Home ಕ್ರೈಂ ನ್ಯೂಸ್ ವರದಕ್ಷಿಣೆಗಾಗಿ ಮದುವೆ ರದ್ದುಗೊಳಿಸಿದ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಸಸ್ಪೆಂಡ್: ಮದುವೆ ಮಂಟಪಕ್ಕೆ ಖುದ್ದಾಗಿ ಬಂದು ಕಾರು ಪರಿಶೀಲಿಸಿದ್ದ ವರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ವರದಕ್ಷಿಣೆಗಾಗಿ ಮದುವೆ ರದ್ದುಗೊಳಿಸಿದ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಸಸ್ಪೆಂಡ್: ಮದುವೆ ಮಂಟಪಕ್ಕೆ ಖುದ್ದಾಗಿ ಬಂದು ಕಾರು ಪರಿಶೀಲಿಸಿದ್ದ ವರ!

Share
ಮದುವೆ
Share

ನವದೆಹಲಿ: ಹರಿಯಾಣದ ಸೋನಿಪತ್‌ನಲ್ಲಿ ವರದಕ್ಷಿಣೆ ವಿಚಾರವಾಗಿ ಮದುವೆಯನ್ನು ರದ್ದುಪಡಿಸಿರುವ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಂಡಿವೆ. ಮಾರುತಿ ಬ್ರೆಜ್ಜಾ ಕಾರನ್ನು ವರದಕ್ಷಿಣೆಯಾಗಿ ಕೇಳಿದ್ದ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಕುದೀಪ್, ಮದುವೆ ಮೆರವಣಿಗೆಗೂ ಮುನ್ನವೇ ಯಾವುದೇ ಮದುವೆ ವೇಷಭೂಷಣವಿಲ್ಲದೆ, ಸರಳ ಉಡುಪಿನಲ್ಲಿ ತನ್ನ ತಾಯಿಯೊಂದಿಗೆ ಮದುವೆ ಮಂಟಪಕ್ಕೆ ಬಂದು ಕಾರನ್ನು ಪರಿಶೀಲಿಸಿದ್ದಾನೆ ಎಂದು ವಧುವಿನ ತಂದೆ ಸುಭಾಷ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ನವೆಂಬರ್ 20ರಂದು ನಿಗದಿಯಾಗಿದ್ದ ಈ ವಿವಾಹದಲ್ಲಿ, ವರನ ಕಡೆಯವರು ಹೆಚ್ಚಿನ ವರದಕ್ಷಿಣೆಗಾಗಿ ಪಟ್ಟು ಹಿಡಿದಿದ್ದರು. ಒಂಬತ್ತುವರೆ ಲಕ್ಷ ರೂಪಾಯಿ ಮೌಲ್ಯದ ಬೇರೆ ಕಾರನ್ನು ಬುಕ್ ಮಾಡಿದ್ದರೂ, ಕೊನೆಕ್ಷಣದಲ್ಲಿ ಬ್ರೆಜ್ಜಾ ಕಾರು ಹಾಗೂ ಚಿನ್ನಾಭರಣಗಳನ್ನು ಕೇಳಿ ವರ ಮತ್ತು ಆತನ ಕುಟುಂಬದವರು ವಾಗ್ವಾದ ನಡೆಸಿದ್ದಾರೆ. ವಧುವಿನ ಕಡೆಯವರು ಎಷ್ಟೇ ಬೇಡಿಕೊಂಡರೂ ಕೇಳದೆ ವರ ಹಾಗೂ ಆತನ ತಾಯಿ ಮದುವೆ ರದ್ದುಪಡಿಸಿ ತೆರಳಿದ್ದಾರೆ. ಈ ಗಂಭೀರ ದುರ್ನಡತೆ ಹಾಗೂ ವರದಕ್ಷಿಣೆ ಬೇಡಿಕೆಯ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಂಬಂಧಪಟ್ಟ ಕಾನ್‌ಸ್ಟೆಬಲ್ ಕುದೀಪ್ ಅವರನ್ನು ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಬಹಿರಂಗ: ಮದುವೆ ಮೆರವಣಿಗೆ (ಬರಾತ್) ಬರುವ ಮುನ್ನವೇ ವರ ಕುದೀಪ್ ಹಾಗೂ ಆತನ ತಾಯಿ ಸಾಧಾರಣ ಬಟ್ಟೆಯಲ್ಲಿ ಮದುವೆ ಮಂಟಪಕ್ಕೆ ಬಂದು ವರದಕ್ಷಿಣೆ ಕಾರನ್ನು ಪರಿಶೀಲಿಸಿದ್ದಾರೆ ಎಂದು ವಧುವಿನ ತಂದೆ ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ: ಈಗಾಗಲೇ 25 ರಿಂದ 30 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಸಿದ್ಧತೆ ಮಾಡಿಕೊಳ್ಳಲಾಗಿದ್ದರೂ, ಕೇವಲ ಒಂದು ದಿನದ ಮೊದಲು ಬ್ರೆಜ್ಜಾ ಕಾರು ಹಾಗೂ ಚಿನ್ನದ ಆಭರಣಗಳಿಗಾಗಿ ವರ ಪಟ್ಟು ಹಿಡಿದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸ್ ಇಲಾಖೆಯಿಂದ ಕ್ರಮ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು, ಕರ್ತವ್ಯಲೋಪ ಹಾಗೂ ವರದಕ್ಷಿಣೆ ಆರೋಪದ ಮೇಲೆ ಕಾನ್‌ಸ್ಟೆಬಲ್ ಕುದೀಪ್ ಅವರನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಂಡಿದ್ದಾರೆ.

Share

Recent Posts

Recent Comments

No comments to show.
Related Articles