SUDDIKSHANA KANNADA NEWS/ DAVANAGERE/ DATE:10-07-2024
ದಾವಣಗೆರೆ: ಮಲೆನಾಡು, ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಹೋದ ವರ್ಷಕ್ಕೆ ಹೋಲಿಸಿದರೆ 5.7 ಅಡಿ ನೀರು ಕಡಿಮೆ ಸಂಗ್ರಹವಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ 135.2 ಅಡಿ ನೀರು ಸಂಗ್ರಹವಿದೆ. ಒಳಹರಿವು 7356 ಕ್ಯೂಸೆಕ್ ಇದ್ದು, ನಿನ್ನೆಗೆ ಹೋಲಿಸಿದರೆ ಇಂದು ಸುಮಾರು ಐದು ನೂರು ಕ್ಯೂಸೆಕ್ ನಷ್ಟು ಒಳಹರಿವು ಕಡಿಮೆಯಾಗಿದೆ.
ಭದ್ರಾ ಜಲಾಶಯದ ನೀರಿನ ಗರಿಷ್ಟ ಮಟ್ಟ 186 ಅಡಿ ಆಗಿದೆ. ಕಳೆದ ವರ್ಷ ಇದೇ ದಿನ ಡ್ಯಾಂನಲ್ಲಿ 140.9 ಅಡಿ ನೀರು ಸಂಗ್ರಹವಾಗಿತ್ತು. ಆದ್ರೆ, ಈ ವರ್ಷ 135.2 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ ನೀರಿನ ಮಟ್ಟ ಕುಂಠಿತವಾಗಿರುವುದರಿಂದ ಅಚ್ಚುಕಟ್ಟುದಾರರು ಹಾಗೂ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ನೀರಿನ ಮಟ್ಟ 135.2 ಅಡಿ ಆಗಿದೆ. ಕೇವಲ ಒಂದು ಅಡಿ ನೀರು ಮಾತ್ರ ಹೆಚ್ಚು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 5.7 ಅಡಿ ನೀರು ಕಡಿಮೆಯಾಗಿದೆ.
ಸೋಮವಾರ ಜಲಾಶಯದ ನೀರಿನ ಮಟ್ಟ 133.1 ಅಡಿ ಏರಿಕೆ ಆಗಿತ್ತು. ಆದ್ರೆ, ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತವಾಗಿರುವ ಕಾರಣದಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಜಲಾಶಯಕ್ಕೆ 7806 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 156 ಕ್ಯೂಸೆಕ್ ಇದೆ.
ಸೋಮವಾರವೂ ಸಾಧಾರಣ ಮಳೆಯಾಗಿತ್ತು. ಭಾನುವಾರದ್ದೂ ಇದೇ ಸ್ಥಿತಿ ಇತ್ತು. ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ಕಳೆದೊಂದು ವಾರದಿಂದ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಜಲಾಶಯಕ್ಕೆ
ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 140.3 ಅಡಿ ನೀರು ಇತ್ತು. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದೆ.
ಶನಿವಾರ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಆದ್ರೆ, ಭದ್ರಾ ಜಲಾನಯನ, ಮಲೆನಾಡು ಪ್ರದೇಶದಲ್ಲಿ ಮಳೆ ಮುಂದವರಿದಿದ್ದು, ಸಾಧಾರಣ ಮಳೆಯಾಗುತ್ತಿದೆ. ಮಳೆಯು ಅಬ್ಬರಿಸಿ ಬೊಬ್ಬಿರಿದರೆ ಡ್ಯಾಂಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಿದೆ. ಸದ್ಯಕ್ಕೆ ಎಂಟು ಸಾವಿರದ ಏಳನೂರು ಎಪ್ಪತ್ತೇಳು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 133.1 ಅಡಿ ಸಂಗ್ರಹವಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಡ್ಯಾಂನ ನೀರಿನ ಮಟ್ಟ ಆರೂವರೆ ಅಡಿ ಕಡಿಮೆ ಸಂಗ್ರಹವಿದೆ.
ಮಲೆನಾಡಿಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಇದರಿಂದಾಗಿ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಶುಕ್ರವಾರ ಈ ವರ್ಷ ಅತ್ಯಧಿಕ ಒಳಹರಿವು ಬಂದಿತ್ತು. 16171 ಕ್ಯೂಸೆಕ್ ಒಳ ಹರಿವಿತ್ತು. ಆದ್ರೆ. ಶನಿವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಜಲಾಶಯಕ್ಕೆ ಕೇವಲ 7736 ಕ್ಯೂಸೆಕ್ ಮಾತ್ರ ಹರಿದು ಬಂದಿತ್ತು. ಡ್ಯಾಂಗೆ ಕೇವಲ ಒಂದೂವರೆ ಅಡಿ ನೀರು ಮಾತ್ರ ಜಲಾಶಯಕ್ಕೆ ಹರಿದು ಬಂದಿತ್ತು. ಒಂದೇ ದಿನ ಮೂರು ಪಟ್ಟು ನೀರು ಹೆಚ್ಚು ಒಳಹರಿವು ಇತ್ತಾದರೂ ಒಂದೇ ದಿನಕ್ಕೆ ಒಳಹರಿವು ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿತ್ತು.s
ಜಲಾಶಯದ ನೀರಿನ ಮಟ್ಟ 186 ಅಡಿ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹವಾಮಾನ ಇಲಾಖೆಯು ಇನ್ನೂ ಒಂದು ವಾರ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮಳೆ ಮುಂದುವರಿದರೆ ಜಲಾಶಯಕ್ಕೆ ನೀರಿನ ಮಟ್ಟ ಹೆಚ್ಚು
ಹರಿದು ಬರಲಿದೆ. ಗುರುವಾರ ಸುರಿದ ಮಳೆಯಂತೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟ ತಲುಪುವ ಸಾಧ್ಯತೆ ಇದೆ. ಕೇವಲ ಒಂದು ವಾರ ಮಾತ್ರವಲ್ಲ, ಒಂದು ತಿಂಗಳು ಧಾರಾಕಾರ ಮಳೆಯಾದರೆ ಜಲಾಶಯ ಈ ಬಾರಿ
ಗರಿಷ್ಠ ಮಟ್ಟ ತಲುಪಲಿದೆ.
ಭದ್ರಾ ಅಚ್ಚುಕಟ್ಟುಪ್ರದೇಶ, ಶಿವಮೊಗ್ಗ ಹಾಗೂ ಚಿತ್ರದುರ್ಗದ ರೈತರು ಹಾಗೂ ಜನರಿಗೆ ಆತಂಕ ತಂದೊಡ್ಡಿತ್ತು. ಈಗ ಮಳೆಯಾಗುತ್ತಿರುವ ಕಾರಣ ರೈತರಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ. ಮಳೆ ಬಾರದೇ ಇದ್ದರೆ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ ಮುಟ್ಟುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ತಿಂಗಳ ಕೊನೆಯ ವಾರ ಭಾರೀ ಮಳೆಯಾಗಲಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
ದಿನಾಂಕ: 10- 07-2024
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 135.2 ಅಡಿ
ಕೆಪಾಸಿಟಿ: 23.179 ಟಿಎಂಸಿ
ಒಳಹರಿವು: 7356 ಕ್ಯೂಸೆಕ್
ಒಟ್ಟು ಹೊರಹರಿವು: 157 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 140.9 ಅಡಿ
ಕೆಪಾಸಿಟಿ: 27.404 ಟಿಎಂಸಿ