SUDDIKSHANA KANNADA NEWS/ DAVANAGERE/ DATE:09-07-2024
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ನೀರಿನ ಮಟ್ಟ 134.1 ಅಡಿ ಆಗಿದೆ. ಕೇವಲ ಒಂದು ಅಡಿ ನೀರು ಮಾತ್ರ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರು ಅಡಿ ನೀರು ಕಡಿಮೆಯಾಗಿದೆ.
ಸೋಮವಾರ ಜಲಾಶಯದ ನೀರಿನ ಮಟ್ಟ 133.1 ಅಡಿ ಏರಿಕೆ ಆಗಿತ್ತು. ಆದ್ರೆ, ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತವಾಗಿರುವ ಕಾರಣದಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಜಲಾಶಯಕ್ಕೆ 7806 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 156 ಕ್ಯೂಸೆಕ್ ಇದೆ.
ಶಿವಮೊಗ್ಗ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದರೆ, ಭದ್ರಾ ಜಲಾಶಯಕ್ಕೆ ಬರುವ ನೀರು ಕಡಿಮೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದರಷ್ಟೇ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರಲಿದೆ.
ಕಳೆದ ವರ್ಷ ಇದೇ ಜಲಾಶಯದ ನೀರಿನ ಮಟ್ಟ 140 ಅಡಿ ದಾಟಿತ್ತು. ಆದ್ರೆ, ಈ ವರ್ಷ ಇನ್ನೂ ಆರು ಅಡಿ ನೀರು ಹರಿದು ಬರಬೇಕಿದೆ. ಹಾಗಾಗಿ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಜನರ ಆತಂಕಕ್ಕೆ ಕಾರಣವಾಗಿದೆ.
ಸೋಮವಾರವೂ ಸಾಧಾರಣ ಮಳೆಯಾಗಿತ್ತು. ಭಾನುವಾರದ್ದೂ ಇದೇ ಸ್ಥಿತಿ ಇತ್ತು. ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ಕಳೆದೊಂದು ವಾರದಿಂದ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 140.3 ಅಡಿ ನೀರು ಇತ್ತು. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದೆ.
ಶನಿವಾರ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಆದ್ರೆ, ಭದ್ರಾ ಜಲಾನಯನ, ಮಲೆನಾಡು ಪ್ರದೇಶದಲ್ಲಿ ಮಳೆ ಮುಂದವರಿದಿದ್ದು, ಸಾಧಾರಣ ಮಳೆಯಾಗುತ್ತಿದೆ. ಮಳೆಯು ಅಬ್ಬರಿಸಿ ಬೊಬ್ಬಿರಿದರೆ ಡ್ಯಾಂಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಿದೆ. ಸದ್ಯಕ್ಕೆ ಎಂಟು ಸಾವಿರದ ಏಳನೂರು ಎಪ್ಪತ್ತೇಳು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 133.1 ಅಡಿ ಸಂಗ್ರಹವಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಡ್ಯಾಂನ ನೀರಿನ ಮಟ್ಟ ಆರೂವರೆ ಅಡಿ ಕಡಿಮೆ ಸಂಗ್ರಹವಿದೆ.
ಮಲೆನಾಡಿಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಇದರಿಂದಾಗಿ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಶುಕ್ರವಾರ ಈ ವರ್ಷ ಅತ್ಯಧಿಕ ಒಳಹರಿವು ಬಂದಿತ್ತು. 16171 ಕ್ಯೂಸೆಕ್ ಒಳ ಹರಿವಿತ್ತು. ಆದ್ರೆ. ಶನಿವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಜಲಾಶಯಕ್ಕೆ ಕೇವಲ 7736 ಕ್ಯೂಸೆಕ್ ಮಾತ್ರ ಹರಿದು ಬಂದಿತ್ತು. ಡ್ಯಾಂಗೆ ಕೇವಲ ಒಂದೂವರೆ ಅಡಿ ನೀರು ಮಾತ್ರ ಜಲಾಶಯಕ್ಕೆ ಹರಿದು ಬಂದಿತ್ತು. ಒಂದೇ ದಿನ ಮೂರು ಪಟ್ಟು ನೀರು ಹೆಚ್ಚು ಒಳಹರಿವು ಇತ್ತಾದರೂ ಒಂದೇ ದಿನಕ್ಕೆ ಒಳಹರಿವು ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿತ್ತು.s
ಶುಕ್ರವಾರದ ಮಧ್ಯಾಹ್ನದ ಹೊತ್ತಿಗೆ 29 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂಬ ವದಂತಿ ಹಬ್ಬಿತ್ತಾದರೂ ಇದು ಸುಳ್ಳು ಎಂಬುದು ಗೊತ್ತಾಗಿತ್ತು. ಇದೇ ರೀತಿ ಮಳೆ ಸುರಿದರೆ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ ಎಂಬ ಆಶಾಭಾವನೆ ಹೊಂದಿದ್ದ ರೈತರ ಮೊಗದಲ್ಲಿ ನಿರಾಸೆ ಮೂಡಿದೆ.
ಕಳೆದೊಂದು ವಾರದಿಂದ ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಒಮ್ಮೆ ಏರಿಕೆಯಾಗುತ್ತೆ, ಮತ್ತೊಮ್ಮೆ ಇಳಿಕೆಯಾಗುತ್ತಿದೆ. ಮಳೆ ಕುಂಠಿತವಾಗಿರುವ ಕಾರಣ ಗುರುವಾರ 127 ಅಡಿ ತಲುಪಿದ್ದ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ 9 ಅಡಿ ನೀರು ಕಡಿಮೆ ಸಂಗ್ರಹ ಇತ್ತು. ಆದ್ರೆ, ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 8 ಅಡಿ ನೀರು ಕಡಿಮೆ ಸಂಗ್ರಹವಾಗಿತ್ತು.
ಜಲಾಶಯದ ನೀರಿನ ಮಟ್ಟ 186 ಅಡಿ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹವಾಮಾನ ಇಲಾಖೆಯು ಇನ್ನೂ ಒಂದು ವಾರ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮಳೆ ಮುಂದುವರಿದರೆ ಜಲಾಶಯಕ್ಕೆ ನೀರಿನ ಮಟ್ಟ ಹೆಚ್ಚು
ಹರಿದು ಬರಲಿದೆ. ಗುರುವಾರ ಸುರಿದ ಮಳೆಯಂತೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟ ತಲುಪುವ ಸಾಧ್ಯತೆ ಇದೆ. ಕೇವಲ ಒಂದು ವಾರ ಮಾತ್ರವಲ್ಲ, ಒಂದು ತಿಂಗಳು ಧಾರಾಕಾರ ಮಳೆಯಾದರೆ ಜಲಾಶಯ ಈ ಬಾರಿ
ಗರಿಷ್ಠ ಮಟ್ಟ ತಲುಪಲಿದೆ.
ಭದ್ರಾ ಅಚ್ಚುಕಟ್ಟುಪ್ರದೇಶ, ಶಿವಮೊಗ್ಗ ಹಾಗೂ ಚಿತ್ರದುರ್ಗದ ರೈತರು ಹಾಗೂ ಜನರಿಗೆ ಆತಂಕ ತಂದೊಡ್ಡಿತ್ತು. ಈಗ ಮಳೆಯಾಗುತ್ತಿರುವ ಕಾರಣ ರೈತರಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ. ಮಳೆ ಬಾರದೇ ಇದ್ದರೆ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ ಮುಟ್ಟುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ತಿಂಗಳ ಕೊನೆಯ ವಾರ ಭಾರೀ ಮಳೆಯಾಗಲಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 09- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 134.1 ಅಡಿ
-
ಕೆಪಾಸಿಟಿ: 23.097 ಟಿಎಂಸಿ
-
ಒಳಹರಿವು: 7806 ಕ್ಯೂಸೆಕ್
-
ಒಟ್ಟು ಹೊರಹರಿವು: 156 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 140.3 ಅಡಿ
-
ಕೆಪಾಸಿಟಿ: 27.059 ಟಿಎಂಸಿ