SUDDIKSHANA KANNADA NEWS/ DAVANAGERE/ DATE:19-07-2024
ದಾವಣಗೆರೆ: ಭದ್ರಾ ಜಲಾನಯನ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಭದ್ರಾ ಡ್ಯಾಂಗೆ ಒಂದೇ ದಿನ ನಾಲ್ಕು ಅಡಿಗೂ ಹೆಚ್ಚು ನೀರು ಹರಿದು ಬಂದಿದೆ. ಜಲಾಶಯಕ್ಕೆ 49,555 ಕ್ಯೂಸೆಕ್ ಹರಿದು ಬರುತ್ತಿದೆ. ಗುರುವಾರಕ್ಕೆ ಹೋಲಿಸಿದರೆ 4.11 ಅಡಿ ನೀರು ಹೆಚ್ಚು ಅಡಿ ನೀರು ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 16.4 ಅಡಿ ನೀರು ಹೆಚ್ಚು ಬಂದಿದೆ.
ಭದ್ರಾ ಜಲಾನಯನ ಹಾಗೂ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಮಳೆ ಮುಂದುವರಿದಿದೆ. ಡ್ಯಾಂ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಭಾರೀ ಪ್ರಮಾಣದಲ್ಲಿ ಜಾಸ್ತಿಯಾಗಿದೆ. ಕಳೆದ ವರ್ಷ 141.7 ಅಡಿ ನೀರು ಮಾತ್ರ ಇತ್ತು.ಆದ್ರೆ, ಇಂದು 157.11 ಅಡಿಗೆ ಏರಿದ್ದು, ಈ ತಿಂಗಳ ಅಂತ್ಯಕ್ಕೆ ಜಲಾಶಯ ಭರ್ತಿಯಾಗುವ ಲಕ್ಷಣಗಳು ಗೋಚರಿಸಿವೆ. ಇದೇ ರೀತಿ ಮಳೆ ಮುಂದುವರಿದಿದರೆ ಈ ಬಾರಿ ಜಲಾಶಯ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಹೆಚ್ಚಿದೆ.
ಭದ್ರಾ ಡ್ಯಾಂಗೆ ಒಂದೇ ದಿನ ಸುಮಾರು 4. 1ಅಡಿ ನೀರು ಬಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 157.11 ಅಡಿ ಆಗಿದೆ. ಭದ್ರಾ ಡ್ಯಾಂಗೆ 49,555 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 181 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ 186 ಅಡಿ ಆಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಕೇವಲ 28 ಅಡಿ ನೀರು ಮಾತ್ರ ಬರಬೇಕಿದೆ. ಇದೇ ರೀತಿ ಮಳೆ ಮುಂದುವರಿದರೆ ಆದಷ್ಟು ಬೇಗ ಜಲಾಶಯ ಭರ್ತಿಯಾಗಲಿದೆ.
ಆಗಸ್ಚ್ 1 ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಕಾರಣ ಜಲಾಶಯದ ಆದಷ್ಟು ಬೇಗ ಭರ್ತಿಯಾಗುವ ವಿಶ್ವಾಸ ರೈತರು, ಭದ್ರಾ ಅಚ್ಚುಕಟ್ಟುದಾರರು, ಭದ್ರಾ ಡ್ಯಾಂ ಅಧಿಕಾರಿಗಳಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳೂ ಸೇರಿದಂತೆ ಎಲ್ಲೆಡೆ ವರುಣನ ರುದ್ರನರ್ತನ ಹೆಚ್ಚಾಗಿದೆ. ಭದ್ರಾ ಹಿನ್ನೀರು ಪ್ರದೇಶದಲ್ಲಿಯೂ ವರುಣಾರ್ಭಟ ಹೆಚ್ಚಾಗಿದ್ದು, ಈ ವರ್ಷದಲ್ಲಿ ಅತ್ಯಧಿಕ ಒಳಹರಿವು ಇದಾಗಿದೆ. 50 ಸಾವಿರ ಕ್ಯೂಸೆಕ್ ಒಳಹರಿವು ದಾಟುವ ಸಾಧ್ಯತೆ ಹೆಚ್ಚಿದೆ. ಜಲಾಶಯದ ನೀರಿನ ಮಟ್ಟ 157.11 ಅಡಿ ನೀರಿಗೆ ಹೆಚ್ಚಳವಾಗಿದೆ. ಒಂದೇ ದಿನ ಜಲಾಶಯಕ್ಕೆ 4.1ಅಡಿ ನೀರು ಹರಿದು ಬಂದಿರುವುದು ರೈತರಿಗೆ ಖುಷಿ ನೀಡಿದೆ. ಡ್ಯಾಂ 157 ಅಡಿ ಆಗಿದೆ. ಜಲಾಶಯಕ್ಕೆ 49555 ಸಾವಿರಕ್ಕೂ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ಎರಡರಿಂದ ಮೂರು ಅಡಿಗೂ ಹೆಚ್ಚು ನೀರು ಹೆಚ್ಚಳವಾಗುವ ಸಾಧ್ಯತೆ ಇದೆ.
2 ದಿನಕ್ಕೆ ಎಂಟೂವರೆ ಅಡಿ ನೀರು ಹೆಚ್ಚು ಬಂದಿರುವುದರಿಂದ ಜಲಾಶಯದ ನೀರಿನ ಮಟ್ಟ 157.11 ಅಡಿ ಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಶುಕ್ರವಾರವೂ ವರುಣ ಅಬ್ಬರಿಸಿ ಬೊಬ್ಬಿರಿಯುವ ಸಾಧ್ಯತೆ ಇದೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಾಗಿದೆ. ಕಳೆದ ವರ್ಷವೂ 141.5 ಅಡಿ ನೀರು ಸಂಗ್ರಹವಿತ್ತು. ಆದ್ರೆ, ಈ ವರ್ಷ 153 ಅಡಿ ನೀರು ಸಂಗ್ರಹ ಆಗಿದೆ. ಒಳಹರಿವು ಹೆಚ್ಚಾಗಿರುವ ಕಾರಣ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 19- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 157.11 ಅಡಿ
-
ಒಳಹರಿವು: 49555 ಕ್ಯೂಸೆಕ್
-
ಒಟ್ಟು ಹೊರಹರಿವು: 181 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 141.7 ಅಡಿ
-
ಕೆಪಾಸಿಟಿ: 27.868 ಟಿಎಂಸಿ
-
ಎಂಎಸ್ಎಲ್: 2129.91 ಟಿಎಂಸಿ