂದಲೂ ಅವರ ಸೇವೆಯಲ್ಲಿ ಪ್ರತಿಕೂಲ ಟಿಪ್ಪಣಿಗಳಿದ್ದು, ಈ ಹಿಂದೆ ಹಲವು ಅಧಿಕಾರಿಗಳ ವಿರುದ್ಧ ಅವರು ದೂರುಗಳನ್ನು ದಾಖಲಿಸಿದ್ದರು ಎಂದು ತಿಳಿಸಿದೆ.

ಹಿಂದಿನ ದೂರುಗಳ ಉಲ್ಲೇಖ: 2004ರಲ್ಲಿ ಜೈಲು ಅಧೀಕ್ಷಕರ ವಿರುದ್ಧ, 2018ರಲ್ಲಿ ಮೂವರು ನೌಕರರ ವಿರುದ್ಧ ಲೈಂಗಿಕ ಕಿರುಕುಳ ಹಾಗೂ 2021ರಲ್ಲಿ ಇತರ ಸಿಬ್ಬಂದಿಗಳ ವಿರುದ್ಧ ಮಹಿಳೆ ದೂರುಗಳನ್ನು ನೀಡಿದ್ದರು ಎಂದು ಜೈಲು ಆಡಳಿತ ತಿಳಿಸಿದೆ. ಆದಾಗ್ಯೂ, ಈ ಹಿಂದಿನ ದಾಖಲೆಗಳು ಪ್ರಸ್ತುತ ಆರೋಪದ ಸತ್ಯಾಸತ್ಯತೆಯನ್ನು ನಿರ್ಧರಿಸುವುದಿಲ್ಲವಾದ್ದರಿಂದ ಪೊಲೀಸರ ತನಿಖೆಯಿಂದಷ್ಟೇ ಸ್ಪಷ್ಟತೆ ಸಿಗಬೇಕಿದೆ.

Share

Recent Posts

Recent Comments

No comments to show.
Related Articles