
ಪಾಟ್ನಾ: ಮುಸ್ಲಿಂ ವಿವಾಹಗಳಲ್ಲಿನ ಆಚರಣೆಗಳು ಮತ್ತು ವಸ್ತ್ರಧಾರಣೆ ಕುರಿತು ಅತಿ ಕೀಳು ಹಾಗೂ ಆಕ್ಷೇಪಾರ್ಹ ಭಾಷೆಯನ್ನು ಬಳಸಿರುವ ಎಐಎಂಐಎಂ (AIMIM) ಬಿಹಾರ ಘಟಕದ ಮುಖ್ಯಸ್ಥ ಹಾಗೂ ಶಾಸಕ ಅಖ್ತರುಲ್ ಇಮಾನ್ ತೀವ್ರ ವಿವಾದಕ್ಕೀಡಾಗಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
#WATCH | Kishanganj: Bihar AIMIM President Akhtarul Iman says, "… India has a long tradition of Sufi saints and respect for women. Wearing sindoor is a matter of religious faith, and similarly, Islam requires women to observe pardah and wear hijab. No one should disrespect a… pic.twitter.com/1tZXnQe3gG
— ANI (@ANI) November 23, 2026
ಮದುವೆ ಸಮಾರಂಭಗಳಲ್ಲಿ ವಧುಗಳು ವೇಲ್ (ಪರ್ದಾ) ಇಲ್ಲದೆ ಕುಳಿತುಕೊಳ್ಳುವುದನ್ನು ಸಾರ್ವಜನಿಕವಾಗಿ ವೇಶ್ಯೆಯರಿಗೆ (ತವಾಯಿಫ್) ಹೋಲಿಸಿದ್ದು, ಪುರುಷರ ವಿರುದ್ಧವೂ ಕಠಿಣ ಪದ ಬಳಸಿರುವುದು ರಾಜಕೀಯ ಹಾಗೂ ಧರ್ಮಗುರುಗಳ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅಸಾದುದ್ದೀನ್ ಒವೈಸಿ ಅವರ ಪಕ್ಷದ ನಾಯಕರಾಗಿರುವ ಅಖ್ತರುಲ್ ಇಮಾನ್, ಮುಸ್ಲಿಂ ಮದುವೆಗಳಲ್ಲಿ ಮಹಿಳೆಯರು ತಲೆಗೆ ಬಟ್ಟು (ದುಪಟ್ಟಾ) ಹಾಕಿಕೊಳ್ಳದೆ ಪುರುಷರೊಂದಿಗೆ ಬೆರೆಯುವುದನ್ನು ಖಂಡಿಸುವ ಭರದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಮಾನ್ ಅವರ ವಿರುದ್ಧ ಹರಿಹಾಯ್ದಿದ್ದು, ಅವರು ಅಫ್ಘಾನಿಸ್ತಾನಕ್ಕೆ ಹೋಗಲಿ ಎಂದು ವಾಗ್ದಾಳಿ ನಡೆಸಿವೆ. ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಇಮಾನ್, ಸಮಾಜವನ್ನು ಎಚ್ಚರಿಸಲು ಕಠಿಣ ಪದಗಳನ್ನು ಬಳಸಬೇಕಾಯಿತು ಎಂದು ಸಮರ್ಥನೆ ನೀಡಿದ್ದಾರೆ.
ವಿವಾದಾತ್ಮಕ ಹೇಳಿಕೆ: ಮದುವೆಗಳಲ್ಲಿ ಮುಖ ತೋರಿಸುವ ಆಚರಣೆ (ಮುಹ್ ದಿಕಾಯ್) ಮತ್ತು ವಧುಗಳು ಕುಳಿತುಕೊಳ್ಳುವ ರೀತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಳ್ಳುವ ತವಾಯಿಫ್‌ಗಳಿಗೆ ಹೋಲಿಸಿ ಅಖ್ತರುಲ್ ಇಮಾನ್ ವಿವಾದ ಸೃಷ್ಟಿಸಿದ್ದಾರೆ.
ಪುರುಷರ ವಿರುದ್ಧ ವಾಗ್ದಾಳಿ: ಮದುವೆಗಳಲ್ಲಿ ಪುರುಷರು ಹೆಣ್ಣು ಮಕ್ಕಳನ್ನು ನೋಡುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿ, ಈ ರೀತಿಯ ಮುಕ್ತ ಬೆರೆಯುವಿಕೆ ‘ಹಂದಿಗಳ’ ನಡವಳಿಕೆಯಂತೆ ಎಂದು ಕಠಿಣ ಪದಗಳನ್ನು ಬಳಸಿದ್ದಾರೆ.
ರಾಜಕೀಯ ಹಾಗೂ ಧಾರ್ಮಿಕ ಆಕ್ರೋಶ: ಇಮಾನ್ ಅವರ ಹೇಳಿಕೆಯನ್ನು ‘ಮೂರ್ಖತನದ ಮೌಲಾನಾ’ ಮಾತು ಎಂದು ಜರಿದಿರುವ ಬಿಜೆಪಿ, ಅವರಿಗೆ ತಾಕತ್ತಿದ್ದರೆ ಅಫ್ಘಾನಿಸ್ತಾನಕ್ಕೆ ಹೋಗಲಿ ಎಂದಿದೆ. ಇಸ್ಲಾಂ ಧರ್ಮ ಮಹಿಳೆಯರನ್ನು ಈ ರೀತಿ ಅವಮಾನಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಮುಮ್ತಾಜ್ ಪಟೇಲ್ ಖಂಡಿಸಿದ್ದಾರೆ.




