ಹೊಸದೆಹಲಿ: ಚುನಾವಣಾ ಆಯುಕ್ತರ (CEC) ವಿರುದ್ಧ ಮತದಾರರ ಪಟ್ಟಿ ತಿರುಚಿದ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದ ‘ಕಾಕ್ರೋಚ್ ಜನತಾ ಪಕ್ಷ’ (CJP) ಮತ್ತು ‘ಎಐಎಸ್‌ಎ’ (AISA) ಸಂಘಟನೆಗಳ ಮುಖಂಡರಿಗೆ ತೀವ್ರ ಹಿನ್ನಡೆಯಾಗಿದೆ.
ದೆಹಲಿ ತಲುಪುತ್ತಿದ್ದಂತೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಅವರ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್ ಇಂಡಿಯಾ ವಿಮಾನದೊಳಗೆ ನುಗ್ಗಿದ ದೆಹಲಿ ಪೊಲೀಸರು, ಅಭಿಜಿತ್ ದೀಪಕೆ, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧನಕ್ಕೂ ಮುನ್ನ ಪ್ರತಿಕ್ರಿಯಿಸಿದ ಅಭಿಜಿತ್ ದೀಪಕೆ, ತಾವು ಯಾವುದೇ ಬಂಧನಕ್ಕೆ ಹೆದರುವುದಿಲ್ಲ ಮತ್ತು ಪ್ರತಿಭಟನೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸುಮಾರು 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 45ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಪ್ರತಿಭಟನೆಗೆ ಯಾವುದೇ ಅನುಮತಿ ನೀಡದಿದ್ದರೂ, ಸಿಜೆಪಿ ಮುಖಂಡರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ.
- Abhijeet Dipke detained
- AISA protest
- Ashutosh Ranka
- CJP Delhi protest
- Cockroach Janta Party
- Delhi lockdown
- Election Commission Controversy
- IGI Airport Delhi police
- Jantar Mantar protest 2026
- Saurav Das
- ಅಭಿಜಿತ್ ದೀಪಕೆ ಬಂಧನ
- ಅಶುತೋಷ್ ರಂಕಾ
- ಕಾಕ್ರೋಚ್ ಜನತಾ ಪಕ್ಷ
- ಚುನಾವಣಾ ಆಯೋಗ ವಿವಾದ
- ಜಂತರ್ ಮಂತರ್ ಪ್ರತಿಭಟನೆ
- ದೆಹಲಿ ಪೊಲೀಸ್
- ದೆಹಲಿ ವಿಮಾನ ನಿಲ್ದಾಣ
- ಸಿಜೆಪಿ ದೆಹಲಿ ಪ್ರತಿಭಟನೆ
- ಸೌರವ್ ದಾಸ್





Leave a comment