SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: ಹೊನ್ನಾಳಿ – ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೋಗ್ (ಹೋಮ) ಮತ್ತು ಪೂರ್ಣಾಹುತಿ ನೆರವೇರಿತು.
ಬಂಜಾರ ಜನಾಂಗದ ಏಕೈಕ ಜಗದ್ಗುರು ಸಂತ ಸೇವಾಲಾಲ್ ಅವರ ಜನ್ಮಸ್ಥಾನ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ 286 ನೇ ಜಯಂತ್ಯುತ್ಸವದ ಪ್ರಯುಕ್ತ ಭೋಗ್ (ಹೋಮ) ಪೂಜೆ ಮತ್ತು ಪೂರ್ಣಹುತಿ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
286ನೇ ಜಯಂತ್ಯುತ್ಸವ, ಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಸೇವಾಲಾಲ್ ಮತ್ತು ಮರಿಯಮ್ಮ ದೇವತೆಗಳಿಗೆ ವಿಶೇಷ ಪೂಜೆ ಕುಂಬಾಭಿಷೇಕ, ಪವಿತ್ರ ವೃಕ್ಷದ ಬಳಿ ಗುರುಗಳ ಸಮ್ಮುಖದಲ್ಲಿ ಲಕ್ಷಾಂತರ ಮಾಲಾಧಾರಿಗಳು ‘ರುದ್ರಾಕ್ಷಿ, ಜಪ ಮಾಲೆಗಳನ್ನು ವಿಸರ್ಜನೆ ಬಂಜಾರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶನಿವಾರ ಬೆಳಿಗ್ಗೆ ಸೇವಾಲಾಲ್ ಜನ್ಮದ ಮೂಲ ಸ್ಥಳ ಇದೀಗ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ದೇಗುಲಗಳ ಮಧ್ಯೆ ಇರುವ ನಾಗರಕಟ್ಟೆ ಹಾಗೂ ಭೋಗ ಕಟ್ಟೆ (ಹೋಮಕುಂಡದ ) ಆವರಣಕ್ಕೆ ಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್ ದೇಗುಲಗಳಿಂದ ಮರಿಯಮ್ಮ ಮತ್ತು ಸೇವಾಲಾಲ್ ಉತ್ಸವ ಮೂರ್ತಿಗಳನ್ನು ತರಲಾಯಿತು.
ಭೋಗಿನಲ್ಲಿ ಧಾರ್ಮಿಕ ವಿಧಿ ವಿಧಾನ, ಸೇವಾಲಾಲರ ಜನ್ಮದಿನದಂದು ವಿಶೇಷವಾಗಿ ಆಚರಿಸುವ ಬಂಜಾರ ಜನಾಂಗದ ಧಾರ್ಮಿಕ ಸಂಸ್ಕೃತಿಯ ವೈಭವ. ಮಾಲಾಧಾರಿಗಳು ಬಿಳಿ ಬಟ್ಟೆ ರುದ್ರಾಕ್ಷಿ ಸೇರಿದಂತೆ ಇತರೆ ಧರಿಸಿ 21 ದಿನ 11 ಮತ್ತು 5 ನೇ ದಿನ ಕಾಲ ವ್ರತ ಕೈಗೊಂಡ ಸೇವಾಲಾಲ್ ಮಾಲಾಧಾರಿಗಳು ಇಡುಗಂಟನ್ನು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸೇವಾಲಾಲ್ ದೇಗುಲದ ಸೇವ್ಯಾನಾಯ್ಕ, ಮತ್ತು ಮರಿಯಮ್ಮ ದೇಗುಲದ ಆರ್ಚಕ ಮಂಜುನಾಥನಾಯ್ಕ , ಪೌರೋಹಿತ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಿ ಮಹಾಭೋಗ್‌ನಲ್ಲಿ ಅರ್ಪಿಸಿದರು.
ಲಿಂಗಸೂಗೂರ ಸಿದ್ದಲಿಂಗ ಸ್ವಾಮೀಜಿ , ಕೊಡಗಲಿ ಶಂಕರ ಮಹಾರಾಜ್. ತಿಪ್ಪೇಸ್ವಾಮಿ ಮಹಾರಾಜ್ , ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ , ವಿಧಾನಸಭೆಯ ಉಪಸಭಾಪತಿ, ರುದ್ರಪ್ಪ ಮಾನಪ್ಪ ಲಮಾಣಿ, ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್. ಜಯದೇವ ನಾಯ್ಕ್ , ಪ್ರಧಾನ ಕಾರ್ಯದರ್ಶಿ ಎನ್.ಅರುಣಕುಮಾರ, ಪ್ರಧಾನ ಧರ್ಮದರ್ಶಿ ಬಿ.ಹೀರಾನಾಯ್ಕ ಮತ್ತು ಭೋಜ್ಯನಾಯ್ಕ, ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತನಾಯ್ಕ, ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ರಾಜು , ರಾಘವೇಂದ್ರನಾಯ್ಕ, ಚಂದ್ರಸೇನಾ ಚವ್ಹಾಣ್, ಎಸ್.ಎನ್.ಗೋಪಾಲನಾಯ್ಕ, ಭೋಜ್ಯನಾಯ್ಕ, ಭೂಪಾಲನಾಯ್ಕ, ಶ್ರೀನಿವಾಸನಾಯ್ಕ, ರೇಣುನಾಯ್ಕ, ರಾಮನಾಯ್ಕ, ಹೊನ್ನಾಳಿ ಉಪವಿಭಾಗದ ಉಪವಿಭಾಗಾಧಿಕಾರಿ ವಿ.ಅಭಿಷೇಕ , ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಪಿಐ ಎನ್.ಎಸ್.ರವಿ, ಯೋಜನ ನಿರ್ದೇಶಕ ಹರೀಶ್ ನಾಯ್ಕ, ವಾಗೀಶ್ ಲಮಾಣಿ, ಮಾರುತಿ ನಾಯ್ಕ, ಸುರೇಂದ್ರ ನಾಯ್ಕ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.