Home ಕ್ರೈಂ ನ್ಯೂಸ್ ರಕ್ತಸಿಕ್ತ ಕಾಕ್‌ಪಿಟ್, ಸಾವಿರಾರು ಅಡಿ ಕೆಳಗೆ ಧುಮುಕಿದ ವಿಮಾನ: ಫ್ಲೈದುಬೈ ವಿಮಾನದ ಕಂಟಕ ತಪ್ಪಿಸಿದ್ದು ಹೇಗೆ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿ

ರಕ್ತಸಿಕ್ತ ಕಾಕ್‌ಪಿಟ್, ಸಾವಿರಾರು ಅಡಿ ಕೆಳಗೆ ಧುಮುಕಿದ ವಿಮಾನ: ಫ್ಲೈದುಬೈ ವಿಮಾನದ ಕಂಟಕ ತಪ್ಪಿಸಿದ್ದು ಹೇಗೆ?

Share
ವಿಮಾನ
Share

ದುಬೈ/ತೆಲ್ ಅವೀವ್: ದುಬೈಯಿಂದ ತೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ನಡು-ಆಕಾಶದ ಹೈಡ್ರಾಮಾದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸ ಹಾಗೂ ಇಸ್ರೇಲಿ ಪ್ರಯಾಣಿಕರ ಸಮಯಪ್ರಜ್ಞೆಯಿಂದಾಗಿ 174 ಜನರ ಪ್ರಾಣ ಉಳಿದಿದೆ.

ಕಾಕ್‌ಪಿಟ್‌ನಲ್ಲಿದ್ದ ಒಮಾನ್ ಮೂಲದ ಸಹ-ಪೈಲಟ್ ಏಕಾಏಕಿ ದಂಗೆ ಎದ್ದು, ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಮುಖ್ಯ ಪೈಲಟ್ ಆಗಿದ್ದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದನು. ರಕ್ತಸ್ರಾವವಾಗುತ್ತಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ದಾಳಿಕೋರನ ವಿರುದ್ಧ ಹೋರಾಡಿ ಕಾಕ್‌ಪಿಟ್ ಬಾಗಿಲನ್ನು ಲಾಕ್‌ನಿಂದ ತೆರೆದು ಪ್ರಯಾಣಿಕರಿಗೆ ಸುಳಿವು ನೀಡಿದರು.

ವಿಮಾನವು ಹಠಾತ್ತನೆ ಸಾವಿರಾರು ಅಡಿ ಕೆಳಗೆ ಧುಮುಕುತ್ತಿದ್ದಾಗ, ಇಸ್ರೇಲ್ ಮೂಲದ ಪ್ಲಂಬರ್ ಯಾನ್ವಿ ಹಾಯುನ್  ಮತ್ತು ಅವರ ಮಗಳು ನೋವಾ ಕಾಕ್‌ಪಿಟ್‌ಗೆ ಧಾವಿಸಿದರು. ಧೈರ್ಯದಿಂದ ಕಾಕ್‌ಪಿಟ್ ಪ್ರವೇಶಿಸಿದ ಯಾನ್ವಿ, ಸಹ-ಪೈಲಟ್‌ನನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದು ಹೊರಗೆ ಎಳೆದರು.

ತೀವ್ರ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಬಳಿ ತೆರಳಿದ ಯಾನ್ವಿ ಹಾಯುನ್, “ನೀವು ಇಂದು ಸಾಯುವುದಿಲ್ಲ, ಧೈರ್ಯವಾಗಿರಿ” ಎಂದು ಸಾಂತ್ವನ ಹೇಳಿದರು. ತಕ್ಷಣವೇ ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ಕಾಕ್‌ಪಿಟ್‌ಗೆ ಬಂದು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಸೌದಿ ಅರೇಬಿಯಾದ ತಬುಕ್ ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ  ಮಾಡಿಸಿದರು.

ಪ್ರಸ್ತುತ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರತೀಯ ಪೈಲಟ್ ಹಾಗೂ ಪ್ರಯಾಣಿಕರ ವೀರಾವೇಶದ ಪ್ರಸಂಗಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *