SUDDIKSHANA KANNADA NEWS/ DAVANAGERE/ DATE:15-07-2024
ದಾವಣಗೆರೆ: ಭದ್ರಾ ಜಲಾನಯನ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಾಗಿದೆ. ಭಾನುವಾರಕ್ಕಿಂತ ಇಂದು ಒಂದೂವರೆ ಸಾವಿರ ಕ್ಯೂಸೆಕ್ ಹೆಚ್ಚು ಹರಿದು ಬರುತ್ತಿದ್ದು, ಇದು ರೈತರ ಸಂತಸಕ್ಕೆ ಕಾರಣವಾಗಿದೆ. ಭದ್ರಾ ಜಲಾಶಯದ ನೀರಿನ ಮಟ್ಟ 142.3 ಅಡಿ ಏರಿಕೆಯಾಗಿದೆ.
ಕಳೆದ ವರ್ಷವೂ 141.3 ಅಡಿ ನೀರು ಸಂಗ್ರಹವಾಗಿತ್ತು. ಆದ್ರೆ, ಈ ವರ್ಷವೂ 141.3 ಅಡಿ ನೀರು ಸಂಗ್ರಹ ಆಗಿದೆ. ಹೋದ ವರ್ಷ ಇದ್ದಷ್ಟೇ ಡ್ಯಾಂ ನೀರಿನ ಮಟ್ಟದಷ್ಟೇ ಇದ್ದು, ಒಳಹರಿವು ಹೆಚ್ಚಾಗಿರುವ ಕಾರಣ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.2023ರ ಜುಲೈ 15ರಂದು 141.3 ಅಡಿ ನೀರು ಸಂಗ್ರಹ ಇದ್ದರೆ, ಒಳಹರಿವು 835 ಕ್ಯೂಸೆಕ್ ಇತ್ತು. ಹೊರ ಹರಿವು 164 ಕ್ಯೂಸೆಕ್ ಇತ್ತು.
ಆದ್ರೆ, ಈ ವರ್ಷ 16041 ಕ್ಯೂಸೆಕ್ ಒಳಹರಿವಿದ್ದರೆ, 162 ಕ್ಯೂಸೆಕ್ ಹೊರ ಹರಿವು ಇದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಒಂದೇ ದಿನಕ್ಕೆ ಎರಡು ಅಡಿ ಹೆಚ್ಚು ನೀರು ಬಂದಿದೆ. ಹಾಗಾಗಿ, ಭದ್ರಾ ಅಚ್ಚುಕಟ್ಟುಪ್ರದೇಶದ ರೈತರು, ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಜಲಾಶಯದ ನೀರಿನ ಗರಿಷ್ಠ ಮಟ್ಟ 186 ಅಡಿ. ಭರ್ತಿಯಾಗಲು ಇನ್ನು 44.7 ಅಡಿ ನೀರು ಬರಬೇಕಿದೆ. ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷ ಡ್ಯಾಂ ಭರ್ತಿಯಾಗಲಿದೆ. ಮಳೆ ಕೈಕೊಟ್ಟರೆ ಕಷ್ಟವಾಗಲಿದೆ. ಕಳೆದ ಒಂದು ವಾರದಿಂದಲೂ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತವಾಗಿತ್ತು. ಆದ್ರೆ, ಶನಿವಾರ ಭಾರೀ ಮಳೆಯಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿತ್ತು. ಭಾನುವಾರ ಜಲಾಶಯದ ನೀರಿನ ಮಟ್ಟ 139.3 ಅಡಿಗೆ ಏರಿಕೆಯಾಗಿತ್ತು. ಜಲಾಶಯಕ್ಕೆ 14570 ಕ್ಯೂಸೆಕ್ ಒಳಹರಿವಿತ್ತು. ಒಂದೇ ದಿನಕ್ಕೆ ಸುಮಾರು ಹತ್ತು ಸಾವಿರದಷ್ಟು ಕ್ಯೂಸೆಕ್ ಹೆಚ್ಚಳವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಭರ್ತಿಯಾಗಲು 46.7 ಅಡಿ ಬೇಕಿತ್ತು.
ಶನಿವಾರ ಭದ್ರಾ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಒಳಹರಿವು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು, ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 137.4 ಅಡಿ ಆಗಿತ್ತು.
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯೂ ಕಡಿಮೆಯಾಗಿದ್ದರಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ಪ್ರಮಾಣವೂ ಕುಂಠಿತವಾಗಿತ್ತು. ಕೇವಲ 4870 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 159 ಕ್ಯೂಸೆಕ್ ಇತ್ತು. ಆದ್ರೆ, ಈಗ 14570 ಕ್ಯೂಸೆಕ್ ಒಳಹರಿವಿದ್ದು, ಜಲಾಶಯದ ನೀರಿನ ಮಟ್ಟ ಸ್ವಲ್ಪ ಹೆಚ್ಚಳವಾಗಲಿದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಇದೆ. ಕಳೆದ ವರ್ಷ ಇದೇ ದಿನ 141. 1 ಅಡಿ ನೀರು ಸಂಗ್ರಹ ಇದ್ದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕು ಅಡಿಗಳಷ್ಟು ಕಡಿಮೆ ಇದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗದಿದ್ದರೆ ಜಲಾಶಯಕ್ಕೆ ನೀರು ಬರುವುದು ಕಷ್ಟ. ಜುಲೈ 13ನೇ ತಾರೀಕು ಆದರೂ ಮಳೆ ಕಡಿಮೆಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಸುಮಾರು ಹತ್ತು ದಿನಗಳಿಂದ ಮಳೆ ಹೆಚ್ಚಾಗಿರಲಿಲ್ಲ. ಸಾಧಾರಣ ಮಳೆ ಸುರಿದ ಕಾರಣ ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಲೇ ಇತ್ತು. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸ್ವಲ್ಪ ಕಡಿಮೆ ಸುರಿಯುತ್ತಿದ್ದರಿಂದ ಡ್ಯಾಂ ನೀರಿನ ಮಟ್ಟವೂ ಹೆಚ್ಚಾಗಿ ಏರಿಕೆಯಾಗುತ್ತಿರಲಿಲ್ಲ. ಈಗ ಒಂದೇ ದಿನ ಸುಮಾರು ಎರಡು ಅಡಿ ನೀರು ಹೆಚ್ಚಳವಾಗಿರುವುದು ಖುಷಿಯ ವಿಚಾರ.
ಕಳೆದ ಶನಿವಾರ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಆದ್ರೆ, ಭದ್ರಾ ಜಲಾನಯನ, ಮಲೆನಾಡು ಪ್ರದೇಶದಲ್ಲಿ ಮಳೆ ಮುಂದವರಿದಿದ್ದು, ಸಾಧಾರಣ ಮಳೆಯಾಗುತ್ತಿದೆ. ಮಳೆಯು ಅಬ್ಬರಿಸಿ ಬೊಬ್ಬಿರಿದರೆ ಡ್ಯಾಂಗೆ ಹೆಚ್ಚಿನ ಪ್ರಮಾಣದ
ನೀರು ಹರಿದು ಬರಲಿದೆ. ಮಲೆನಾಡಿಲ್ಲಿ ಮಳೆಯ ಅಬ್ಬರ ಮತ್ತೆ ಸ್ವಲ್ಪ ಮಟ್ಟಿಗೆ ಜೋರಾಗಿದೆ.ಇದರಿಂದ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಈಗ ಮಳೆಯಾಗುತ್ತಿರುವ ಕಾರಣ ರೈತರಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ. ಮಳೆ ಬಾರದೇ ಇದ್ದರೆ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ ಮುಟ್ಟುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ತಿಂಗಳ ಕೊನೆಯ ವಾರ ಭಾರೀ ಮಳೆಯಾಗಲಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 15- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 141.3 ಅಡಿ
-
ಕೆಪಾಸಿಟಿ: 27. 751ಟಿಎಂಸಿ
-
ಒಳಹರಿವು: 16,041 ಕ್ಯೂಸೆಕ್
-
ಒಟ್ಟು ಹೊರಹರಿವು: 162 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 141.3 ಅಡಿ
-
ಕೆಪಾಸಿಟಿ: 27.751 ಟಿಎಂಸಿ