Home ದಾವಣಗೆರೆ ಭದ್ರಾ ಜಲಾಶಯದ ನೀರಿನ ಮಟ್ಟ 154.5 ಅಡಿಗೆ ಏರಿಕೆ: ಇಂದು ಒಳಹರಿವು ಎಷ್ಟಿದೆ?
ದಾವಣಗೆರೆಬೆಂಗಳೂರು

ಭದ್ರಾ ಜಲಾಶಯದ ನೀರಿನ ಮಟ್ಟ 154.5 ಅಡಿಗೆ ಏರಿಕೆ: ಇಂದು ಒಳಹರಿವು ಎಷ್ಟಿದೆ?

Share
ಭದ್ರಾ ಜಲಾಶಯ
Share

ದಾವಣಗೆರೆ: ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ (Bhadra Reservoir) ಜುಲೈ 29, 2026ರ ಬೆಳಿಗ್ಗೆ 6:00 ಗಂಟೆಯ ವೇಳೆಗೆ 5,920 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಭದ್ರಾ ಜಲಾಶಯದ ಪ್ರಸ್ತುತ ನೀರಿನ ಮಟ್ಟ 154 ಅಡಿ 5 ಇಂಚು ತಲುಪಿದೆ.

186 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 71.535 TMC ಆಗಿದ್ದು, ಪ್ರಸ್ತುತ ಜಲಾಶಯದಲ್ಲಿ 37.937 TMC ನೀರು ಸಂಗ್ರಹವಾಗಿದೆ.

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:

  • ಗರಿಷ್ಠ ಮಟ್ಟ: 186’0″ (2158.0 MSL)

  • ಇಂದಿನ ನೀರಿನ ಮಟ್ಟ: 154’5″ (2126.41 MSL)

  • ಒಟ್ಟು ಸಾಮರ್ಥ್ಯ: 71.535 TMC

  • ಇಂದಿನ ಸಂಗ್ರಹ: 37.937 TMC

  • ಒಳಹರಿವು (Inflow): 5,920 ಕ್ಯೂಸೆಕ್ಸ್

  • ಹೊರಹರಿವು (Outflow): 179 ಕ್ಯೂಸೆಕ್ಸ್

ಹೊರಹರಿವಿನ ಹಂಚಿಕೆ:

ಜಲಾಶಯದಿಂದ ಎಡದಂಡೆ ನಾಲೆಗೆ (LBC) 50 ಕ್ಯೂಸೆಕ್ಸ್, ರಿವರ್ ಸ್ಲೂಸ್‌ಗೆ 50 ಕ್ಯೂಸೆಕ್ಸ್ ಹಾಗೂ ಆವಿಯಾಗುವಿಕೆಯ ರೂಪದಲ್ಲಿ 79 ಕ್ಯೂಸೆಕ್ಸ್ ನೀರು ಹೊರಹೋಗುತ್ತಿದ್ದು, ಬಲದಂಡೆ ನಾಲೆಗೆ (RBC) ನೀರು ಹರಿಸಲಾಗುತ್ತಿಲ್ಲ.

ಕಳೆದ ವರ್ಷದ (2025) ಇದೇ ದಿನದಂದು ಜಲಾಶಯದಲ್ಲಿ 180 ಅಡಿ 3 ಇಂಚು ನೀರಿದ್ದು, 64.478 TMC ಸಂಗ್ರಹವಿತ್ತು. ಅಲ್ಲದೆ, 18,546 ಕ್ಯೂಸೆಕ್ಸ್ ಒಳಹರಿವು ಹಾಗೂ 22,007 ಕ್ಯೂಸೆಕ್ಸ್ ಹೊರಹರಿವು ದಾಖಲಾಗಿತ್ತು.

Share

Leave a comment

Leave a Reply

Your email address will not be published. Required fields are marked *

Related Articles