ಬಳ್ಳಾರಿ / ಹೊಸಪೇಟೆ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಶ್ರೀರಾಮ್ ಫೈನಾನ್ಷಿಯಲ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ನವೆಂಬರ್ 6 ರಂದು ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿದೆ. ನೇರ ಸಂದರ್ಶನವಿದ್ದು, ಉದ್ಯೋಗಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೊಸಪೇಟೆ, ಸಂಡೂರು, ತೋರಣಗಲ್ಲು, ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕುಗಳಲ್ಲಿ ಖಾಲಿ ಇರುವ ಕಸ್ಟಮರ್ ರಿಲೇಷನ್ಶಿಪ್ ಆಫೀಸರ್ (CRO) ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹೊಸಪೇಟೆಯ ಬಸವೇಶ್ವರ ಸರ್ಕಲ್ ಬಳಿಯಿರುವ ಸಂದರ್ಶನ ಸ್ಥಳದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆಧಾರ್ ಕಾರ್ಡ್ ಹಾಗೂ ಸ್ವ-ವಿವರಗಳ (Resume) ಪ್ರತಿಯೊಂದಿಗೆ ನೇರವಾಗಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುದ್ದೆಯ ವಿವರ: ಕಸ್ಟಮರ್ ರಿಲೇಷನ್ಶಿಪ್ ಆಫೀಸರ್ (Customer Relationship Officer) ಹುದ್ದೆಗಳು ಖಾಲಿ ಇದ್ದು, ಒಟ್ಟು 20 ಕ್ಕೂ ಹೆಚ್ಚು ಅವಕಾಶಗಳಿವೆ.
ವಿದ್ಯಾರ್ಹತೆ ಮತ್ತು ಅರ್ಹತೆ: ಪಿಯುಸಿ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿರಬೇಕು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿಚಕ್ರ ವಾಹನ (Two-wheeler) ಹೊಂದಿರಬೇಕು.
ಸಂದರ್ಶನ ಸ್ಥಳ ಹಾಗೂ ಸಂಪರ್ಕ: ಶ್ರೀರಾಮ್ ಫೈನಾನ್ಷಿಯಲ್ ಲಿಮಿಟೆಡ್, ಸಿದ್ಧಿ ಪ್ರಿಯ ಕಲ್ಯಾಣ ಮಂಟಪ ಪಕ್ಕದಲ್ಲಿ, ಬಸವೇಶ್ವರ ಸರ್ಕಲ್ ಡ್ಯಾಂಮ್ ರೋಡ್, ಹೊಸಪೇಟೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7619207762, 7676774293, 6360408094 ಸಂಪರ್ಕಿಸಬಹುದು.





Leave a comment