SUDDIKSHANA KANNADA NEWS/ DAVANAGERE/ DATE:22-07-2024
ದಾವಣಗೆರೆ: ಭದ್ರಾ ಡ್ಯಾಂಗೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಒಳಹರಿವು ಬಂದಿದೆ. ಭಾನುವಾರಕ್ಕೆ ಹೋಲಿಸಿದರೆ 2 ಸಾವಿರ ಕ್ಯೂಸೆಕ್ ನಷ್ಟು ನೀರು ಹೆಚ್ಚಳವಾಗಿದೆ. ಜಲಾಶಯದ ನೀರಿನ ಮಟ್ಟ 166.6 ಅಡಿ ಆಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಕೇವಲ 19.4 ಅಡಿ ನೀರು ಬರಬೇಕು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದ ನೀರಿನ ಮಟ್ಟ 22 ಅಡಿ ಅಷ್ಟು ಹೆಚ್ಚಳವಾಗಿದೆ. 25 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಲಾಶಯವು ಆದಷ್ಟು ಬೇಗ ಭರ್ತಿಯಾಗುವ ಸಾಧ್ಯತೆ ಇದೆ.
ಕಳೆದ ಒಂದು ವಾರ ಸುರಿದಂತೆ ಮಳೆ ಸುರಿದರೆ ಡ್ಯಾಂ ಗರಿಷ್ಠ ಮಟ್ಟ ಆದಷ್ಟು ಬೇಗ ತಲುಪಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಭಾರೀ ಮಳೆಯಾಗಿದ್ದು, ಜಲಾಶಯ ಭರ್ತಿಯಾಗುವ ಕ್ಷಣಕ್ಕೆ ಲಕ್ಷಾಂತರ ರೈತರು, ಜನರು ಕಾತರರರಾಗಿದ್ದಾರೆ.
ಭದ್ರಾ ಜಲಾಶಯಕ್ಕೆ ಇಂದು ಒಂದೇ ದಿನ ಎರಡು ಅಡಿ ನೀರು ಬಂದಿದ್ದು, ಭಾನುವಾರವೂ 2 ಅಡಿ ನೀರು ಹೆಚ್ಚು ಬಂದಿತ್ತು. ಆದ್ರೆ, ಜಲಾಶಯಕ್ಕೆ ಬರುತ್ತಿರುವ ಒಳಹರಿವು ಸ್ವಲ್ಪಮಟ್ಟಿಗೆ ಹೆಚ್ಚಳವಾಗಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಕ್ಯೂಸೆಕ್
ಒಳಹರಿವಿದೆ. ಭದ್ರಾ ಡ್ಯಾಂ ನೀರಿನ ಮಟ್ಟ 166.6ಕ್ಕೆ ಏರಿಕೆ ಆಗಿದೆ.
ಭದ್ರಾ ಜಲಾಶಯದ ನೀರಿನ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಒಳಹರಿವು ಭಾರೀ ಪ್ರಮಾಣದಲ್ಲಿ ಭಾನುವಾರ ಕಡಿಮೆ ಆಗಿತ್ತು. 23,674 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 191 ಕ್ಯೂಸೆಕ್ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭದ್ರಾ ಡ್ಯಾಂ ನೀರಿನ ಮಟ್ಟ 22.5 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನಕ್ಕೆ ಭದ್ರಾ ಜಲಾಶಯದ ನೀರಿನ ಮಟ್ಟ 144.2 ಅಡಿ ಸಂಗ್ರಹವಾಗಿತ್ತು. ಆಗ ಒಳ ಹರಿವು 10351 ಕ್ಯೂಸೆಕ್ ಇತ್ತು. ಆದ್ರೆ, ಇಂದು ಜಲಾಶಯಕ್ಕೆ 25367 ಕ್ಯೂಸೆಕ್ ಹರಿದು ಬರುತ್ತಿದೆ. ಆದ್ರೆ, ಭಾರೀ ಪ್ರಮಾಣದಲ್ಲಿ ಮಳೆ ಸುರಿದರೆ ಆಗಸ್ಟ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಶನಿವಾರ ಬರೋಬ್ಬರಿ 5.2 ಅಡಿ ನೀರು ಹರಿದು ಬಂದಿತ್ತು. ಭಾನುವಾರ ಎರಡು ಅಡಿ ನೀರು ಬಂದಿತ್ತು. ಈ ವರ್ಷದಲ್ಲಿ ಒಂದೇ ದಿನ ಅತ್ಯಧಿಕ ನೀರಿನ ಮಟ್ಟ ಹೆಚ್ಚಳವಾಗಿದ್ದು ಭಾನುವಾರ, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಜಾಸ್ತಿಯಾಗಿದ್ದು, ಈ ಬಾರಿ ಜಲಾಶಯವು ಭರ್ತಿಯಾಗುವ ವಿಶ್ವಾಸ ರೈತರಲ್ಲಿದೆ.
ಭದ್ರಾ ಜಲಾಶಯದ ಹಿನ್ನೀರು, ಭದ್ರಾ ಜಲಾನಯನ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ ಕೊಂಚ ಮಟ್ಟಿಗೆ ಕಡಿಮೆ ಆಗಿದೆ. ಶುಕ್ರವಾರ ಭದ್ರಾ ಡ್ಯಾಂಗೆ ಒಂದೇ ದಿನ ನಾಲ್ಕು ಅಡಿಗೂ ಹೆಚ್ಚು ನೀರು ಹರಿದು ಬಂದಿತ್ತು. ಮಾತ್ರವಲ್ಲ, ಜಲಾಶಯಕ್ಕೆ 49,555 ಕ್ಯೂಸೆಕ್ ಹರಿದು ಬಂದಿತ್ತು, ಆದ್ರೆ. ಶನಿವಾರ ಜಲಾಶಯಕ್ಕೆ ಸ್ವಲ್ಪ ಮಟ್ಟಿಗೆ ಒಳಹರಿವು ಕಡಿಮೆ ಇದ್ದು, 46876 ಕ್ಯೂಸೆಕ್ ಇದೆ. ಹೊರ ಹರಿವು 186 ಕ್ಯೂಸೆಕ್ ಇದೆ. ಕಳೆದ ವರ್ಷ ಜಲಾಶಯದ ನೀರಿನ ಮಟ್ಟ 143 ಅಡಿ ಇತ್ತು. ಆಗ ಒಳಹರಿವು 4227 ಕ್ಯೂಸೆಕ್ ಇದ್ದರೆ, ಹೊರ ಹರಿವು 164 ಕ್ಯೂಸೆಕ್ ಇತ್ತು.
ಕೇವಲ ನಾಲ್ಕೇ ದಿನಕ್ಕೆ 13.5 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿರುವುದು ರೈತರು, ಭದ್ರಾ ಅಚ್ಚುಕಟ್ಟುದಾರರ ಖುಷಿಗೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 22.5 ಅಡಿ ನೀರು ಹೆಚ್ಚು ಬಂದಿದೆ. ಜಲಾಶಯದ ನೀರಿನ ಗರಿಷ್ಠ ಮಟ್ಟ 186
ಅಡಿ ಆಗಿದೆ.
ಆಗಸ್ಚ್ 1 ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಕಾರಣ ಜಲಾಶಯದ ಆದಷ್ಟು ಬೇಗ ಭರ್ತಿಯಾಗುವ ವಿಶ್ವಾಸ ರೈತರು, ಭದ್ರಾ ಅಚ್ಚುಕಟ್ಟುದಾರರು, ಭದ್ರಾ ಡ್ಯಾಂ ಅಧಿಕಾರಿಗಳಲ್ಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 22- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 166.6 ಅಡಿ
-
ಕೆಪಾಸಿಟಿ: 49244 ಟಿಎಂಸಿ
-
ಒಳಹರಿವು: 25367 ಕ್ಯೂಸೆಕ್
-
ಒಟ್ಟು ಹೊರಹರಿವು: 193 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 144.1 ಅಡಿ
-
ಕೆಪಾಸಿಟಿ: 29.411 ಟಿಎಂಸಿ