SUDDIKSHANA KANNADA NEWS/ DAVANAGERE/ DATE:18-07-2024
ದಾವಣಗೆರೆ: ಭದ್ರಾ ಜಲಾನಯನ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಭದ್ರಾ ಜಲಾನಯನ ಹಾಗೂ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು. ಡ್ಯಾಂ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಭದ್ರಾ ಡ್ಯಾಂಗೆ ಒಂದೇ ದಿನ ಸುಮಾರು 4. 4 ಅಡಿ ನೀರು ಬಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 153 ಅಡಿ ಆಗಿದೆ. ಭದ್ರಾ ಡ್ಯಾಂಗೆ 42,165 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 174 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ 186 ಅಡಿ ಆಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ 35 ಅಡಿ ನೀರು ಮಾತ್ರ ಬರಬೇಕಿದೆ. ಇದೇ ರೀತಿ ಮಳೆ ಮುಂದುವರಿದರೆ ಆದಷ್ಟು ಬೇಗ ಜಲಾಶಯ ಭರ್ತಿಯಾಗಲಿದೆ.
ಆಗಸ್ಚ್ 1 ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಕಾರಣ ಜಲಾಶಯದ ಆದಷ್ಟು ಬೇಗ ಭರ್ತಿಯಾಗುವ ವಿಶ್ವಾಸ ಭದ್ರಾ ಡ್ಯಾಂ ಅಧಿಕಾರಿಗಳಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳೂ ಸೇರಿದಂತೆ ಎಲ್ಲೆಡೆ ವರುಣನ ರುದ್ರನರ್ತನ ಹೆಚ್ಚಾಗಿದೆ. ಭದ್ರಾ ಹಿನ್ನೀರು ಪ್ರದೇಶದಲ್ಲಿಯೂ ವರುಣಾರ್ಭಟ ಹೆಚ್ಚಾಗಿದ್ದು, ಜಲಾಶಯಕ್ಕೆ 41,165 ಕ್ಯೂಸೆಕ್ ಒಳಹರಿವಿದೆ. ಈ ವರ್ಷದಲ್ಲಿ ಅತ್ಯಧಿಕ ಒಳಹರಿವು ಇದಾಗಿದೆ. ಜಲಾಶಯದ ನೀರಿನ ಮಟ್ಟ 153 ಅಡಿ ನೀರಿಗೆ ಹೆಚ್ಚಳವಾಗಿದೆ. ಒಂದೇ ದಿನ ಜಲಾಶಯಕ್ಕೆ 4.4ಅಡಿ ನೀರು ಹರಿದು ಬಂದಿರುವುದು ರೈತರಿಗೆ ಖುಷಿ ನೀಡಿದೆ. ಡ್ಯಾಂ 153 ಅಡಿ ಆಗಿದೆ. ಜಲಾಶಯಕ್ಕೆ 42 ಸಾವಿರಕ್ಕೂ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ಎರಡರಿಂದ ಮೂರು ಅಡಿಗೂ ಹೆಚ್ಚು ನೀರು ಹೆಚ್ಚಳವಾಗುವ ಸಾಧ್ಯತೆ ಇದೆ.
ಜಲಾಶಯಕ್ಕೆ ಬುಧವಾರ 3.9 ಅಡಿ ನೀರು ಬಂದಿದ್ದರೆ, ಮಂಗಳವಾರ ಒಂದೇ ದಿನ ಮೂರು ಅಡಿ ನೀರು ಹರಿದು ಬಂದಿರುವುದು ಜಲಾಶಯದ ಅವಲಂಬಿತ ರೈತರು, ಜನರು ಸಂತಸಪಡುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 12.5 ಅಡಿ ನೀರು ಹೆಚ್ಚಾಗಿದೆ.
ಒಂದೇ ದಿನಕ್ಕೆ ನಾಲ್ಕು ಅಡಿ ನೀರು ಹೆಚ್ಚು ಬಂದಿರುವುದರಿಂದ ಜಲಾಶಯದ ನೀರಿನ ಮಟ್ಟ 153 ಅಡಿ ಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಗುರುವಾರವೂ ವರುಣ ಅಬ್ಬರಿಸಿ ಬೊಬ್ಬಿರಿಯುವ ಸಾಧ್ಯತೆ ಇದೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಾಗಿದೆ. ಭಾನುವಾರಕ್ಕಿಂತ ಸೋಮವಾರದಿಂದ ಇಂದಿಗೆ ಹೋಲಿಸಿದರೆ 33 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಹೆಚ್ಚು ಹರಿದು ಬರುತ್ತಿದ್ದು, ಇದು ರೈತರ ಸಂತಸಕ್ಕೆ ಕಾರಣವಾಗಿದೆ. ಇನ್ನು ಗುರುವಾರ ಕ್ಯೂಸೆಕ್ 42 ಸಾವಿರ ಕ್ಯೂಸೆಕ್ ನಷ್ಟಾಗಿದೆ.
ಕಳೆದ ವರ್ಷವೂ 141.5 ಅಡಿ ನೀರು ಸಂಗ್ರಹವಿತ್ತು. ಆದ್ರೆ, ಈ ವರ್ಷ 153 ಅಡಿ ನೀರು ಸಂಗ್ರಹ ಆಗಿದೆ. ಒಳಹರಿವು ಹೆಚ್ಚಾಗಿರುವ ಕಾರಣ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.
ಜಲಾಶಯದ ನೀರಿನ ಗರಿಷ್ಠ ಮಟ್ಟ 186 ಅಡಿ. ಭರ್ತಿಯಾಗಲು ಇನ್ನು 35 ಅಡಿ ನೀರು ಬೇಕು. ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷ ಡ್ಯಾಂ ಭರ್ತಿಯಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 18- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 153 ಅಡಿ
-
ಕೆಪಾಸಿಟಿ: 36.740 ಟಿಎಂಸಿ
-
ಒಳಹರಿವು: 42165 ಕ್ಯೂಸೆಕ್
-
ಒಟ್ಟು ಹೊರಹರಿವು: 174 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 141.5 ಅಡಿ
-
ಕೆಪಾಸಿಟಿ: 27.868 ಟಿಎಂಸಿ