Home ಕ್ರೈಂ ನ್ಯೂಸ್ ಚಲಿಸುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಆಪರೇಷನ್ ಮಾತೃಶಕ್ತಿ ಮೂಲಕ ತಾಯಿ-ಮಗುವನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚಲಿಸುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಆಪರೇಷನ್ ಮಾತೃಶಕ್ತಿ ಮೂಲಕ ತಾಯಿ-ಮಗುವನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ!

Share
ಮಹಿಳೆ
Share

ಅಹಲ್ಯಾನಗರ: ಚಲಿಸುವ ರೈಲಿನಲ್ಲಿ ಗರ್ಭಿಣಿಯೊಬ್ಬರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ, ರೈಲ್ವೆ ಸುರಕ್ಷಾ ದಳದ (RPF) ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ಸಮಯೋಚಿತ ನೆರವಿನಿಂದ ರೈಲಿನಲ್ಲೇ ಸುರಕ್ಷಿತ ಹೆರಿಗೆಯಾದ ಘಟನೆ ನಡೆದಿದೆ. ಮಹಿಳೆ ಮತ್ತು ಮಗು ಅಪಾಯದಿಂದ ಪಾರಾದ ಘಟನೆ ಜರುಗಿದೆ.

ಘಟನೆಯ ವಿವರ:

ಪುಣೆಯಿಂದ ಬಿಹಾರದ ಸುಪೌಲ್‌ಗೆ ತೆರಳುತ್ತಿದ್ದ ‘ಪುಣೆ-ಸುಪೌಲ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಉತ್ತರ ಪ್ರದೇಶದ 28 ವರ್ಷದ ರುಖ್ಸಾನಾ ಖಾತುನ್ ತಮ್ಮ ಪತಿ ಜಮೀಲ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ರೈಲು ಅಹಲ್ಯಾನಗರ ನಿಲ್ದಾಣದ ಸಮೀಪ ಬರುತ್ತಿದ್ದಂತೆ ರುಖ್ಸಾನಾ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲು ವೇಗವಾಗಿ ಚಲಿಸುತ್ತಿದ್ದರಿಂದ ಮತ್ತು ಜನರಲ್ ಕೋಚ್ ಕಿಕ್ಕಿರಿದು ತುಂಬಿದ್ದರಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸುವುದು ಅಸಾಧ್ಯವಾಗಿತ್ತು.

ಆಪರೇಷನ್ ಮಾತೃಶಕ್ತಿ:

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮಧ್ಯ ರೈಲ್ವೆ ತಕ್ಷಣ ‘ಆಪರೇಷನ್ ಮಾತೃಶಕ್ತಿ’ ಸಕ್ರಿಯಗೊಳಿಸಿತು. ಆರ್‌ಪಿಎಫ್ ಕಾನ್ಸ್‌ಟೇಬಲ್ ಸೋಮನಾಥ್ ಪಾಠಡೆ ಮತ್ತು ಹೆಡ್ ಕಾನ್ಸ್‌ಟೇಬಲ್ ವಿಶ್ವಜೀತ್ ಕಾಕಡೆ ತಕ್ಷಣ ಬೋಗಿಗೆ ಧಾವಿಸಿದರು. ಮಹಿಳಾ ಪ್ರಯಾಣಿಕರ ಸಹಾಯದೊಂದಿಗೆ ಬೋಗಿಯಲ್ಲೇ ತಾತ್ಕಾಲಿಕ ಸುರಕ್ಷಿತ ಸ್ಥಳವನ್ನು ನಿರ್ಮಿಸಿ, ವೈದ್ಯಕೀಯ ನೆರವು ಬರುವ ಮೊದಲೇ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.

ತಾಯಿ-ಮಗು ಸುರಕ್ಷಿತ:

ರುಖ್ಸಾನಾ ಅವರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಅಳುವಿನ ಶಬ್ದ ಕೇಳುತ್ತಿದ್ದಂತೆ ಇಡೀ ಬೋಗಿಯಲ್ಲಿದ್ದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ರೈಲು ಅಹಲ್ಯಾನಗರ ನಿಲ್ದಾಣ ತಲುಪುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿದ್ಧವಾಗಿದ್ದ 108 ಆಂಬ್ಯುಲೆನ್ಸ್ ಮೂಲಕ ತಾಯಿ ಮತ್ತು ನವಜಾತ ಶಿಶುವನ್ನು ನಾಗರಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles