SUDDIKSHANA KANNADA NEWS/ DAVANAGERE/ DATE:26-07-2024
ದಾವಣಗೆರೆ: ಭದ್ರಾ ಜಲಾಶಯ ಭರ್ತಿಯಾಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 11.7 ಅಡಿ ನೀರು ಬರಬೇಕು. ಭದ್ರಾ ಜಲಾಶಯದ ನೀರಿನ ಮಟ್ಟ 174.3 ಅಡಿ ಆಗಿದ್ದು, ಜಲಾಶಯಕ್ಕೆ 35,318 ಕ್ಯೂಸೆಕ್ ಹರಿದು ಬರುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ 174.3 ಅಡಿ ಆಗಿದೆ.
ಧಾರಾಕಾರ ಮಳೆ ಭದ್ರಾ ಜಲಾನಯನ ಪ್ರದೇಶ ಹಾಗೂ ಹಿನ್ನೀರು ಪ್ರದೇಶದಲ್ಲಿ ಆಗುತ್ತಿದೆ. ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ 9 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದೆ. ಬರೋಬ್ಬರಿ 9 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಹರಿದು ಬರಲಾರಂಭಿಸಿದೆ. ಇದರಿಂದಾಗಿ ಡ್ಯಾಂ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 174.3 ಅಡಿ ಆಗಿದ್ದು, ಜಲಾಶಯಕ್ಕೆ ಒಂದೇ ದಿನ 4.3 ಅಡಿ ನೀರು ಬಂದಿದೆ. ಜಲಾಶಯಕ್ಕೆ 35,318 ಕ್ಯೂಸೆಕ್ ಒಳಹರಿವಿದ್ದು, ಗುರುವಾರಕ್ಕೆ ಹೋಲಿಸಿದರೆ 9 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಹರಿದು ಬರುತ್ತಿದ್ದು, ಇದು ಭದ್ರಾ ಅಚ್ಚುಕಟ್ಟುದಾರರು ಹಾಗೂ ರೈತರು, ಜನರ ಸಂತಸಕ್ಕೆ ಕಾರಣವಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದೆ.
ಭದ್ರಾ ಡ್ಯಾಂಗೆ ಹರಿದು ಬರುತ್ತಿದ್ದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು,ಡ್ಯಾಂ ನೀರಿನ ಮಟ್ಟ 174.3 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 155.3 ಅಡಿ ನೀರು ಸಂಗ್ರಹ ಇತ್ತು. ಒಳಹರಿವು 24,704 ಕ್ಯೂಸೆಕ್ ಇತ್ತು.
ಆದ್ರೆ, ಇಂದು ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಾಗಿದ್ದು, ಮಂಗಳವಾರ, ಬುಧವಾರಕ್ಕೆ ಹೋಲಿಸಿದರೆ 11 ಸಾವಿರ ಕ್ಯೂಸೆಕ್ ಹೆಚ್ಚಾಗಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು,ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಲಾಶಯ ಭರ್ತಿಯಾಗಲು ಇನ್ನು ಕೇವಲ 11.7 ಅಡಿ ನೀರು ಬರಬೇಕಷ್ಟೇ. ಇದೇ ರೀತಿ ಮುಂದುವರಿದು, ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ, ವರುಣ ಅಬ್ಬರಿಸಿ ಬೊಬ್ಬಿರಿದರೆ ಮಾತ್ರ ಜುಲೈ ಅಂತ್ಯದೊಳಗೆ ಡ್ಯಾಂ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಈ ಬಾರಿ ರಾಜ್ಯಾದ್ಯಂತ ಭಾರೀ ಮಳೆ ಸುರಿದಿದ್ದು, ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಆದ್ರೆ, ಭದ್ರಾ ಡ್ಯಾಂಗೆ ಇನ್ನೂ 11.7 ಅಡಿ ನೀರು ಬೇಕಿದ್ದು, ಈ ವರ್ಷ ಭರ್ತಿಯಾಗುವ ವಿಶ್ವಾಸದಲ್ಲಿ ರೈತರು, ಭದ್ರಾ ಅಚ್ಚುಕಟ್ಟುದಾರರು ಇದ್ದಾರೆ.
ಒಂದು ವಾರ ಸುರಿದಂತೆ ಮಳೆ ಸುರಿದರೆ ಡ್ಯಾಂ ಗರಿಷ್ಠ ಮಟ್ಟ ಆದಷ್ಟು ಬೇಗ ತಲುಪಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಭಾರೀ ಮಳೆಯಾಗಿದ್ದು, ಜಲಾಶಯ ಭರ್ತಿಯಾಗುವ ಕ್ಷಣಕ್ಕೆ ಲಕ್ಷಾಂತರ ರೈತರು, ಜನರು ಕಾತರರರಾಗಿದ್ದಾರೆ.
ಆಗಸ್ಚ್ 1 ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಕಾರಣ ಜಲಾಶಯದ ಆದಷ್ಟು ಬೇಗ ಭರ್ತಿಯಾಗುವ ವಿಶ್ವಾಸ ರೈತರು, ಭದ್ರಾ ಅಚ್ಚುಕಟ್ಟುದಾರರು, ಭದ್ರಾ ಡ್ಯಾಂ ಅಧಿಕಾರಿಗಳಲ್ಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
ದಿನಾಂಕ: 26- 07-2024
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 174.3 ಅಡಿ
ಕೆಪಾಸಿಟಿ: 57.538 ಟಿಎಂಸಿ
ಒಳಹರಿವು: 35,318 ಕ್ಯೂಸೆಕ್
ಒಟ್ಟು ಹೊರಹರಿವು: 202 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 155.3 ಅಡಿ
ಕೆಪಾಸಿಟಿ: 38.652 ಟಿಎಂಸಿ