ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Basavaraj Bommai: ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಬಸವರಾಜ್ ಬೊಮ್ಮಾಯಿಗೆ ಯಶಸ್ವಿ ಬೈಪಾಸ್‌ ಶಸ್ತ್ರಚಿಕಿತ್ಸೆ, ಆರೋಗ್ಯದಲ್ಲಿ ಚೇತರಿಕೆ

On: October 21, 2023 12:37 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-10-2023

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪರಿಧಮನಿಯ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

Read Also This Story:

ಎಲ್ಲೆಡೆ ವಿಶ್ವಕಪ್ ಕ್ರಿಕೆಟ್ (Cricket World Cup) ಫೀವರ್: ವರ್ಲ್ಡ್ ಕಪ್ ನಮ್ಮದು ಎಂಬ ಸಿದ್ಧಗಂಗಾ ಮಕ್ಕಳೇ ರೂಪಿಸಿರುವ ವಿಡಿಯೋದಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ…?

ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಕೆಲ ಪ್ರಾಥಮಿಕ ಪರೀಕ್ಷೆ ನಡೆಸಲಾಯಿತು, ಈ ವೇಳೆ ಅವರಿಗೆ ಹೃದಯ ಸಂಬಂಧಿ ಕೆಲ ಸಮಸ್ಯೆ ಇರುವ ಅನುಮಾನ ಮೂಡಿತು. ಹೀಗಾಗಿ, ಅವರ ಸಮಗ್ರ ಮತ್ತು ಪರಿಣಿತ ವೈದ್ಯಕೀಯ ಆರೈಕೆಗಾಗಿ, ಫೋರ್ಟಿಸ್‌ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕಲರ್‌ ಸೈನ್ಸ್‌ ಅಧ್ಯಕ್ಷ ಡಾ. ವಿವೇಕ್‌ ಜವಳಿ ಅವರ ಮೇಲ್ವಿಚಾರಣೆಯಲ್ಲಿ ಅಕ್ಟೋಬರ್‌ 15 ರಂದು ಅವರನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ಆಂಜಿಯೋಗ್ರಾಮ್ ನಂತರ, ಎಲ್ಲಾ ಮೂರು ಪರಿಧಮನಿಯ ಅಪಧಮನಿಗಳಲ್ಲಿ ತೀವ್ರ ಮತ್ತು ಪ್ರಸರಣ ತಡೆ ಇರುವುದು ಕಂಡು ಬಂತು. ಈ ಲಕ್ಷಣಗಳು ಇದ್ದರೆ ಭವಿಷ್ಯದಲ್ಲಿ ಹೃದಯಾಘಾತ ಸಂಭವನೀಯ ಅಪಾಯವನ್ನು ಉಂಟುಮಾಡುತ್ತವೆ,
ಹೀಗಾಗಿ ಅವರಿಗೆ ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಕ್ರಿಯೆಯನ್ನು ನಡೆಸಿ, ಫೈವ್‌ ಗ್ರಾಫ್ಸ್‌ನನ್ನು ಸಮಸ್ಯೆ ಉಂಟಾಗಿದ್ದ ಪರಿಧಮನಿಯ ಅಪಧಮನಿ ಹೃದಯದ ಬಡಿತದ ಮೇಲೆ ಇರಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ
ಬೊಮ್ಮಾಯಿ ಅವರು ವೇಗವಾಗಿ ಚೇತರಿಕೆ ಕಾಣುತ್ತಿದ್ದು, ಒಂದೆರಡು ವಾರದಲ್ಲಿ ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿಕೊಳ್ಳಬಹುದು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ಅದರಲ್ಲೂ ಡಾ. ವಿವೇಕ್‌ ಜವಳಿ ಅವರ ತಂಡ ನನ್ನನ್ನು ಉತ್ತಮವಾಗಿ ಆರೈಕೆ ಮಾಡಿದೆ. ವೈದ್ಯರು, ಸಿಬ್ಬಂದಿ  ಪರಿಣತಿಯಿಂದ ಭವಿಷ್ಯದಲ್ಲಿ ಸಂಭವಿಸಬೇಕಾದ ಅಪಾಯವನ್ನು ತಡೆದಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು. ನನ್ನ ಯೋಗಕ್ಷೇಮಕ್ಕೆ ಇಡೀ ತಂಡದ ಬದ್ಧತೆಯನ್ನು ಪ್ರಶಂಸಿಸುವೆ, ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಆರೋಗ್ಯದ ಬಗ್ಗೆ ತಿಳಿಸಿದರು.

ಫೋರ್ಟಿಸ್‌ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕಲರ್‌ ಸೈನ್ಸ್‌ ಅಧ್ಯಕ್ಷರಾದ ಡಾ. ವಿವೇಕ್‌ ಜವಳಿ , 5-ಗ್ರಾಫ್ಟ್ಸ್‌ ಹೃದಯ ಬೈಪಾಸ್ ಅನ್ನು ನಿರ್ವಹಿಸುವುದು ನಮಗೆ ವಾಡಿಕೆಯಾಗಿದೆ, ಆದರೆ ಬೊಮ್ಮಾಯಿ ಅವರ ಅಚಲವಾದ ನಂಬಿಕೆ, ಅವರ ಧೈರ್ಯದ ಮನೋಭಾವಕ್ಕೆ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಅವರ ಬೆಂಬಲಕ್ಕೆ ಅವರ ಕುಟುಂಬ ವರ್ಗ ಅಚಲವಾಗಿ ನಿಂತಿತ್ತು ಎಂದು ವಿವರಿಸಿದರು.‌

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment