Home ದಾವಣಗೆರೆ ದಾವಣಗೆರೆ ಜನರೇ ಗಮನಿಸಿ: ಈ ಗ್ರಾಮಗಳು ಮತ್ತು ನಗರದ ವಿವಿಧೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ದಾವಣಗೆರೆಬೆಂಗಳೂರು

ದಾವಣಗೆರೆ ಜನರೇ ಗಮನಿಸಿ: ಈ ಗ್ರಾಮಗಳು ಮತ್ತು ನಗರದ ವಿವಿಧೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Share
ದಾವಣಗೆರೆ
Share

ದಾವಣಗೆರೆ: ನಗರದ ಪ್ರಮುಖ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ಹಾಗೂ ತ್ರೈಮಾಸಿಕ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 20 ರಂದು ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸಮಯ ಮತ್ತು ಪ್ರದೇಶಗಳು:

ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ:

66/11 ಕೆ.ವಿ. ಕುಕ್ಕವಾಡ ಮತ್ತು ಶ್ಯಾಗಲೆ ವಿ.ವಿ ಕೇಂದ್ರಗಳ ವ್ಯಾಪ್ತಿಯ ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೂವಿನಮಡು, ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳು.

ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ:

66/11 ಕೆ.ವಿ. ಹಿರೇಮಲ್ಲನಹೊಳೆ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಇರುವುದರಿಂದ ಇದರ ವ್ಯಾಪ್ತಿಯ ಎಲ್ಲ ಗ್ರಾಮಗಳ ಎನ್‌ಜೆವೈ (NJY) ಮತ್ತು ಐ.ಪಿ (IP) ಮಾರ್ಗಗಳು.

ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ (ನಗರ ಪ್ರದೇಶಗಳು):

ನಿಜಲಿಂಗಪ್ಪ ಲೇಔಟ್, ದೇವರಾಜ್ ಅರಸ್ ಲೇಔಟ್ ‘ಎ’ ಬ್ಲಾಕ್, ವಿನಾಯಕ ರಸ್ತೆ, ಯಲ್ಲಮ್ಮ ನಗರ, ಶಾಂತಿ ನಗರ, ವಿನೋಬ ನಗರ 4ನೇ ಮೇನ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸಾರ್ವಜನಿಕರು ಹಾಗೂ ಗ್ರಾಹಕರು ಈ ವ್ಯತ್ಯಯವನ್ನು ಗಮನಿಸಿ ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *