Home ದಾವಣಗೆರೆ ಭದ್ರಾ ಜಲಾಶಯಕ್ಕೆ 10,091 ಕ್ಯೂಸೆಕ್ ಒಳಹರಿವು: ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ ಎಷ್ಟು ಗೊತ್ತಾ?
ದಾವಣಗೆರೆನವದೆಹಲಿಬೆಂಗಳೂರು

ಭದ್ರಾ ಜಲಾಶಯಕ್ಕೆ 10,091 ಕ್ಯೂಸೆಕ್ ಒಳಹರಿವು: ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ ಎಷ್ಟು ಗೊತ್ತಾ?

Share
ಭದ್ರಾ ಜಲಾಶಯ
Share

ಚಿಕ್ಕಮಗಳೂರು / ದಾವಣಗೆರೆ: ಮಲೆನಾಡು ಹಾಗೂ ಭದ್ರಾ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಆದರೆ ನಿನ್ನೆಗೆ ಹೋಲಿಸಿದರೆ ಕೊಂಚ ಮಟ್ಟಿಗೆ ಒಳಹರಿವು ಕಡಿಮೆಯಾಗಿದೆ. 

ಇಂದು (ಆಗಸ್ಟ್ 07, 2026) ಬೆಳಿಗ್ಗೆ 6 ಗಂಟೆಯ ಅಧಿಕೃತ ವರದಿಯಂತೆ, ಡ್ಯಾಮ್‌ಗೆ 10,091 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 167 ಅಡಿ 6 ಇಂಚಿಗೆ ತಲುಪಿದೆ.

ಪ್ರಸ್ತುತ ಭದ್ರಾ ಜಲಾಶಯದಲ್ಲಿ 50.269 ಟಿಎಂಸಿ (TMC) ನೀರು ಸಂಗ್ರಹವಾಗಿದ್ದು, ಒಟ್ಟು 195 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ರಿವರ್ ಸ್ಲೂಯಿಸ್ ಮೂಲಕ 100 ಕ್ಯೂಸೆಕ್ ಹಾಗೂ 95 ಕ್ಯೂಸೆಕ್ ನೀರು ಆವಿಯಾಗುತ್ತಿದೆ. ಬಲದಂಡೆ (RBC) ಮತ್ತು ಎಡದಂಡೆ (LBC) ಕಾಲುವೆಗಳಿಗೆ ಸದ್ಯ ನೀರನ್ನು ಹರಿಸಲಾಗುತ್ತಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ:

ಕಳೆದ ವರ್ಷಕ್ಕೆ ಹೋಲಿಕೆ (ಆಗಸ್ಟ್ 7, 2025)

ವಿವರ07.08.2025 (ಕಳೆದ ವರ್ಷ)07.08.2026 (ಇಂದು)
ನೀರಿನ ಮಟ್ಟ182.10 ಅಡಿ167.06 ಅಡಿ
ನೀರಿನ ಸಂಗ್ರಹ67.600 TMC50.269 TMC
ಒಳಹರಿವು12,174 ಕ್ಯೂಸೆಕ್10,091 ಕ್ಯೂಸೆಕ್
ಹೊರಹರಿವು5,113 ಕ್ಯೂಸೆಕ್195 ಕ್ಯೂಸೆಕ್

ಕಳೆದ ವರ್ಷ (07.08.2025) ಇದೇ ದಿನ ಜಲಾಶಯದಲ್ಲಿ 182.10 ಅಡಿ ನೀರು ಸಂಗ್ರಹವಿತ್ತು (67.600 TMC) ಹಾಗೂ 12,174 ಕ್ಯೂಸೆಕ್ ಒಳಹರಿವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಕೊಂಚ ಕಡಿಮೆಯಿದ್ದರೂ, ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿರುವುದರಿಂದ ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ.

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ (07.08.2026)

ವಿವರಗಳುಮಾಹಿತಿ / ಪ್ರಮಾಣ
ಗರಿಷ್ಠ ಮಟ್ಟ (FRL)186.00 ಅಡಿ (2158.0 MSL)
ಒಟ್ಟು ಸಂಗ್ರಹ ಸಾಮರ್ಥ್ಯ71.535 TMC
ಇಂದಿನ ನೀರಿನ ಮಟ್ಟ167.06 ಅಡಿ (2139.50 MSL)
ಪ್ರಸ್ತುತ ನೀರು ಸಂಗ್ರಹ50.269 TMC
ಇಂದಿನ ಒಳಹರಿವು (Inflow)10,091 ಕ್ಯೂಸೆಕ್
ಇಂದಿನ ಹೊರಹರಿವು (Outflow)195 ಕ್ಯೂಸೆಕ್
ಕಾಲುವೆಗಳ ಸ್ಥಿತಿ (RBC / LBC)0 ಕ್ಯೂಸೆಕ್
ಕಳೆದ ವರ್ಷದ ನೀರಿನ ಮಟ್ಟ (07-08-2025)182.10 ಅಡಿ (67.600 TMC)

ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಕ್ಯಾವಿಟಿ ಹಾಗೂ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳಹರಿವು ಭಾರಿ ಪ್ರಮಾಣದಲ್ಲಿ ಮುಂದುವರಿದಿದೆ. ಇಂದು ಬೆಳಿಗ್ಗೆ 6 ಗಂಟೆಯ ವರದಿಯಂತೆ ಡ್ಯಾಮ್‌ಗೆ 10,091 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ 167 ಅಡಿ 6 ಇಂಚಿಗೆ ತಲುಪಿದೆ. ಪ್ರಸ್ತುತ ಡ್ಯಾಮ್‌ನಲ್ಲಿ 50.269 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಡ್ಯಾಮ್‌ ಭರ್ತಿಯಾಗುವ ಹಂತದಲ್ಲಿದ್ದು (182.10 ಅಡಿ), 67.600 ಟಿಎಂಸಿ ನೀರು ಸಂಗ್ರಹವಿತ್ತು.

Share

Leave a comment

Leave a Reply

Your email address will not be published. Required fields are marked *